Gold Price: ಚಿನ್ನದ ಬೆಲೆ 73,750 ರೂಪಾಯಿ, ಶೀಘ್ರದಲ್ಲೇ 1 ಲಕ್ಷಕ್ಕೆ ಏರಿಕೆ?

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗುತ್ತಿದ್ದು, ಲೋಕಸಭೆ ಚುನಾವಣೆ ರಿಸಲ್ಟ್ ಬಳಿಕ ಚಿನ್ನದ ಬೆಲೆ ಆಕಾಶ ಮುಟ್ಟುತ್ತಿದೆ. ಅದರಲ್ಲೂ ಚಿನ್ನದ ಬೆಲೆ ಕಡಿಮೆ ಆಗುತ್ತೆ ಅಂತಾ ಕಾಯುತ್ತಿದ್ದವರಿಗೆ ಇದೀಗ ದೊಡ್ಡ ಆಘಾತ ಕೂಡ ಎದುರಾಗಿದೆ. ಇಂದು ಚಿನ್ನದ ಬೆಲೆ ಭಾರಿ ಏರಿಕೆ ಕಂಡು, ಈ ಮೂಲಕ 73,750 ರೂಪಾಯಿ ತಲುಪಿದೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ಯಾವ ಯಾವೆಲ್ಲ ನಗರದಲ್ಲಿ ಎಷ್ಟಿದೆ ಚಿನ್ನದ ಬೆಲೆ? ಬನ್ನಿ ತಿಳಿಯೋಣ.

ಇಂದು ಕೂಡ ಚಿನ್ನದ ಬೆಲೆ ಭರ್ಜರಿ ಏರಿಕೆಯ ಕಂಡಿದೆ, ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಗ್ಯಾರಂಟಿ ಎನ್ನಲಾಗುತ್ತಿದೆ. ನೋಡ ನೋಡುತ್ತಲೇ ಚಿನ್ನದ ಬೆಲೆ, ಆಕಾಶ ಮುಟ್ಟುತ್ತಿದೆ. ಚಿನ್ನ ಸಂಗ್ರಹಕ್ಕೆ ಪ್ರತಿಯೊಂದು ದೇಶವೂ ತಮ್ಮ ತಮ್ಮ ಆರ್ಥಿಕತೆಯಲ್ಲಿ ಭಾರಿ ಒತ್ತು ನೀಡುತ್ತಿವೆ. ಅದ್ರಲ್ಲೂ ಕೊಲ್ಲಿ ರಾಷ್ಟ್ರಗಳು, ಅರಬ್ ದೇಶಗಳಿಗೆ ಚಿನ್ನ ಬೇಕೆ ಬೇಕಾಗಿದೆ, ಇನ್ನು ಅಮೆರಿಕ ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಹೀಗೆ ಸಂಕಷ್ಟ ಬಂದಾಗೆಲ್ಲಾ ಚಿನ್ನ ಸಹಾಯಕ್ಕೆ ಬರಲಿದೆ. ಹೀಗಿದ್ದಾಗ ಇಂದು ಚಿನ್ನದ ಬೆಲೆ 73,750 ರೂಪಾಯಿಗೆ ತಲುಪಿ ಹೊಸ ದಾಖಲೆ ಬರೆದಿದೆ. ಹಾಗಾದ್ರೆ 22 ಕ್ಯಾರೆಟ್ ಅಂದ್ರೆ ಆಭರಣ ಚಿನ್ನದ ಬೆಲೆ ಎಷ್ಟಿದೆ? ಮುಂದೆ ಓದಿ.

Gold Price Is Reached To 73750 Rupees And Near To Touch 1 Lakh

ಚಿನ್ನದ ಬೆಲೆ ಇಷ್ಟಿದೆ ನೋಡಿ!

ಶುದ್ಧ ಚಿನ್ನ ಅಥವಾ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 3,300 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ, ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,37,500 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 73,750 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿದೆ ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 3000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 300 ರೂಪಾಯಿ ಏರಿಕೆ ಆಗಿದ್ದು, ಆಭರಣ ಚಿನ್ನದ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 67,600 ರೂಪಾಯಿಗೆ ಮಾರಾಟ ಆಗುತ್ತಿದೆ.

ಚಿನ್ನದ ಬೆಲೆಯಲ್ಲಿ ಏರಿಕೆ ಯಾಕೆ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಸ್ಥಿತಿ ಸರಿಯಾಗಿ ಇಲ್ಲ. ಮತ್ತೊಂದ್ಕಡೆ ರಷ್ಯಾ, ಉಕ್ರೇನ್ ಮಧ್ಯೆ ಯುದ್ಧ ಶುರುವಾದ ನಂತರ ಹೂಡಿಕೆ ಮಾಡುವವರಿಗೆ ಭಯವು ಶುರುವಾಗಿದ್ದು. ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೂ ಯುದ್ಧ ಶುರುವಾದರೆ ಕುಸಿತವು ಖಚಿತ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆಯೇ ಬೆಸ್ಟ್ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ. ಈ ಮಧ್ಯೆ ಭೂಮಿ ಮೇಲೆ ಸಿಗುತ್ತಿರುವ ಚಿನ್ನ ಕೂಡ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು ಈ ಅಮೂಲ್ಯ ವಸ್ತು ಮುಂದಿನ ದಿನಗಳಲ್ಲಿ ಭೂಮಿಯಿಂದ ನಾಪತ್ತೆ ಆದರೂ ಅಚ್ಚರಿ ಇಲ್ಲ ಅಂತಾರೆ ತಜ್ಞರು.

ಅಮೆರಿಕದ ಬಳಿ ಇದೆ ಅತಿಹೆಚ್ಚು ಚಿನ್ನ!

ಚಿನ್ನ ಜಗತ್ತಿನ ಪ್ರತಿಯೊಂದು ದೇಶಕ್ಕೂ ಬೇಕು, ಹೀಗಾಗಿ ಚಿನ್ನ ಸಂಗ್ರಹಣೆ ಬಗ್ಗೆ ಪ್ರಪಂಚ ಒತ್ತು ನೀಡುತ್ತದೆ. ಅದರಲ್ಲೂ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಎಂಬ ಬಿರುದು ಪಡೆದ, ಅಮೆರಿಕ ಬಳಿ ಅತಿಹೆಚ್ಚು ಚಿನ್ನ ಇದೆ. ಅಮೆರಿಕ ಬಳಿ ಸುಮಾರು 8,133 ಟನ್ ಚಿನ್ನವಿದೆ. ಹಾಗಾದ್ರೆ ಭಾರತ ಈಗ ಎಷ್ಟನೇ ಸ್ಥಾನದಲ್ಲಿ ಇದೆ ಗೊತ್ತಾ? ಅತಿಹೆಚ್ಚು ಚಿನ್ನ ಹೊಂದಿರುವ ಸಂಪೂರ್ಣ ಟಾಪ್-10 ದೇಶಗಳ ಪಟ್ಟಿಗೆ ಮುಂದೆ ಓದಿ.

ಅಮೆರಿಕದ ನಂತರದ ಸ್ಥಾನದಲ್ಲಿ ಜರ್ಮನಿ ಇದ್ದು, 3,352 ಟನ್ ಚಿನ್ನವನ್ನು ಜರ್ಮನಿಯು ಹೊಂದಿದೆ. ಇಟಲಿ ಬಳಿ 2,451 ಟನ್, ಫ್ರಾನ್ಸ್ ಬಳಿ 2,436 ಟನ್, ರಷ್ಯಾ ಬಳಿ 2,332 ಟನ್, ಚೀನಾ ಬಳಿ 2,262 ಟನ್, ಸ್ವಿಜರ್ಲ್ಯಾಂಡ್ ಬಳಿ 1,040, ಜಪಾನ್ ಬಳಿ 845.97 ಟನ್ ಇದ್ದರೆ, ಭಾರತದ ಬಳಿ 822.09 ಟನ್ ಚಿನ್ನದ ಸಂಗ್ರಹ ಇದೆ. ಈ ಮೂಲಕ ಇಡೀ ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಇರುವ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ.

ಚಿನ್ನದ ಬೆಲೆ 2 ಲಕ್ಷ ರೂಪಾಯಿ?

ಹೀಗಾಗಿಯೇ ಕಳೆದ ಕೆಲವು ತಿಂಗಳಿಂದಲು ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಆದರೆ ಜೂನ್ ಆರಂಭದಲ್ಲೇ ಚಿನ್ನದ ಬೆಲೆ ಒಂದಷ್ಟು ಕಡಿಮೆ ಆಗಿತ್ತು. ಈಗ ಮತ್ತೆ ಭಾರಿ ಏರಿಕೆ ಕಾಣುತ್ತಿದೆ. ಅದರಲ್ಲೂ ಇರಾನ್ & ಇಸ್ರೇಲ್ ನಡುವೆ ಯುದ್ಧದ ಸ್ಥಿತಿ ನಿರ್ಮಾಣವಾಗಿ ಭಯ ಹುಟ್ಟಿಸಿತ್ತು. ಈ ಕಾರಣಕ್ಕೆ, ಚಿನ್ನದ ಬೆಲೆ ಮುಂದಿನ ಕೆಲವೇ ವರ್ಷದಲ್ಲಿ 2 ಲಕ್ಷ ರೂಪಾಯಿಗೆ ತಲುಪುವ ಸಾಧ್ಯತೆ ಕೂಡ ದಟ್ಟವಾಗಿದೆ.

5000 ವರ್ಷಗಳಿಂದ ಚಿನ್ನದ ಬಳಕೆ!

ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು. ಇದು ಆಭರಣ ಪ್ರಿಯರಿಗೆ ಬೇಸರ ತರಿಸಿದರೂ, ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆ ಖುಷಿ ನೀಡುತ್ತಿದೆ.

ಚಿನ್ನದ ಬೆಲೆ ಕುಸಿದಿದ್ದು ಏಕೆ?

