Gold Price: ಚಿನ್ನ ಬೆಲೆ 7,600 ರೂಪಾಯಿ ಭರ್ಜರಿ ಏರಿಕೆ, ಇದೀಗ ಎಷ್ಟಿದೆ ಗೊತ್ತೆ ಬೆಲೆ?
ಚಿನ್ನಕ್ಕೆ ಇದೀಗ ಭಾರಿ ಭರ್ಜರಿ ಡಿಮ್ಯಾಂಡ್ ಬಂದುಬಿಟ್ಟಿದೆ, ಇದೇ ಕಾರಣಕ್ಕೆ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಆಗಿ ಜನರು ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಹೀಗಿದ್ದಾಗಲೇ ಚಿನ್ನದ ಬೆಲೆಯು ಇದೀಗ ಸಿಕ್ಕಾಪಟ್ಟೆ ಏರಿಕೆ ಕಂಡುಬಿಟ್ಟಿದೆ. ಒಂದೇ ದಿನ ಚಿನ್ನದ ಬೆಲೆಯು 7,600 ರೂಪಾಯಿ ಭರ್ಜರಿ ಏರಿಕೆ, ಇದೀಗ ಎಷ್ಟಿದೆ ಗೊತ್ತೆ ಬೆಲೆ?
ಚಿನ್ನದ ಬೆಲೆ ಯಾವ ರೇಂಜ್‌ಗೆ ಏರಿಕೆ ಆಗುತ್ತಿದೆ ಅಂದ್ರೆ, ಆಭರಣ ಪ್ರಿಯರು ಬೆಲೆ ಏರಿಕೆಯ ವೇಗ ನೋಡಿ ಭಯ ಪಡುವ ಸ್ಥಿತಿ ಇದೆ. ಇನ್ನೇನು ಚಿನ್ನದ ಬೆಲೆ ಶೀಘ್ರದಲ್ಲೇ 1 ಲಕ್ಷ ರೂಪಾಯಿ ತಲುಪಿದರೂ ಅಚ್ಚರಿ ಪಡಬೇಕಿಲ್ಲ ಎಂಬುದು ತಜ್ಞರ ಅಭಿಪ್ರಾಯ ಕೂಡ ಆಗಿದೆ. ಹೀಗಾಗಿ, ಆದಷ್ಟು ಬೇಗ ಚಿನ್ನ ಖರೀದಿ ಮಾಡಬೇಕು ಎಂಬುದು ಆಭರಣ ಪ್ರಿಯರ ಗುರಿಯಾಗಿದೆ. ಈ ಸಮಯದಲ್ಲೇ ದಿಢೀರ್ ಚಿನ್ನದ ಬೆಲೆ ಮತ್ತಷ್ಟು ಭರ್ಜರಿ ಏರಿಕೆ ಕಂಡಿದೆ. ಹಾಗಾದ್ರೆ ಇದೀಗ ಚಿನ್ನ ಬೆಲೆ 7,600 ರೂಪಾಯಿ ಭರ್ಜರಿ ಏರಿಕೆಯ ನಂತರ ಸದ್ಯ ಎಷ್ಟಿದೆ ರೇಟ್?

ಚಿನ್ನ ಬೆಲೆ 7,600 ರೂಪಾಯಿ ಭರ್ಜರಿ ಏರಿಕೆ...
ಚಿನ್ನ ಭಾರತೀಯರಿಗೆ ಸಿಕ್ಕಾಪಟ್ಟೆ ವಿಶೇಷವಾದ ವಸ್ತುವಾಗಿದ್ದು, ಚಿನ್ನವು ಇಲ್ಲದೆ ಬಹುತೇಕ ಯಾವುದೇ ಶುಭಕಾರ್ಯ ನಡೆಯುವುದೇ ಇಲ್ಲ ಎನ್ನಬಹುದು. ಯಾಕಂದ್ರೆ ಚಿನ್ನಕ್ಕೆ ಅಷ್ಟು ಗೌರವಯುತ ಸ್ಥಾನ ನೀಡಲಾಗಿದೆ. ಹೀಗಾಗಿ, ಭಾರತದಲ್ಲಿ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಕೂಡ ಇದೆ. ಅದರಲ್ಲೂ ಮದುವೆ ಸೀಸನ್ ಸಮಯದಲ್ಲೇ ದಿಢೀರ್ ಒಂದೇ ದಿನ ಚಿನ್ನದ ಬೆಲೆಯು 7,600 ರೂಪಾಯಿ ಭರ್ಜರಿ ಏರಿಕೆ ಕಂಡಿದೆ!
ಚಿನ್ನದ ಬೆಲೆ & ಬೆಳ್ಳಿ ಬೆಲೆ ಎಷ್ಟಿದೆ?
ಕರ್ನಾಟಕ & ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ ಕಂಡು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಇನ್ನಷ್ಟು ಮೇಲೆ ಹೋಗಿದೆ. ಪ್ರತಿ 100 ಗ್ರಾಂ 7,600 ರೂಪಾಯಿ ಏರಿಕೆಯ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,81,100 ರೂಪಾಯಿ ಆಗಿದೆ. ಇದರ ಜೊತೆ, ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 78,110 ರೂಪಾಯಿಗೆ ಏರಿಕೆ ಆಗಿದೆ.
ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,000 ರೂಪಾಯಿ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 700 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 71,600 ರೂಪಾಯಿ ಆಗಿದೆ. ಹಾಗೇ ಮತ್ತೊಂದು ಕಡೆ, ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 2,000 ರೂಪಾಯಿ ಏರಿಕೆ ಕಂಡು 91,500 ರೂಪಾಯಿಗೆ ಈಗ ಮಾರಾಟ ಆಗುತ್ತಿದೆ.












Click it and Unblock the Notifications