ಚಿನ್ನ 50,000 ರೂಪಾಯಿಗೆ ವಾಪಸ್? ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ?

ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕುಸಿತ ಕಾಣುತ್ತಿದೆ. ಹೀಗೆ ಚಿನ್ನವು ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿರುವ ಕಾರಣಕ್ಕೆ ಆಭರಣ ಪ್ರಿಯರ ಗಮನ ಕೂಡ ಈ ಹಳದಿ ಲೋಹದ ಕಡೆಗೆ ನೆಟ್ಟಿದೆ. ಹೀಗಿದ್ದಾಗಲೇ ಚಿನ್ನದ ಬೆಲೆ ಕುಸಿಯುತ್ತಾ ಹೋಗಿ, ಕೆಲ ದಿನಗಳಲ್ಲಿ 50,000 ರೂಪಾಯಿಗೆ ವಾಪಸ್ ಬರುತ್ತಾ? ಅನ್ನೋ ಪ್ರಶ್ನೆ ಕೂಡ ಈಗ ಉದ್ಭವಿಸಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?

ಹೌದು, ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಕಾರಣಕ್ಕೆ ಆಭರಣ ಪ್ರಿಯರಿಗೆ ಈ ಸುದ್ದಿ ಆಘಾತ ನೀಡುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಮತ್ತೆ ಚಿನ್ನದ ಬೆಲೆ ಕುಸಿತದ ಹಾದಿಯ ಹಿಡಿಯಿತು. ಹೀಗೆ ನೋಡ ನೋಡುತ್ತಲೇ ಕಳೆದ 1 ವಾರದಿಂದ ಚಿನ್ನದ ಬೆಲೆ ನಿರಂತರವಾಗಿ ಇಳಿಕೆ ಕಾಣಲು ಆರಂಭ ಆಯಿತು. ಕೆಲವು ದಿನಗಳ ಹಿಂದೆ ಚಿನ್ನ ಮತ್ತಷ್ಟು ಕುಸಿತ ಕಂಡು ಈಗ ಹೊಸ ಹೊಸ ದಾಖಲೆ ಬರೆಯುತ್ತಿದೆ. ಹಾಗಾದ್ರೆ ಚಿನ್ನದ ಬೆಲೆ 50,000 ರೂಪಾಯಿಗೆ ವಾಪಸ್ ಬರುತ್ತಾ? ಮುಂದೆ ಓದಿ.

Gold Price May Decrease And Come Back To 50000 Rupees

ಚಿನ್ನದ ಬೆಲೆ ಈಗ ಎಷ್ಟಿದೆ?

ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದು, ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 4000 ರೂಪಾಯಿ ಕುಸಿತ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 400 ರೂ. ನಷ್ಟು ಕಡಿತವಾಗಿದೆ. ಹೀಗೆ ಆಭರಣ ಚಿನ್ನದ ಬೆಲೆ ಕುಸಿತದ ನಂತರ ಪ್ರತಿ 10 ಗ್ರಾಂಗೆ 66,700 ರೂ. ಬೆಲೆ ಇದೆ. 24 ಕ್ಯಾರೆಟ್‌ನ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದ್ದು, ಈಗ 24 ಕ್ಯಾರೆಟ್ ಚಿನ್ನದ ಬೆಲೆ 4,400 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಇದೀಗ 24 ಕ್ಯಾರೆಟ್ ಚಿನ್ನದ ಬೆಲೆ 72760 ರೂಪಾಯಿ ಆಗಿದೆ. ಹಾಗೇ 18 ಕ್ಯಾರೆಟ್ ಚಿನ್ನದ ಬೆಲೆ 3,300 ರೂಪಾಯಿ ಕುಸಿತ ಕಂಡು ಪ್ರತಿ 10 ಗ್ರಾಂಗೆ 54,570 ರೂಪಾಯಿ ಮಾರಾಟ ಆಗುತ್ತಿದೆ.

50 ಸಾವಿರ ರೂಪಾಯಿಗೆ ಚಿನ್ನ?

