Gold Price: ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ ಕಾಣುವುದು....
ಚಿನ್ನ ಖರೀದಿಗೆ ಕಾಯುತ್ತಿರುವ ಆಭರಣ ಪ್ರಿಯರಿಗೆ ಬಂಗಾರದ ಬೆಲೆ ಏರಿಕೆ ಪರಿಣಾಮವಾಗಿ ದೊಡ್ಡ ಚಿಂತೆ ಶುರುವಾಗಿತ್ತು. ಚಿನ್ನದ ಬೆಲೆ ಇದೇ ರೀತಿಯಾಗಿ ಏರಿಕೆ ಕಾಣುತ್ತಾ ಹೋದ್ರೆ ಮುಂದೆ ಏನಪ್ಪಾ? ಎನ್ನುವ ಚಿಂತೆ ಕೂಡ ಆಭರಣ ಪ್ರಿಯರಲ್ಲಿ ಶುರುವಾಗಿತ್ತು. ಆದರೆ ಈ ರೀತಿ ಚಿಂತೆ ಮಾಡುತ್ತಿದ್ದ ಚಿನ್ನ ಅಥವಾ ಆಭರಣ ಪ್ರಿಯರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದೆ. ಅಂದಹಾಗೆ, ಸಿಕ್ಕಾಪಟ್ಟೆ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಲಗಾಮು ಬೀಳಲಿದೆ & ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ ಕಾಣುವುದು....
ಸಾವಿರಾರು ವರ್ಷದಿಂದಲೂ ಚಿನ್ನ ಒಂದು ಅಮೂಲ್ಯ ವಸ್ತು. ವಾತಾವರಣದಲ್ಲಿ ಬೇಗನೆ ಬೇರೆ ವಸ್ತುಗಳ ಜೊತೆಯಲ್ಲಿ ಬೆರೆಯದ ಕಾರಣಕ್ಕೆ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಹಾಗೂ ಈ ಕಾರಣಕ್ಕೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಶುರುವಾದ್ರೆ ಚಿನ್ನಕ್ಕೆ ಬೇಡಿಕೆಯು ಹೆಚ್ಚಾಗುತ್ತದೆ. ಈಗ ಕೆಲವು ತಿಂಗಳ ಹಿಂದೆ ಅಂತಹದ್ದೇ ಸ್ಥಿತಿ ನಿರ್ಮಾಣ ಆಗಿತ್ತು, ಹಲವು ಕಾರಣಗಳ ಪರಿಣಾಮ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದು ಕೊನೆಗೆ ಚಿನ್ನದ ಬೆಲೆ 1,00,000 ರೂಪಾಯಿ ಪ್ರತಿ 10 ಗ್ರಾಂಗೆ ತಲುಪುವ ಭಯ ಕಾಡಿತ್ತು. ಆದರೆ ಇದೀಗ ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ....

ಚಿನ್ನದ ಬೆಲೆ 50,000 ರೂಪಾಯಿಗೆ...
ಚಿನ್ನ.. ಚಿನ್ನ.. ಚಿನ್ನ... ಹೀಗೆ ಯಾರನ್ನಾದರೂ ಹೊಗಳುವಾಗ ಚಿನ್ನಕ್ಕೆ ಹೋಲಿಕೆ ಮಾಡಿ ಹೊಗಳುವುದು ವಾಡಿಕೆ. ಯಾಕಂದ್ರೆ ಚಿನ್ನ ಅಂದ್ರೆ ಬಂಗಾರಕ್ಕೆ ಅಷ್ಟೊಂದು ಬೆಲೆಯು ಇದೆ. ಚಿನ್ನ ಅನ್ನೋದು ಹೂಡಿಕೆ ಮಾಡುವವರಿಗೆ ಖಜಾನೆ ಎನ್ನುವಂತಾಗಿದೆ. ಯಾಕಂದ್ರೆ ಈ ಹಳದಿ ಲೋಹ ಅಂದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಯಾರಿಗೆ ಆದ್ರೂ ಲಾಭ ಗ್ಯಾರಂಟಿ ಬಿಡಿ.
