Gold Price: ಚಿನ್ನದ ಬೆಲೆ ಭರ್ಜರಿ ಇಳಿಕೆ ಗ್ಯಾರಂಟಿ!
ಚಿನ್ನ ಮಹಿಳೆಯರಿಗೆ ಮಾತ್ರ ಅಲ್ಲ ಹೂಡಿಕೆ ಮಾಡುವವರಿಗೆ ಕೂಡ ತುಂಬಾನೆ ಇಷ್ಟ ಇಷ್ಟ. ಯಾಕಂದ್ರೆ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಅತಿಹೆಚ್ಚು ಲಾಭ ಗಳಿಸಬಹುದು ಎಂಬುದು ನಂಬಿಕೆ. ಅದೇ ರೀತಿಯಾಗಿ ಚಿನ್ನದ ಮೇಲೆ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಿದೆ. ಚಿನ್ನದ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿದೆ. ಆದರೆ ಈಗ ಚಿನ್ನದ ಬೆಲೆ ಏರಿಕೆ ಕಂಡರೂ, ಚಿನ್ನದ ಬೆಲೆ ಇಳಿಕೆ ಆಗೋದು ಕೂಡ ಗ್ಯಾರಂಟಿ ಅಂತಿದ್ದಾರೆ ತಜ್ಞರು.
ಚಿನ್ನದ ಬೆಲೆ ಈಗಾಗಲೇ 75 ಸಾವಿರ ರೂಪಾಯಿ ಗಡಿ ಮುಟ್ಟಿ ಮತ್ತೆ ಇಳಿಕೆ ಕಂಡಿದೆ. ಈ ನಡುವೆ ಆಭರಣ ಚಿನ್ನ ಕೂಡ 70 ಸಾವಿರ ರೂಪಾಯಿ ಮುಟ್ಟುವ ಸಾಧ್ಯತೆ ಕೂಡ ಇದ್ದು, ಚಿನ್ನ ಇಷ್ಟಪಡುವ ಆಭರಣ ಪ್ರಿಯ ಮಹಿಳೆಯರಿಗೆ ಇದು ಬೇಸರ ತರಿಸಿತ್ತು. ಆದರೆ ಇದೀಗ ಬೇರೆಯದ್ದೇ ಸುದ್ದಿ ಸಿಗುತ್ತಿದೆ, ಅದು ಏನೆಂದರೆ ಮುಂದಿನ ಕೆಲವೇ ಕೆಲ ತಿಂಗಳಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆ ಕಾಣಲಿದೆ ಎನ್ನಲಾಗಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ತಣ್ಣಗಾಗುವ ಎಲ್ಲ ಲಕ್ಷಣ ಕಾಣುತ್ತಿದ್ದು, ತಜ್ಞರ ಪ್ರಕಾರ ಕೆಲವೇ ತಿಂಗಳಲ್ಲಿ ಚಿನ್ನ ಭಾರಿ ಇಳಿಕೆ ಕಾಣಲಿದೆ ಅಂತಾ ಹೇಳಲಾಗುತ್ತಿದೆ.

ಚಿನ್ನಕ್ಕೆ ಯಾಕೆ ಇಷ್ಟು ಬೇಡಿಕೆ?
ಜಾಗತಿಕವಾಗಿ ಯುದ್ಧ ಶುರುವಾದ್ರೆ ಮೊದಲು ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ & ಡೀಸೆಲ್ ಮೇಲೆ. ಯಾಕಂದ್ರೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ. ಹೀಗಾಗಿ ಯುದ್ಧ ಶುರುವಾದ ತಕ್ಷಣ, ಚಿನ್ನದ ರೂಪಕ್ಕೆ ತಮ್ಮ ಸಂಪತ್ತು ಅಂದರೆ ಹವಣವನ್ನ ಬದಲಾಯಿಸಿ ಸಂಗ್ರಹ ಮಾಡಲು ಜನ ಮುಂದಾಗುತ್ತಾರೆ. ಹಾಗೇ ದೇಶಗಳು ಕೂಡ ಅಪಾರ ಪ್ರಮಾಣದ ಚಿನ್ನವನ್ನ ಯುದ್ಧ ಸಮಯ ಬಂದಾಗ ಖರಿದಿ ಮಾಡುತ್ತವೆ. ಇದೇ ಹಿನ್ನೆಲೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿತ್ತು. ಆದರೆ ಇದೀಗ ಯುದ್ಧದ ಕಾರ್ಮೋಡ ಕರಗುತ್ತಿದ್ದು, ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ.
