Gold Price: ಚಿನ್ನ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆಯಾಗಿ, ಆಭರಣ ಪ್ರಿಯರಿಗೆ ಗ್ಯಾರಂಟಿ....
ಚಿನ್ನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವತ್ತ ಮುಂದೆ ನುಗ್ಗುತ್ತಿದೆ. ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆಯ ಕಾರಣಕ್ಕೆ ಆಭರಣ ಪ್ರಿಯ ಸಾಮಾನ್ಯ ಜನರು ಕೂಡ ಸಾಕಷ್ಟು ಆಘಾತ ಎದುರಿಸುವಂತೆ ಆಗಿದೆ. ಚಿನ್ನದ ಬೆಲೆ ಇನ್ನೇನು ಭಾರಿ ಪ್ರಮಾಣದಲ್ಲಿ ಕುಸಿತ ಕಾಣಬಹುದು ಎಂಬ ನಿರೀಕ್ಷೆ ಇರುವಾಗಲೇ ಮತ್ತೆ ಆಘಾತ ಎದುರಾಗಿದೆ. ಅದರಲ್ಲೂ, ಇನ್ನೇನು ಚಿನ್ನದ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆಯಾಗಿ, ಆಭರಣ ಪ್ರಿಯರಿಗೆ ಗ್ಯಾರಂಟಿ....
ಚಿನ್ನ ಇಲ್ಲದ ಮನೆಯಿಲ್ಲ, ಹೆಂಡತಿಗೆ ಚಿನ್ನ ಕೊಡಿಸದೇ ಇದ್ದರೆ ನೆಮ್ಮದಿಯೇ ಇಲ್ಲ ಅಂತ ಹೇಳಬಹುದು. ಯಾಕಂದ್ರೆ ಎಲ್ಲರ ಮನೆಯಲ್ಲೂ ಚಿನ್ನ.. ಚಿನ್ನ.. ಚಿನ್ನ.. ಅಂತಾ ಪ್ರತಿ ದಿನವೂ ಚಿನ್ನದ ಚರ್ಚೆ ನಡೆಯುತ್ತದೆ ಅನ್ನೋದು ಗಂಡಸರ ಆರೋಪ. ಇದೆಲ್ಲವನ್ನ ಮೀರಿ ಚಿನ್ನ ಆಪತ್ ಕಾಲ ಬಂದ ಸಮಯದಲ್ಲಿ ಸಾಕಷ್ಟು ಸಹಾಯಕ್ಕೆ ಕೂಡ ಬರುತ್ತದೆ. ಆದರೆ, ಚಿನ್ನ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆಯಾಗಿ, ಆಭರಣ ಪ್ರಿಯರಿಗೆ ಗ್ಯಾರಂಟಿ....

ಚಿನ್ನ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆ...
ಚಿನ್ನದ ಬೆಲೆ ಯಾಕೆ ದಿಢೀರ್ 1 ಲಕ್ಷ ರೂಪಾಯಿಗೆ ಏರಿಕೆ ಆಗಬಹುದು? ಅನ್ನೋ ಡೌಟ್ ನಿಮ್ಮಲ್ಲಿ ಕಾಡುತ್ತಿದೆಯಾ? ಅಂದಹಾಗೆ, ಚಿನ್ನದ ಬೆಲೆ ಯಾಕೆ 1 ಲಕ್ಷ ರೂಪಾಯಿಗೆ ಏರಿಕೆ ಆಗಬಹುದು ಅಂದ್ರೆ ಚಿನ್ನಕ್ಕೆ ಇದೀಗ ಜಾಗತಿಕ ಮಟ್ಟದಲ್ಲಿ ಭಾರಿ ಡಿಮ್ಯಾಂಡ್ ಬರುತ್ತಿದೆ.
ಇದೇ ಕಾರಣಕ್ಕೆ ಚಿನ್ನ ಖರೀದಿ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇಷ್ಟೆಲ್ಲದರ ಮಧ್ಯೆ ಮಿಡಲ್ ಈಸ್ಟ್ ಅಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ಇನ್ನೊಮ್ಮೆ ಯುದ್ಧದ ಬೆಂಕಿ ಹೊತ್ತಿದ್ದು, ಇಸ್ರೇಲ್ ಸೇನೆ ಸಿರಿಯಾ ಮೇಲೆ ದಾಳಿ ಮಾಡುತ್ತಿದೆ.
ಆಭರಣ ಪ್ರಿಯರಿಗೆ ಹೊಸ ಆತಂಕ!
ಹೀಗೆ ಯುದ್ಧ ಶುರುವಾದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕೂಡ ಭಾರಿ ಏರಿಕೆ ಆಗುವ ಶಾಕ್ ಎದುರಾಗಿದೆ. ಯಾಕಂದ್ರೆ ಯುದ್ಧಗಳು ಶುರುವಾದ ಸಮಯದಲ್ಲಿ ಮೊದಲಿಗೆ ಅದರ ಎಫೆಕ್ಟ್ ಬೀಳುವುದೇ ಚಿನ್ನದ ಮೇಲೆ. ಅದೇ ರೀತಿ ಇದೀಗ ಚಿನ್ನದ ಬೆಲೆಯ ಮೇಲೆ ಇಸ್ರೇಲ್ & ಸಿರಿಯಾ ಯುದ್ಧವು ಪರಿಣಾಮ ಬೀರಬಹುದು, ಚಿನ್ನ ಬೆಲೆ ಏರಿಕೆ ಆಗಬಹುದು ಎನ್ನಲಾಗಿದೆ.
