Gold Price Today: ಇಂದು ಬಂಗಾರ ಮತ್ತೆ ದುಬಾರಿ! ಬೆಂಗಳೂರು ಸೇರಿ ದೇಶದ ಚಿನ್ನ-ಬೆಳ್ಳಿ ದರ ಅಪ್ಡೇಟ್
Gold Price: ಬೆಂಗಳೂರು ಸೇರಿದಂತೆ ದೇಶದ ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಇಂದು ಬಹಳಷ್ಟು ವ್ಯತ್ಯಾಸವಾಗಿದೆ. ನೆನ್ನೆ ಯಥಾಸ್ಥಿತಿಯಲ್ಲಿದ್ದ ಬಂಗಾರದ ದರವು ಇಂದು ಸೋಮವಾರ (ಜುಲೈ 27) 960 ರೂಪಾಯಿ ಏರಿಕೆ ಆಗಿದೆ. ಬೆಳ್ಳಿ ದರವು ಸ್ಥಿರವಾಗಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಇಂದಿನ ನಗರವಾರು ಬೆಲೆಯ ಅಪ್ಡೇಟ್, ಪಟ್ಟಿ ಇಲ್ಲಿದೆ
ರಾಜಕೀಯ ಅನಿಶ್ಚಿತತೆಗಳು, ಮುಂದುವರಿದ ಯುದ್ಧಗಳ ಪ್ರಭಾವ, ಡಾಲರ್ ಮೌಲ್ಯದಲ್ಲಿ ಏರಿಳಿತದ ನಡುವೆ ಚಿನ್ನದ ಬೆಲೆಯು ಇತ್ತೀಚೆಗೆ ಏರಿಕೆಯತ್ತ ಮುಖ ಮಾಡಿದೆ. ಬೆಳ್ಳಿ ಕೊಂಚವೇ ಏರತೊಡಗಿದ್ದು, ಬಹುತೇಕ ದಿನಗಳಲ್ಲಿ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ. ಮುನ್ಸೂಚನೆಗಳ ಪ್ರಕಾರ, ಈ ವಾರಾಂತ್ಯಕ್ಕೆ ಈ ಲೋಹಗಳ ದರದಲ್ಲಿ ಇನ್ನಷ್ಟು ಏರಿಕೆ ಆಗುವ ಸಂಭವವಿದೆ.

22 ಕ್ಯಾರಟ್, 24 ಕ್ಯಾರಟ್ ದರ ಎಷ್ಟಿದೆ?
* 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 96 ರೂಪಾಯಿ ಏರಿಕೆ ಆಗಿದ್ದು, 10 ಗ್ರಾಂಗೆ 960 ರೂಪಾಯಿ ಹೆಚ್ಚಾಗುವ ಮೂಲಕ ಅದರ ಬೆಲೆಯು 1,45,890 ರೂಪಾಯಿ ತಲುಪಿದೆ.
* 22 ಕ್ಯಾರಟ್ ಒಂದು ಗ್ರಾಂ ಬಂಗಾರದ ದರ 85 ರೂಪಾಯಿ ಹೆಚ್ಚಾಗಿದ್ದು, 10 ಗ್ರಾಂಗೆ ಒಟ್ಟು 850 ರೂ. ಏರಿಕೆ ಕಾಣುವ ಮೂಲಕ ಒಟ್ಟು ದರ 1,33,700 ರೂಪಾಯಿ ಮುಟ್ಟಿದೆ.
* ಅದೇ ರೀತಿ 8ಕ್ಯಾರಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 69 ರೂ. ನಂತೆ 10 ಗ್ರಾಂಗೆ 690 ರೂಪಾಯಿಗೆ ಹೆಚ್ಚಾಗುವ ಮೂಲಕ ಒಟ್ಟು ಅದರ ಬೆಲೆ 1,09,390 ರೂಪಾಯಿ ತಲುಪಿದೆ.
ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧ ಆರಂಭವಾದ ಬೆನ್ನಲ್ಲೆ ಮಾರ್ಚ್ ತಿಂಗಳಿನಿಂದ ಚಿನ್ನದ ಮೇಲಿನ ಹೂಡಿಕೆ ಕುಸಿಯುತ್ತಾ ಬಂತು. ಹೂಡಿಕೆದಾರರು ಚಿನ್ನದ ಮೇಲೆ ಹಾಕಿದ್ದ ಬಂಡಾವಳ ಹಿಂತೆಗೆದರೂ ಹಾಗೂ ವಿದೇಶಿ ಬ್ಯಾಂಕ್‌ಗಳು ಘೋಷಿಸಿದ ಬಡ್ಡಿ ದರ ಏರಿಕೆ ಕಾರಣಕ್ಕೆ ಬಾಂಡ್‌ಗಳ ಮೇಲಿನ ಅಧಿಕ ಲಾಭದ ಆಸೆಗೆ ಅಲ್ಲಿ ಹೂಡಿಕೆಗೆ ಮುಂದಾಗಿದ್ದು, ಚಿನ್ನ-ಬೆಳ್ಳಿ ದರಗಳ ಏರಿಳಿತಕ್ಕೆ ಕಾರಣವಾಯಿತು.
ಬೆಳ್ಳಿ ದರದಲ್ಲಿ ಸ್ಥಿರ; ಇಂದು ಎಷ್ಟಿದೆ?
ಮಾರುಕಟ್ಟೆಯಲ್ಲಿ ಕಳೆದ ಐದು ದಿನಗಳಲ್ಲಿ ಬೆಳ್ಳಿಯ ಬೆಲೆಯು ಒಂದು ಕೆಜಿಗೆ ಒಂದೇ ದಿನಕ್ಕೆ 5000 ರೂಪಾಯಿ ಇಳಿಕೆ ಆಗಿತ್ತು. ನಂತರ ಮಾರನೇ ದಿನ ಜುಲೈ 25ರಂದು 5000 ರೂಪಾಯಿ ಚೇತರಿಕೆ ಕಾಣುವ ಮೂಲಕ ಬೆಳ್ಳಿದ ದರವು 2,40,000 ರೂಪಾಯಿ ಮುಟ್ಟಿದೆ. ಅಲ್ಲಿಂದ ಇಂದು ಸೋಮವಾರದವರೆಗೆ ಅದೇ ದರ ಮುಂದುವರಿದಿದೆ. ಈ ವಾರಾಂತ್ಯಕ್ಕೆ ಬೆಲೆಯಲ್ಲಿ ಕೊಂಚ ಬದಲಾವಣೆ ಆಗುವ ನಿರೀಕ್ಷೆ ಇದೆ.
ವಿವಿಧ ನಗರಗಳ ಚಿನ್ನದ 22k 1ಗ್ರಾಂ ಬೆಲೆ ಪಟ್ಟಿ
ಬೆಂಗಳೂರು: 13,370 ರೂಪಾಯಿ
ಚೆನ್ನೈ: 13,370 ರೂಪಾಯಿ
ಮುಂಬೈ: 13,370 ರೂಪಾಯಿ
ದೆಹಲಿ: 13,385 ರೂಪಾಯಿ
ಕೊಲ್ಕತ್ತ: 13,370 ರೂಪಾಯಿ
ಕೇರಳ: 13,370 ರೂಪಾಯಿ
ಪುಣೆ: 13,370 ರೂಪಾಯಿ
ಹೈದರಾಬಾದ್: 13,370 ರೂಪಾಯಿ


Click it and Unblock the Notifications