ಚಿನ್ನ ಇದ್ದರೆ ಎಲ್ಲವೂ ಸುಲಭ!
ಪ್ರಪಂಚದ ಮಟ್ಟದಲ್ಲಿ ಚಿನ್ನಕ್ಕೆ ಯಾಕೆ ಇಷ್ಟು ಬೆಲೆ ಬಂದಿದೆ ಎಂದರೆ ಯುದ್ಧಗಳು ಶುರುವಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಇಲ್ಲವಾಗಿದ್ದು. ಈ ಕಾರಣಕ್ಕೆ ಈಗ ಚಿನ್ನದ ಮೇಲೆ ಜನರಿಗೆ ತುಂಬಾ ನಂಬಿಕೆ ಬಂದಿದೆ. ಹೀಗಾಗಿ ಜನ ಕೂಡ ಚಿನ್ನ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಚಿನ್ನ ಸಾಕಷ್ಟು ಏರಿಕೆ ಕಂಡಿತ್ತು. ಆದರೆ, ಇದೀಗ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ. ಪ್ರಮುಖವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವ ಹೂಡಿಕೆದಾರರ ಸಂಖ್ಯೆ ಕಡಿಮೆ ಆಗುತ್ತಿದ್ದು, ಚಿನ್ನ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ.
ಚಿನ್ನ ಇದ್ದರೆ ಕಷ್ಟಕಾಲದ ಬಂಧು!
ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ, ಅದರಲ್ಲೂ ಆಭರಣಗಳನ್ನು ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಎಲ್ಲೂ ಹಣವನ್ನು ಹೊಂದಿಸಲು ಆಗದ ಸ್ಥಿತಿ ಬಂದಾಗ, ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅಡ ಇಟ್ಟು ಅಥವಾ ಚಿನ್ನ ಮಾರಿ ಹಣ ಪಡೆಯಬಹುದು. ಈ ಮೂಲಕ ತುರ್ತು ಸಮಯದಲ್ಲಿ ಜೀವ ಉಳಿಸೋದಕ್ಕೆ ಚಿನ್ನ ಸಹಾಯಕ. ಈ ಎಲ್ಲಾ ಕಾರಣಕ್ಕೆ ಚಿನ್ನ ಖರೀದಿ ಅಥವಾ ಚಿನ್ನದ ಮೇಲೆಯೇ ಈ ರೀತಿ ಹೆಚ್ಚಾಗಿ ಹೂಡಿಕೆ ಮಾಡಲು ಪ್ರಮುಖ ಕಾರಣ ಎನ್ನಲಾಗುತ್ತದೆ.
ಚಿನ್ನ ಇಲ್ಲದೆ ಏನೂ ನಡೆಯಲ್ಲ!
ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಅದೆಷ್ಟು ಮುಖ್ಯ ಎಂದರೆ, ಚಿನ್ನವು ಇಲ್ಲದೆ ಏನೂ ನಡೆಯಲ್ಲ ಎನ್ನಬಹುದು. ಯಾಕಂದ್ರೆ ಚಿನ್ನ ಆಭರಣವಾಗಿ ಮಾತ್ರವಲ್ಲ, ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಕೂಡ ಬಳಕೆ ಮಾಡಲಾಗುತ್ತೆ. ಮೊಬೈಲ್ ಸೇರಿದಂತೆ, ಹಲವು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಗೆ ಕೂಡ ಚಿನ್ನ ಬೇಕೆ ಬೇಕಾಗುತ್ತೆ. ಹೀಗಾಗಿಯೇ ಚಿನ್ನ ಈಗ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡಿದೆ. ಹೀಗೆಯೇ, ಎಲ್ಲಾ ಕಡೆಯಿಂದ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ, ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದ್ದು. ಮುಂದೆ ಇನ್ನಷ್ಟು ಏರಿಳಿತ ಕಾಣಬಹುದು ಅಂತಾರೆ ತಜ್ಞರು.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು. ಇದು ಆಭರಣ ಪ್ರಿಯರಿಗೆ ಬೇಸರ ತರಿಸಿದರೂ, ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆ ಖುಷಿ ನೀಡುತ್ತಿದೆ.












Click it and Unblock the Notifications