ಹೀಗೆ ಚಿನ್ನ ಅನ್ನೋದು ಹೂಡಿಕೆದಾರರ ಜೇಬು ತುಂಬಿಸುವ ಅಕ್ಷಯ ಪಾತ್ರೆ ಆಗಿದೆ. ಆದ್ರೆ ಚಿನ್ನ ಇಷ್ಟಪಡುವ ಮಹಿಳೆಯರಿಗೆ ಈ ವರ್ಷ ಆಘಾತ ಎದುರಾಗಿತ್ತು. ಯಾಕಂದ್ರೆ ಚಿನ್ನದ ಬೆಲೆ ಇದೇ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಇತ್ತು. ಹೀಗಿದ್ದಾಗಲೇ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬರುತ್ತಿದೆ, ಅದರಲ್ಲೂ ಡಿಸೆಂಬರ್ ತಿಂಗಳಲ್ಲಿ ಮದುವೆ ಸೀಸನ್ ಎಲ್ಲಾ ಮುಗಿದು ಹೋಗಿದ್ದು ಚಿನ್ನದ ಬೆಲೆಯು 50,000 ರೂಪಾಯಿಗೆ ಮತ್ತೆ ಕುಸಿದು ಬೀಳುವ ನಿರೀಕ್ಷೆ ಈಗ ಮೂಡಿದೆ. ಹಾಗಾದ್ರೆ, ಇದೀಗ ಎಷ್ಟಿದೆ ಚಿನ್ನದ ಬೆಲೆ? ಎಷ್ಟು ರೂಪಾಯಿ ಕುಸಿತ ಕಾಣುವ ಸಾಧ್ಯತೆ ಇದೆ? ಮುಂದೆ ಓದಿ.
ಚಿನ್ನದ ಬೆಲೆ ಈಗ ಇಷ್ಟಿದೆ!
ಚಿನ್ನಕ್ಕೆ ಎಂದಿಗೂ ಅದರದ್ದೇ ಆದ ಗತ್ತು & ಬೆಲೆ ಇದ್ದೇ ಇರುತ್ತದೆ. ಅಷ್ಟಕ್ಕೂ ಈಗ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 77,780 ರೂಪಾಯಿ ಇದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 71,300 ರೂಪಾಯಿ ಇದೆ. ಹಾಗೇ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಇಂದು 100 ಗ್ರಾಂಗೆ 7,77,800 ರೂಪಾಯಿ ಇದ್ದರೆ, 22 ಕ್ಯಾರೆಟ್‌ನ ಆಭರಣ ಚಿನ್ನದ ಬೆಲೆಯು ಪ್ರತಿ 100 ಗ್ರಾಂಗೆ 7,13,000 ರೂಪಾಯಿ ಆಗಿದೆ. ಇಷ್ಟೆಲ್ಲದರ ನಡುವೆ ಬೆಳ್ಳಿಯ ಬೆಲೆ ಪ್ರತಿ 1000 ಗ್ರಾಂಗೆ ಅಂದ್ರೆ ಪ್ರತಿ 1 ಕೆಜಿಗೆ 91,000 ರೂಪಾಯಿ ಆಗಿದೆ.
ಬಂಗಾರ ಅಂದ್ರೆ ಭಾರತೀಯರಿಗೆ ಇಷ್ಟ!
ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ. ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದಾಗ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ ಅಥವಾ ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಡಿಮ್ಯಾಂಡ್ ಬರುತ್ತದೆ. ಹೀಗಾಗಿ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದ್ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರು ಲಾಭ ಪಡೆಯಲು ಹವಣಿಸುತ್ತಿದ್ದಾರೆ, ಯಾಕಂದ್ರೆ ಚಿನ್ನ ಈಗ ಅಷ್ಟು ದುಬಾರಿ ಆಗುತ್ತಿದೆ.
-
Gold: ಅಮೆರಿಕಕ್ಕೆ ವೆನೆಜುವೆಲಾದಿಂದ 1,000 ಕೆ.ಜಿ ಚಿನ್ನ ರಫ್ತು: ಬಹುಕೋಟಿ ಡಾಲರ್ ಒಪ್ಪಂದಕ್ಕೆ ಸಹಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications