Gold Price: ಚಿನ್ನ ಬೆಲೆ 4,000 ರೂಪಾಯಿ ಏರಿಕೆ, ಆಭರಣ ಪ್ರಿಯರಿಗೆ ಹೊಸ ವರ್ಷದ ದಿನ...
ಚಿನ್ನದ ಬೆಲೆ ಕಡಿಮೆ ಆಗುತ್ತೆ, ಚಿನ್ನದ ಬೆಲೆಯಲ್ಲಿ ನಿನ್ನೆ ರೀತಿ ಇಳಿಕೆ ಆಗುತ್ತೆ. ಹೊಸ ವರ್ಷದ ಕಾರಣ ಕಡಿಮೆ, ಕಡಿಮೆ ಅಂದ್ರು ಒಂದು 5 ಗ್ರಾಂ ಚಿನ್ನ ತಗೊಳೋಣ ಅಂತಾ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಇಂದು ಆಘಾತ ಎದುರಾಗಿದೆ. ಯಾಕಂದ್ರೆ ಹೊಸ ವರ್ಷದ ಮೊದಲನೇ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಏರಿಕೆ ಆಗಿದೆ, ಹಾಗಾದ್ರೆ ಚಿನ್ನದ ಬೆಲೆ ಇಂದು ಎಷ್ಟಿದೆ?
ಚಿನ್ನ ಅಂದ್ರೆ ಆಭರಣ ಪ್ರಿಯ ಮಹಿಳೆಯರಿಗೆ ಮಾತ್ರವಲ್ಲ ಹೂಡಿಕೆ ಮಾಡುವ ಹುಡುಗರು & ಹುಡುಗಿಯರಿಗೆ ಕೂಡ ಸಿಕ್ಕಾಪಟ್ಟೆ ಇಷ್ಟ. ಯಾಕಂದ್ರೆ ಚಿನ್ನ ಖರೀದಿ ಮಾಡಿ ಅಥವಾ ಆ ಚಿನ್ನದ ಮೇಲೆ ಹೂಡಿಕೆ ಮಾಡಿರುವ ಯಾರಿಗೇ ಆದರೂ ನಷ್ಟ ಆಗಿಲ್ಲ ಎನ್ನಬಹುದು. ಈ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ಹೀಗಿದ್ದಾಗ ಹೊಸ ವರ್ಷದಲ್ಲಿ ಚಿನ್ನ ಖರೀದಿ ಮಾಡೋಣ, ಈ ಮೂಲಕ 2025 ರಲ್ಲಿ ಬಾಳು ಬಂಗಾರವಾಗಲಿ ಅಂತ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಆಘಾತ ಎದುರಾಗಿದೆ. ಚಿನ್ನ ಬೆಲೆ ಒಂದೇ ದಿನ, ಅಂದ್ರೆ ಇಂದು ಚಿನ್ನ ಬೆಲೆ 4,000 ರೂಪಾಯಿ ಏರಿಕೆ ಆಗಿಬಿಟ್ಟಿದೆ!

ಚಿನ್ನದ ಬೆಲೆ 4,000 ರೂಪಾಯಿ ಏರಿಕೆ!
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ ಕಂಡಿದ್ದು, ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆಯು ಈಗ 4,000 ರೂಪಾಯಿ ಏರಿಕೆ ಕಂಡಿದೆ. ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆಯು ಈಗ 400 ರೂಪಾಯಿ ಏರಿಕೆ ಆಗಿದ್ದು, ಆಭರಣ ಚಿನ್ನದ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 71,500 ರೂಪಾಯಿಗೆ ಮಾರಾಟ ಆಗುತ್ತಿದೆ.
ಶುದ್ಧ ಚಿನ್ನ ಅಥವಾ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 4,400 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ, ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,80,000 ರೂಪಾಯಿ ಆಗಿದೆ. ಇದರ ಜೊತೆಗೇ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 78,000 ರೂಪಾಯಿಗೆ ಏರಿಕೆ ಆಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಮೂಲಕ ಆಭರಣ ಪ್ರಿಯರಿಗೆ ಹೊಸ ವರ್ಷದ ದಿನ ಒಂದಷ್ಟು ಬೇಸರದ ಸುದ್ದಿ ಸಿಕ್ಕಿದೆ.












Click it and Unblock the Notifications