Gold Price: ಚಿನ್ನದ ಬೆಲೆ 1,10,000 ರೂಪಾಯಿ ಕಡೆಗೆ, ಎದುರಾಯ್ತು ಹೊಸ ಆಘಾತ...

ಚಿನ್ನ ಬೆಲೆ ಕೈಗೆ ಸಿಗದ ಸ್ಥಿತಿ ಎದುರಾಗುತ್ತಿದ್ದು, ಈ ರೀತಿ ಏರಿಕೆ ಕಾಣುತ್ತಿರುವ ಚಿನ್ನ ಖರೀದಿ ಮಾಡುವುದೇ ಮಧ್ಯಮ ವರ್ಗ & ಬಡವರಿಗೆ ಸಿಕ್ಕಾಪಟ್ಟೆ ಕಷ್ಟವಾಗುತ್ತಿದೆ. ಇನ್ನೇನು ಮದುವೆಗಳು ಶುರುವಾಗುವ ಹಿನ್ನೆಲೆ ಈಗಲೇ ಚಿನ್ನ ಆಭರಣ ಮಾಡಿಸಲು ಅಡ್ವಾನ್ಸ್ ಕೊಡಲು ಕೂಡ ಯೋಚನೆ ಮಾಡುವಂತೆ ಆಗುತ್ತಿದೆ. ಈ ಎಲ್ಲಾ ಕಾರಣಗಳಿಗೆ ಇದೀಗ ಚಿನ್ನ & ಬೆಳ್ಳಿ ಬೆಲೆ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿ ಇದೆ. ಮತ್ತೊಂದು ಕಡೆ ಚಿನ್ನದ ಬೆಲೆ ಹೀಗೆ ನಿರಂತರವಾಗಿ ಭಾರಿ ಏರಿಕೆ ಕಂಡಿರುವ ಕಾರಣಕ್ಕೆ ಕುಸಿತ ಕಾಣುವ ನಿರೀಕ್ಷೆ ಕೂಡ ಇದೆ ಅಂತಿದ್ದಾರೆ ತಜ್ಞರು. ಹೀಗಿದ್ದಾಗಲೇ, ಚಿನ್ನದ ಬೆಲೆ 1,10,000 ರೂಪಾಯಿ ಕಡೆಗೆ ನುಗ್ಗುತ್ತಿದೆ!

ಹೌದು, ಚಿನ್ನ.. ಚಿನ್ನ.. ಅಂತಾ ಕನವರಿಸುತ್ತಿದ್ದ ಆಭರಣ ಪ್ರಿಯರಿಗೆ ಇದೀಗ ಮತ್ತೊಂದು ಆಘಾತವೇ ಎದುರಾಗಿಬಿಟ್ಟಿದೆ. ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಆಗಬಹುದು, ಯಾಕಂದ್ರೆ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಇರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಅಂತಾ ಜನರು ಕಾಯುತ್ತಿದ್ದರು. ಹೀಗೆ ಎಲ್ಲಾ ನಿರೀಕ್ಷೆಗಳನ್ನೂ ಮೀರಿ ಮತ್ತೊಮ್ಮೆ ಚಿನ್ನದ ಬೆಲೆಯು ದಾಖಲೆ ಪ್ರಮಾಣದಲ್ಲಿ ಏರಿಕೆಯನ್ನ ಕಂಡು ಆಘಾತ ನೀಡುತ್ತಿದೆ. ಅದರಲ್ಲೂ 1 ಲಕ್ಷ ರೂಪಾಯಿ ಗಡಿಯನ್ನು ದಾಟಿ ಹೋಗಿರುವ ಚಿನ್ನದ ಬೆಲೆಯು ಇನ್ನೇನು 1,10,000 ರೂಪಾಯಿ ಕೂಡ ಆಗಲಿದೆಯಂತೆ! ಅರೆರೆ ಹಾಗಾದ್ರೆ ಇದು ಯಾವಾಗ ಆಗಬಹುದು? ಅಂತಾ ಯೋಚನೆ ಮಾಡುತ್ತಿದ್ರಾ? ಮುಂದೆ ಓದಿ.

Gold Price May Be To Reach 1 10 000 Rupees Very Soon

ಚಿನ್ನದ ಬೆಲೆ 1,10,000 ರೂಪಾಯಿ?

ಭಾರತ ದೇಶದಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನಮಾನ ಇದ್ದು, ಭಾರತೀಯರು ಕೈಯಲ್ಲಿ ಕೋಟಿ ರೂಪಾಯಿಯಿಂದ ಹಿಡಿದು ಲಕ್ಷ ಲಕ್ಷ ರೂಪಾಯಿ ಇದ್ದರೂ ಕಡೆಗೆ ಸಾವಿರಾರು ರೂಪಾಯಿ ಆದರೂ ಉಳಿತಾಯ ಮಾಡಿದ ಕಾಸು ಇದ್ದಾಗ ಚಿನ್ನ ಖರೀದಿಗೆ ಮೊದಲ ಆದ್ಯತೆ ನೀಡುತ್ತಾರೆ. ಯಾಕಂದ್ರೆ ಚಿನ್ನದ ಬೆಲೆ ಎಂದಿಗೂ ಕಡಿಮೆ ಆಗಲ್ಲ, ಬದಲಾಗಿ ಚಿನ್ನ & ಬೆಳ್ಳಿ ಮೇಲೆ ಹೂಡಿಕೆ ಮಾಡಿದರೆ ಅದು ಬೆಳೆಯುತ್ತಾ ಹೋಗುತ್ತದೆ ಅನ್ನೋದು ನಮ್ಮ ಶತಕೋಟಿ ಭಾರತೀಯರ ನಂಬಿಕೆ. ಇಂತಹ ಸಮಯದಲ್ಲೇ ಮದುವೆಗಳ ಸೀಸನ್ ಕೂಡ ಬಂದಿದ್ದು, ಈಗ ದಿಢೀರ್ ಚಿನ್ನದ ಬೆಲೆ ಚಿನ್ನದ ಬೆಲೆ 1,10,000 ರೂಪಾಯಿಗೆ ಏರಿಕೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+