ಚರಿತ್ರೆಯಲ್ಲಿ ಯುದ್ಧಗಳು ನಡೆದಿರುವುದು ಚಿನ್ನಕ್ಕಾಗಿ ಹಾಗೂ ಅಮೂಲ್ಯ ವಸ್ತುಗಳಿಗೆ ಮಾತ್ರ. ಚಿನ್ನ ಒಂದು ಕಾಲದಲ್ಲಿ ನಾಣ್ಯ ಕೂಡ ಆಗಿತ್ತು. ಇದೀಗ ಚಿನ್ನ ಅನ್ನೋದು ಆಭರಣವಾಗಿ & ಬ್ಯಾಂಕ್ ಲಾಕರ್ ಒಳಗೆ ಮಾತ್ರ ಕಾಣಲು ಸಾಧ್ಯ. ಈ ಕಾರಣಕ್ಕೆ, ಚಿನ್ನ ಅನ್ನೋ ಹಳದಿ ಲೋಹದ ಬೆಲೆ ಆಕಾಶ ಮುಟ್ಟುತ್ತಿತ್ತು. ಆದರೆ ಈಗ ದಿಢೀರ್ ಅಂತಾ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಆಗಿದೆ. ಅದರಲ್ಲೂ ಒಂದೇ ದಿನ ಚಿನ್ನದ ಬೆಲೆ ಭರ್ಜರಿ 20,000 ರೂಪಾಯಿ ಕುಸಿತವನ್ನು ಕಂಡು ಆಭರಣ ಪ್ರಿಯರಿಗೆ ಭರ್ಜರಿ ಸುದ್ದಿ ನೀಡಿದೆ. ಮುಂದಿನ ದಿನಗಳಲ್ಲಿ, ಚಿನ್ನದ ಬೆಲೆಯ ಬಗ್ಗೆ ಚಿಂತೆ ಶುರುವಾಗಿದೆ.

ಯುದ್ಧದ ಕಾರಣಕ್ಕೆ ಬೆಲೆ ಏರಿಕೆ?

ಜಾಗತಿಕವಾಗಿ ಯುದ್ಧಗಳು ಶುರುವಾದಾಗ, ಮೊದಲು ಆ ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್, ಡಿಸೆಲ್ ಮೇಲೆ. ಯಾಕಂದ್ರೆ ಜಾಗತಿಕ ಆರ್ಥ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ. ಹೀಗಾಗಿಯೇ ಯುದ್ಧ ಶುರುವಾದ ತಕ್ಷಣ ಚಿನ್ನದ ರೂಪಕ್ಕೆ ತಮ್ಮ ಸಂಪತ್ತು ಅಂದರೆ ಹಣ ಬದಲಾಯಿಸಿ, ಸಂಗ್ರಹ ಮಾಡಲು ಜನಗಳು ಮುಂದಾಗುತ್ತಾರೆ. ಹಾಗೆ ದೇಶಗಳು ಕೂಡ ಅಪಾರ ಪ್ರಮಾಣದ ಚಿನ್ನ ಯುದ್ಧದ ವೇಳೆ ಬಂದಾಗ ಖರೀದಿ ಮಾಡುತ್ತವೆ. ಹೀಗಾಗಿಯೆ ಕಳೆದ ಕೆಲವು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿದ್ದು, ಇದೀಗ ಚಿನ್ನ ಕುಸಿತವನ್ನು ಕಾಣುತ್ತಿದೆ.

ಬೆಳ್ಳಿ ಬೆಲೆಯಲ್ಲಿ ದಿಢೀರ್ ಇಳಿಕೆ!

ಚಿನ್ನ ಬಹು ಬೇಡಿಕೆಯ ವಸ್ತು, ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನಗಳು ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ ಹತ್ತಿರ ಹತ್ತಿರ 1 ಲಕ್ಷ ರೂಪಾಯಿಗೆ ತಲುಪಿತ್ತು ಇಂತಹ ಸ್ಥಿತಿಯಲ್ಲಿ ಈಗ ದಿಢೀರ್ ಬೆಳ್ಳಿ ಬೆಲೆಯಲ್ಲಿ 1200 ರೂಪಾಯಿ ಕುಸಿತ ಕಂಡಿದೆ! ಮುಂದಿನ ದಿನಗಳಲ್ಲಿ ಬೆಳ್ಳಿಯ ಬೆಲೆ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆಯು ಇದೆ. ಈ ನಡುವೆ ಬೆಳ್ಳಿ ಬೆಲೆ ಒಂದಷ್ಟು ಇಳಿಕೆ ಕಂಡಿರುವುದು, ಬೆಳ್ಳಿ ಇಷ್ಟಪಡುವವರಿಗೆ ಒಂದಷ್ಟು ಖುಷಿ ಕೊಟ್ಟಿದೆ.

ಹಳದಿ ಲೋಹ ಎಲ್ಲರಿಗೂ ಇಷ್ಟ!

ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. ಹೀಗಾಗಿಯೇ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ, ಹಳದಿ ಲೋಹ ಬೆನ್ನೆಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹ ಅಂದ್ರೆ ಚಿನ್ನ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+