ಹೂಡಿಕೆ ಮಾಡುವವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ ಆಗುತ್ತದೆ, ಹೀಗಿದ್ರೂ ಸಾಮಾನ್ಯವಾಗಿ ಆಭರಣ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಖುಷಿ. ಹೀಗಾಗಿ ಚಿನ್ನದ ಬೆಲೆ ಕಳೆದ 1 ತಿಂಗಳಿಂದ ಭಾರಿ ಏರಿಳಿತ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಕುಸಿತ ಕಂಡು ಆ ನಂತರ, ಮತ್ತೆ ಏರಿಕೆಯ ಹಾದಿಗೆ ಮರಳುತ್ತೆ ಎಂದು ಹೇಳುತ್ತಿದ್ದರು ತಜ್ಞರು. ಆದ್ರೆ ಈಗ ಚಿನ್ನ ಮತ್ತೆ 50 ಸಾವಿರ ರೂಪಾಯಿಗೆ ಕುಸಿತ ಕಾಣಲಿದೆ ಎಂಬ ಮಾತುಗಳು ಓಡಾಡುತ್ತಿವೆ. ಈ ಪ್ರಶ್ನೆಗಳಿಗೆ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗಲಿದೆ.

ಚಿನ್ನ ಇದ್ದರೆ ಕಷ್ಟಕಾಲದ ಬಂಧು!

ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ, ಅದರಲ್ಲೂ ಆಭರಣಗಳನ್ನು ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಎಲ್ಲೂ ಹಣವನ್ನು ಹೊಂದಿಸಲು ಆಗದ ಸ್ಥಿತಿ ಬಂದಾಗ, ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅಡ ಇಟ್ಟು ಅಥವಾ ಚಿನ್ನ ಮಾರಿ ಹಣ ಪಡೆಯಬಹುದು. ಈ ಮೂಲಕ ತುರ್ತು ಸಮಯದಲ್ಲಿ ಜೀವ ಉಳಿಸೋದಕ್ಕೆ ಚಿನ್ನ ಸಹಾಯಕ. ಈ ಎಲ್ಲಾ ಕಾರಣಕ್ಕೆ ಚಿನ್ನ ಖರೀದಿ ಅಥವಾ ಚಿನ್ನದ ಮೇಲೆಯೇ ಈ ರೀತಿ ಹೆಚ್ಚಾಗಿ ಹೂಡಿಕೆ ಮಾಡಲು ಪ್ರಮುಖ ಕಾರಣ ಎನ್ನಲಾಗುತ್ತದೆ.

ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿ ಮುಂದುವರಿದಿದ್ದು, ಏಪ್ರಿಲ್ ತಿಂಗಳು ಪೂರ್ತಿ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿತ್ತು. ಹಾಗೇ 2024ರ ಮೇ ತಿಂಗಳಲ್ಲಿ ಕೂಡ ಚಿನ್ನದ ಬೆಲೆ ಏರಿಳಿತ ಕಂಡು ಗಮನ ಸೆಳೆದಿತ್ತು. ಆದರೆ ಈಗ ಜೂನ್ ತಿಂಗಳ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ ಕಾಣುತ್ತಿದ್ದು, ಒಂದೇ ದಿನ 2100 ರೂಪಾಯಿ ಕುಸಿತ ಕಂಡಿದೆ.

ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ಪ್ರಾಣ, ಅದರಲ್ಲೂ ಆಭರಣ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡ್ತಾರೆ. ಹೀಗೆ, ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇದೆ. ಇದೆಲ್ಲವನ್ನ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಎಲ್ಲೂ ಹಣ ಹೊಂದಿಸಲು ಆಗದ ಸ್ಥಿತಿ ಬಂದಾಗ, ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅಡ ಇಟ್ಟು ಅಥವಾ ಚಿನ್ನ ಮಾರಿ ಹಣ ಪಡೆಯಬಹುದು.

ಚಿನ್ನ ಈಗ ಅಂತಾರಾಷ್ಟ್ರೀಯ ಕರೆನ್ಸಿ?

