Gold Price: ಚಿನ್ನ ಬೆಲೆ 1,500 ಭರ್ಜರಿ ಏರಿಕೆ, ಬೆಳ್ಳಿ ಬೆಲೆ.....

ಚಿನ್ನ.. ಚಿನ್ನ.. ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಆಗಿದೆ. ಈ ಮೂಲಕ ಚಿನ್ನದ ಬೆಲೆಯ ಬಗ್ಗೆ ತಲೆ ಕೆಡಿಸಿಕೊಂಡು ಕೂತಿದ್ದ ಆಭರಣ ಪ್ರಿಯರಿಗೆ ಭಾರಿ ದೊಡ್ಡ ಆಘಾತವೇ ಇಂದು ಎದುರಾಗಿದೆ. ಚಿನ್ನಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಬಂಗಾರದ ಬೆಲೆಯು ಭಾರಿ ಭರ್ಜರಿ ಏರಿಕೆ ಕಂಡಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆಯು 1,500 ಭರ್ಜರಿ ಏರಿಕೆ ಕಂಡಿದ್ದು, ಬೆಳ್ಳಿ ಬೆಲೆಯಲ್ಲಿ....

ಚಿನ್ನದ ಬೆಲೆ ಕಳೆದ ವಾರ ಪೂರ್ತಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು, ಹೀಗಾಗಿ ಮತ್ತೆ ಇನ್ನಷ್ಟು ಕುಸಿತ ಕಾಣಲಿದೆ ಬಂಗಾರ ಅನ್ನೋ ನಿರೀಕ್ಷೆಯಲ್ಲೇ ಜನರು ಕೂಡ ಇದ್ದರು. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಇನ್ನಷ್ಟು ಕುಸಿತ ಕಾಣಲಿ ಅಂತಾ ಜನರು ಖರೀದಿ ಮಾಡೋಕೆ ಕಾಯುತ್ತಿದ್ದರು. ಆದರೆ ಹೀಗೆ ಚಿನ್ನ ಖರೀದಿಗೆ ಅಂತಾ ಕಾಯುತ್ತಿದ್ದ ಜನರಿಗೆ ಇದೀಗ ಬಿಗ್ ಶಾಕ್ ಸಿಕ್ಕಂತೆ ಆಗಿದೆ. ಯಾಕಂದ್ರೆ ಚಿನ್ನದ ಬೆಲೆಯು 1,500 ಭರ್ಜರಿ ಏರಿಕೆ ಕಂಡಿದ್ದರೆ, ಇದೇ ವೇಳೆ ಬೆಳ್ಳಿ ಬೆಲೆ ಕಥೆ ಏನಾಗಿದೆ ಗೊತ್ತೆ? ಮುಂದೆ ಓದಿ.

Gold Price Is Increased On December 09th Of 2024

ಚಿನ್ನದ ಬೆಲೆ 1,500 ರೂಪಾಯಿ ಭರ್ಜರಿ ಏರಿಕೆ!

ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದ್ರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿಬಿಟ್ಟಿದೆ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆಯು ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ.

ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕ್ಷೀಣಿಸುತ್ತಿದೆ. ಇದೆಲ್ಲಾ ಕೂಡ ಚಿನ್ನದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇದ್ದು, ಚಿನ್ನ 2025ರ ಅಂತ್ಯಕ್ಕೆ, 1 ಲಕ್ಷ ರೂಪಾಯಿ ಆಸುಪಾಸಿಗೆ ಬಂದ್ರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು. ಹೀಗಿದ್ದಾಗ, ದಿಢೀರ್ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ! ಹಾಗಾದ್ರೆ ಏರಿಕೆ ನಂತರ ಈಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆ ಇಂದು ಇಷ್ಟಿದೆ ನೋಡಿ!

ಹೌದು, 22 ಕ್ಯಾರೆಟ್ ಚಿನ್ನ ಎಂದು ಕರೆಯಲಾಗುವ ಆಭರಣ ಚಿನ್ನದ ಬೆಲೆ 1,500 ರೂಪಾಯಿ ಏರಿಕೆ ಆಗಿದೆ. 22 ಕ್ಯಾರೆಟ್ ಚಿನ್ನವು ಪ್ರತಿ 100 ಗ್ರಾಂಗೆ ಇದೀಗ 1,500 ರೂಪಾಯಿ ಏರಿಕೆಯ ಕಂಡು, ಪ್ರತಿ 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,13,000 ರೂಪಾಯಿ ಆಗಿದೆ. ಹೀಗೆ, 22 ಕ್ಯಾರೆಟ್ ಚಿನ್ನವು ಪ್ರತಿ 10 ಗ್ರಾಂಗೆ 71,300 ಆಗಿದ್ದು, ಪ್ರತಿ 10 ಗ್ರಾಂಗೆ 150 ರೂಪಾಯಿ ಕುಸಿತ ಕಂಡಿದೆ.

ಬೆಳ್ಳಿಯ ಬೆಲೆ ಈಗ ಎಷ್ಟಿದೆ?

24 ಕ್ಯಾರೆಟ್ ಚಿನ್ನ ಅಂದ್ರೆ ಶುದ್ಧ ಚಿನ್ನದ ಬೆಲೆಯು ಪ್ರತಿ 100 ಗ್ರಾಂಗೆ ಇದೀಗ 1,600 ರೂಪಾಯಿ ಏರಿಕೆ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 100 ಗ್ರಾಂಗೆ ಇದೀಗ 7,77,800 ರೂಪಾಯಿಗೆ ತಲುಪಿದೆ. ಈ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ ಈಗ 77,780 ರೂಪಾಯಿ ಆಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿ ಬದಲಾವಣೆ ಆಗಿಲ್ಲ, ಹೀಗಾಗಿ ಬೆಳ್ಳಿಯ ಬೆಲೆಯು ಪ್ರತಿ 1 ಕೆಜಿಗೆ ಇದೀಗ 92,000 ರೂಪಾಯಿ ಇದೆ.

ಚಿನ್ನದ ಮೇಲೆ ವಿಪರೀತ ಆಸಕ್ತಿ!

ಹೂಡಿಕೆ ಮಾಡುವವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ ಆಗುತ್ತದೆ, ಹೀಗಿದ್ರೂ ಸಾಮಾನ್ಯವಾಗಿ ಆಭರಣ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಮಾತ್ರ ಖುಷಿ ಆಗುತ್ತದೆ. ಹೀಗೆ ಚಿನ್ನದ ಬೆಲೆ ಕಳೆದ 1 ತಿಂಗಳಿಂದ ಭಾರಿ ಏರಿಳಿತ ಕಂಡಿದೆ. ಮುಂದಿನ ದಿನಗಳಲ್ಲಿ ಕೂಡ, ಇದೇ ರೀತಿಯಾಗಿ ಚಿನ್ನ ಏರಿಳಿತ ಕಾಣುವ ನಿರೀಕ್ಷೆ ಇದೆ. ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಚಿನ್ನದ ಬೆಲೆ ಅದೆಷ್ಟೇ ಏರಿಕೆ ಆದರೂ, ಅದೆಷ್ಟೇ ಇಳಿಕೆ ಕಂಡರೂ ಚಿನ್ನ ಕೊಳ್ಳುವವರು ಮಾತ್ರ ಕಡಿಮೆ ಆಗುತ್ತಿಲ್ಲ. ಬದಲಾಗಿ ಚಿನ್ನ ಖರೀದಿ ಮಾಡುವವರು ಹೆಚ್ಚಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+