ಅಷ್ಟೇ ಅಲ್ಲ ಇನ್ನು ಕೆಲವೇ ಕೆಲವು ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿಗೆ ಏರಿಕೆ ಆಗುವ ಆತಂಕವೂ ಈಗ ಮೂಡಿದೆ. ಚಿನ್ನ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆಯಾಗಿ, ಆಭರಣ ಪ್ರಿಯರಿಗೆ ಗ್ಯಾರಂಟಿ ಆಘಾತ ಸಿಗಬಹುದು ಅಂತಾ ಹೇಳಲಾಗುತ್ತಿದೆ. ಹಾಗಿದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?
ಚಿನ್ನದ ಬೆಲೆ ಇಷ್ಟಿದೆ ನೋಡಿ!
22 ಕ್ಯಾರೆಟ್ ಚಿನ್ನ ಎಂದು ಕರೆಯಲಾಗುವ, ಆಭರಣ ಚಿನ್ನದ ಬೆಲೆ ನಿನ್ನೆ 1,500 ರೂಪಾಯಿ ಏರಿಕೆ ಆಗಿದೆ. 22 ಕ್ಯಾರೆಟ್ ಚಿನ್ನವು ಪ್ರತಿ 100 ಗ್ರಾಂಗೆ 1,500 ರೂಪಾಯಿ ಏರಿಕೆಯ ಕಂಡು, ಪ್ರತಿ 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,13,000 ರೂಪಾಯಿ ಆಗಿದೆ. ಹೀಗೆ, 22 ಕ್ಯಾರೆಟ್ ಚಿನ್ನವು ಪ್ರತಿ 10 ಗ್ರಾಂಗೆ 71,300 ಆಗಿದ್ದು, ಪ್ರತಿ 10 ಗ್ರಾಂಗೆ 150 ರೂಪಾಯಿ ಕುಸಿತ ಕಂಡಿತ್ತು.
24 ಕ್ಯಾರೆಟ್ ಚಿನ್ನ ಅಂದ್ರೆ ಶುದ್ಧ ಚಿನ್ನದ ಬೆಲೆಯು ಪ್ರತಿ 100 ಗ್ರಾಂಗೆ ಇದೀಗ 1,600 ರೂಪಾಯಿ ಏರಿಕೆ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 100 ಗ್ರಾಂಗೆ ಇದೀಗ 7,77,800 ರೂಪಾಯಿಗೆ ತಲುಪಿದೆ. ಈ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ ಈಗ 77,780 ರೂಪಾಯಿ ಆಗಿದೆ.
ಚಿನ್ನ ಬಳಕೆಯಲ್ಲಿ ಭಾರತೀಯರೇ ಮುಂದೆ!
ಜಾಗತಿಕ ಮಟ್ಟದಲ್ಲಿ ಚಿನ್ನ ಬಳಕೆಯ ವಿಚಾರದಲ್ಲಿ ಭಾರತೀಯರೆ ಮುಂದೆ ಇದ್ದಾರೆ. ಈ ಹೆಮ್ಮೆ ಇಂದು ಅಥವಾ ನಿನ್ನೆಯದ್ದಲ್ಲ ಸಾವಿರಾರು ವರ್ಷದಿಂದ ಕೂಡ ಭಾರತದಲ್ಲಿ ಹೀಗೆ ಚಿನ್ನವನ್ನು ಬಳಕೆ ಮಾಡಲಾಗುತ್ತಿದೆ. ಅದ್ರಲ್ಲೂ ಚಿನ್ನವನ್ನ ವ್ಯಾಪಾರದ ಉದ್ದೇಶಕ್ಕಾಗಿ, ಈ ಹಿಂದಿನಿಂದ ಕೂಡ ಬಳಕೆ ಮಾಡಿಕೊಂಡು ಬರಲಾಗುತ್ತಿತ್ತು. ಆಗಿನ ಕರೆನ್ಸಿ ಅಂದರೆ ನಾಣ್ಯಗಳ ಮುದ್ರಣಕ್ಕೆ ಕೂಡ ಚಿನ್ನವನ್ನು ಬಳಕೆ ಮಾಡಲಾಗುತ್ತಿತ್ತು ಹೀಗೆ ನಮ್ಮ ನೆಲದ ಜೊತೆಗೆ ಚಿನ್ನವು ಕೂಡ ಬೆರೆತು ಹೋಗಿದೆ. ಹೀಗಿದ್ದಾಗಲೇ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಂಡು ಗಮನ ಸೆಳೆಯುತ್ತಿದೆ.












Click it and Unblock the Notifications