ಪ್ರಪಂಚದ ಮಟ್ಟದಲ್ಲಿ ಈಗ ಚಿನ್ನಕ್ಕೆ ಯಾಕೆ ಇಷ್ಟು ಬೆಲೆ ಬಂದಿದೆ ಎಂದರೆ, ಯುದ್ಧಗಳು ಶುರುವಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಇಲ್ಲವಾಗಿದ್ದು. ಈ ಕಾರಣಕ್ಕೆ ಈಗ ಚಿನ್ನದ ಮೇಲೆ ಜನರಿಗೆ ತುಂಬಾ ನಂಬಿಕೆ ಬಂದಿದೆ. ಹೀಗಾಗಿ ಜನರು ಕೂಡ ಚಿನ್ನ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಚಿನ್ನ ಸಾಕಷ್ಟು ಏರಿಕೆ ಕಂಡಿತ್ತು. ಆದರೆ, ಇದೀಗ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಇಸ್ರೇಲ್ & ಇರಾನ್ ಯುದ್ಧ ನಡೆಯಲ್ಲ ಎಂಬ ನಂಬಿಕೆ ಸಿಕ್ಕ ನಂತರ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಕೂಡ ಚಿನ್ನ ಖರೀದಿಯನ್ನು ಆರಾಮವಾಗಿ ಮಾಡಬಹುದು.

ಚಿನ್ನದ ಇತಿಹಾಸವೇ ಚೆನ್ನ!

ಚಿನ್ನದ ಬಗ್ಗೆ ಹೇಳುತ್ತಾ ಹೋದರೆ ಒಂದು ಪುಸ್ತಕವನ್ನೇ ಬರೆಯಬಹುದು. ಯಾಕಂದ್ರೆ ಈ ಅಮೂಲ್ಯ ವಸ್ತು ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಸಾಕಷ್ಟು ವಿಧದಲ್ಲಿ ಆಧಾರವಾಗಿ ನಿಂತಿದೆ. ಸಾವಿರಾರು ವರ್ಷಗಳಿಂದ ಮನುಷ್ಯರ ಜೀವನದಲ್ಲಿ ಚಿನ್ನ ಬೆರೆತು ಹೋಗಿದೆ. ಈ ಪೈಕಿ ಭಾರತೀಯ ಸಂಪ್ರದಾಯದ ಪ್ರಕಾರ, ಯಾವುದೇ ರೀತಿಯ ಶುಭಕಾರ್ಯ ನಡೆಯಲು ಚಿನ್ನ ಅತ್ಯಗತ್ಯ. ಚಿನ್ನ ಇಲ್ಲದೆ ಶುಭಕಾರ್ಯ ನಡೆಯುವುದಿಲ್ಲ ಎನ್ನಬಹುದು. ಈ ಹಿನ್ನೆಲೆ ಭಾರತದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಹೀಗಿದ್ದಾಗ ಏಪ್ರಿಲ್ ತಿಂಗಳಲ್ಲಿ ಭಾರಿ ಏರಿಕೆಯ ಹಾದಿ ಹಿಡಿದಿದ್ದ ಚಿನ್ನ ಈಗ ಭಾರಿ ಇಳಿಕೆ ಆಗುತ್ತಿದೆ.

ದೇಶದ ಆರ್ಥಿಕತೆ ನಿರ್ಧರಿಸುತ್ತದೆ!

ಚಿನ್ನ ಕೇವಲ ಒಂದು ಲೋಹವಲ್ಲ, ಚಿನ್ನ ಎಂಬುದು ಒಂದು ಅಪರೂಪದ ವಸ್ತು ಕೂಡ. ಚಿನ್ನ ಆಭರಣಕ್ಕೆ ಮಾತ್ರವಲ್ಲ, ಹಲವು ವಿಚಾರದಲ್ಲೂ ಬಳಕೆ ಆಗುತ್ತದೆ. ಈ ಅಮೂಲ್ಯ & ಅಪರೂಪದ ಲೋಹವನ್ನು ಪ್ರತಿಯೊಂದು ದೇಶವೂ ರಕ್ಷಣೆ ಮಾಡುತ್ತದೆ. ಅದ್ರಲ್ಲೂ ಚಿನ್ನ ಖರೀದಿ ಮಾಡಿ ಸಂಗ್ರಹ ಮಾಡುವುದು ಕೂಡ ಪ್ರತಿಯೊಂದು ದೇಶದ ಆರ್ಥಿಕತೆ ರಕ್ಷಿಸುವಲ್ಲಿ ಪ್ರಮುಖ ಪಾತ್ರ ಬೀರುತ್ತದೆ. ಶ್ರೀಮಂತ ದೇಶಗಳು ಚಿನ್ನ ಖರೀದಿ ಮಾಡಿ ಅದನ್ನ ರಕ್ಷಿಸುತ್ತವೆ.

ಬೆಳ್ಳಿ ಬೆಲೆಯಲ್ಲಿ ದಿಢೀರ್ ಇಳಿಕೆ!

ಚಿನ್ನ ಬಹು ಬೇಡಿಕೆಯ ವಸ್ತು, ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನಗಳು ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ ಹತ್ತಿರ ಹತ್ತಿರ 1 ಲಕ್ಷ ರೂಪಾಯಿಗೆ ತಲುಪಿತ್ತು ಇಂತಹ ಸ್ಥಿತಿಯಲ್ಲಿ ಈಗ ದಿಢೀರ್ ಬೆಳ್ಳಿ ಬೆಲೆಯಲ್ಲಿ 1200 ರೂಪಾಯಿ ಕುಸಿತ ಕಂಡಿದೆ! ಮುಂದಿನ ದಿನಗಳಲ್ಲಿ ಬೆಳ್ಳಿಯ ಬೆಲೆ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆಯು ಇದೆ. ಈ ನಡುವೆ ಬೆಳ್ಳಿ ಬೆಲೆ ಒಂದಷ್ಟು ಇಳಿಕೆ ಕಂಡಿರುವುದು, ಬೆಳ್ಳಿ ಇಷ್ಟಪಡುವವರಿಗೆ ಒಂದಷ್ಟು ಖುಷಿ ಕೊಟ್ಟಿದೆ.

ಚಿನ್ನದ ಬೆಲೆಯಲ್ಲಿ ಏರಿಳಿತ?

ಚಿನ್ನ.. ಚಿನ್ನ.. ಚಿನ್ನ.. ಮಹಿಳೆಯರಿಗೆ ಚಿನ್ನದ ಮೇಲೆ ಬೆಟ್ಟದಷ್ಟು ಪ್ರೀತಿ ಇರುತ್ತೆ. ಹೀಗೆ ಕೆಜಿ ಕೆಜಿ ಚಿನ್ನ ಇದ್ದರೂ ಮತ್ತಷ್ಟು ಚಿನ್ನ ಬೇಕು ಎಂಬ ಆಸೆ ಪ್ರತಿಯೊಬ್ಬ ಮಹಿಳೆಯರಲ್ಲಿ ಕೂಡ ಇರುತ್ತದೆ. ಜೊತೆಗೆ ಹೂಡಿಕೆ ಮಾಡುವವರಿಗೆ ಕೂಡ ಚಿನ್ನ ಬೆಸ್ಟ್ ಆಯ್ಕೆ. ಹೀಗೆ ಚಿನ್ನ ಎಲ್ಲೆಲ್ಲೂ ಸದ್ದು ಮಾಡುತ್ತಿರುವ ಸಮಯದಲ್ಲೇ ದಿಢೀರ್ ಏರಿಳಿತ ಕಾಣುತ್ತಿದೆ. ಈ ಮೂಲಕ ಚಿನ್ನ ಭಾರಿ ಗಮನ ಸೆಳೆಯುತ್ತಿದೆ. ಹಾಗೇ ಇದೇ ರೀತಿ ಇನ್ನೂ ಹಲವು ತಿಂಗಳ ಕಾಲ ಚಿನ್ನದ ಬೆಲೆಯಲ್ಲಿ ಇದೇ ರೀತಿ ಏರಿಳಿತ ಕಾಣುವ ನಿರೀಕ್ಷೆ ಕೂಡ ಇದೆ.

ಲಕ್ಷ.. ಲಕ್ಷ.. ರೂಪಾಯಿ ಬೆಲೆ!

ಚಿನ್ನ ಬಹು ಬೇಡಿಕೆಯ ವಸ್ತು, ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನಗಳು ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ, ಹತ್ತಿರ ಹತ್ತಿರ 1 ಲಕ್ಷ ರೂಪಾಯಿಗೆ ತಲುಪಿತ್ತು. ಆದರೆ ಕಳೆದ ವಾರ ಒಂದಷ್ಟು ಕುಸಿತ ಕಂಡ ಬೆಳ್ಳಿ ಬೆಲೆ ಇದೀಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಒಂದೇ ದಿನ ಭಾರಿ ಏರಿಕೆ ಕಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಬೆಳ್ಳಿ ಬೆಲೆ ಏರಿಕೆ ಕಾಣುವ ಸಾಧ್ಯತೆ ಇದೆ.

ಭಾರತಕ್ಕೂ ಇದೆ ದೊಡ್ಡ ಇತಿಹಾಸ!

ಜಾಗತಿಕ ಮಟ್ಟದಲ್ಲಿ ಚಿನ್ನ ಬಳಕೆಯ ವಿಚಾರದಲ್ಲಿ ಭಾರತೀಯರೇ ಮುಂದೆ ಇದ್ದಾರೆ. ಈ ಹೆಮ್ಮೆ ಇಂದು ಅಥವಾ ನಿನ್ನೆಯದ್ದಲ್ಲ. ಸಾವಿರಾರು ವರ್ಷಗಳಿಂದ ಕೂಡ ಭಾರತದಲ್ಲಿ ಹೀಗೆ ಚಿನ್ನವನ್ನು ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಚಿನ್ನವನ್ನ ವ್ಯಾಪಾರದ ಉದ್ದೇಶಕ್ಕಾಗಿ, ಭಾರತದಲ್ಲಿ ಈ ಹಿಂದಿನಿಂದ ಕೂಡ ಬಳಕೆ ಮಾಡಿಕೊಂಡು ಬರಲಾಗುತ್ತಿತ್ತು. ಆಗಿನ ಕರೆನ್ಸಿ ಅಂದ್ರೆ ನಾಣ್ಯಗಳ ಮುದ್ರಣಕ್ಕೆ ಕೂಡ ಚಿನ್ನವನ್ನು ಬಳಕೆ ಮಾಡಲಾಗುತ್ತಿತ್ತು. ಹೀಗೆ ನಮ್ಮ ನೆಲದ ಜೊತೆಯಲ್ಲೇ ಚಿನ್ನವು ಕೂಡ ಬೆರೆತು ಹೋಗಿದೆ. ಹೀಗಾಗಿಯೇ ಇಂದಿಗು ಕೂಡ ಈ ವಿಚಾರದಲ್ಲಿ ಭಾರತ ಮುಂದೆ ಇದ್ದು, ಅಪಾರ ಪ್ರಮಾಣದ ಚಿನ್ನವನ್ನು ಭಾರತ ಪ್ರತಿವರ್ಷ ಆಮದು ಮಾಡಿಕೊಳ್ಳುತ್ತದೆ.

ಚಿನ್ನದ ಬೆಲೆ 1 ಲಕ್ಷ ರೂಪಾಯಿ ಆಗುತ್ತಾ?

ಚಿನ್ನ ಅನ್ನೋದು ಹೂಡಿಕೆ ಮಾಡುವವರಿಗೆ ಖಜಾನೆಯೇ ಎನ್ನುವಂತಾಗಿದೆ. ಯಾಕಂದ್ರೆ ಹಳದಿ ಲೋಹ ಅಂದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಯಾರಿಗೆ ಆದರೂ ಲಾಭ ಗ್ಯಾರಂಟಿ. ಹೀಗೆ ಚಿನ್ನ ಅನ್ನೋದು ಹೂಡಿಕೆದಾರರ ಜೇಬು ತುಂಬಿಸುವ ಅಕ್ಷಯ ಪಾತ್ರೆ ಆಗುತ್ತಿದೆ. ಆದರೆ ಚಿನ್ನ ಇಷ್ಟಪಡುವ ಮಹಿಳೆಯರಿಗೆ ಈ ವರ್ಷ ಆಘಾತ ಎದುರಾಗುವುದು ಗ್ಯಾರಂಟಿ ಅಂತಿದ್ದಾರೆ ತಜ್ಞರು. ಯಾಕಂದ್ರೆ ಚಿನ್ನದ ಬೆಲೆ ಈ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಹೆಚ್ಚಿದೆ. ಮತ್ತೊಂದು ಕಡೆ ಸದ್ಯದ ಸ್ಥಿತಿಯಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದು ಚಿನ್ನ ಇಷ್ಟಪಡುವ ಮಹಿಳೆಯರಿಗೆ ಹಾಗೂ ಚಿನ್ನ ಪ್ರಿಯರಿಗೆ ಸಖತ್ ಸುದ್ದಿ ನೀಡಿದಂತೆ ಆಗಿದೆ.

ಚಿನ್ನದ ಬೆಲೆ 2 ಲಕ್ಷ ರೂಪಾಯಿ?

ಹೀಗಾಗಿಯೇ ಕಳೆದ ಕೆಲವು ತಿಂಗಳಿಂದಲು ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಆದರೆ ಜೂನ್ ಆರಂಭದಲ್ಲೇ ಚಿನ್ನದ ಬೆಲೆ ಒಂದಷ್ಟು ಕಡಿಮೆ ಆಗಿತ್ತು. ಈಗ ಮತ್ತೆ ಭಾರಿ ಏರಿಕೆ ಕಾಣುತ್ತಿದೆ. ಅದರಲ್ಲೂ ಇರಾನ್ & ಇಸ್ರೇಲ್ ನಡುವೆ ಯುದ್ಧದ ಸ್ಥಿತಿ ನಿರ್ಮಾಣವಾಗಿ ಭಯ ಹುಟ್ಟಿಸಿತ್ತು. ಈ ಕಾರಣಕ್ಕೆ, ಚಿನ್ನದ ಬೆಲೆ ಮುಂದಿನ ಕೆಲವೇ ವರ್ಷದಲ್ಲಿ 2 ಲಕ್ಷ ರೂಪಾಯಿಗೆ ತಲುಪುವ ಸಾಧ್ಯತೆ ಕೂಡ ದಟ್ಟವಾಗಿದೆ.

5000 ವರ್ಷಗಳಿಂದ ಚಿನ್ನದ ಬಳಕೆ!

ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು. ಇದು ಆಭರಣ ಪ್ರಿಯರಿಗೆ ಬೇಸರ ತರಿಸಿದರೂ, ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆ ಖುಷಿ ನೀಡುತ್ತಿದೆ.

ಚಿನ್ನದ ಬೆಲೆ ಕುಸಿದಿದ್ದು ಏಕೆ?

ಚರಿತ್ರೆಯಲ್ಲಿ ಯುದ್ಧಗಳು ನಡೆದಿರುವುದು ಚಿನ್ನಕ್ಕಾಗಿ ಹಾಗೂ ಅಮೂಲ್ಯ ವಸ್ತುಗಳಿಗೆ ಮಾತ್ರ. ಚಿನ್ನ ಒಂದು ಕಾಲದಲ್ಲಿ ನಾಣ್ಯ ಕೂಡ ಆಗಿತ್ತು. ಇದೀಗ ಚಿನ್ನ ಅನ್ನೋದು ಆಭರಣವಾಗಿ & ಬ್ಯಾಂಕ್ ಲಾಕರ್ ಒಳಗೆ ಮಾತ್ರ ಕಾಣಲು ಸಾಧ್ಯ. ಈ ಕಾರಣಕ್ಕೆ, ಚಿನ್ನ ಅನ್ನೋ ಹಳದಿ ಲೋಹದ ಬೆಲೆ ಆಕಾಶ ಮುಟ್ಟುತ್ತಿತ್ತು. ಆದರೆ ಈಗ ದಿಢೀರ್ ಅಂತಾ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಆಗಿದೆ. ಅದರಲ್ಲೂ ಒಂದೇ ದಿನ ಚಿನ್ನದ ಬೆಲೆ ಭರ್ಜರಿ 20,000 ರೂಪಾಯಿ ಕುಸಿತವನ್ನು ಕಂಡು ಆಭರಣ ಪ್ರಿಯರಿಗೆ ಭರ್ಜರಿ ಸುದ್ದಿ ನೀಡಿದೆ. ಮುಂದಿನ ದಿನಗಳಲ್ಲಿ, ಚಿನ್ನದ ಬೆಲೆಯ ಬಗ್ಗೆ ಚಿಂತೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+