Gold Price: ಚಿನ್ನದ ಬೆಲೆ ಭಾರಿ ಏರಿಕೆ, ಇದೀಗ ಎಷ್ಟಿದೆ ಬಂಗಾರ...
ಚಿನ್ನದ ಬೆಲೆಗೆ ಭರ್ಜರಿ ಡಿಮ್ಯಾಂಡ್ ಬಂದಿದೆ, ಚಿನ್ನ ಖರೀದಿ ಮಾಡುವವರ ಜೊತೆಗೆ ಚಿನ್ನ ಎಂಬ ಹಳದಿ ಖಜಾನೆ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಈಗ ಚಿನ್ನದ ಬೆಲೆ ಭಾರಿ ಭರ್ಜರಿ ಏರಿಕೆ ಕಾಣುತ್ತಿದೆ. ಚಿನ್ನದ ಬೆಲೆ ಇನ್ನೇನು ಕುಸಿತ ಕಾಣುತ್ತದೆ ಅಂತಾ ಅಂದುಕೊಳ್ಳುವ ಸಮಯದಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗುತ್ತಿದೆ. ಅದೇ ರೀತಿ ಇದೀಗ ಚಿನ್ನದ ಬೆಲೆ ಬರೋಬ್ಬರಿ 5,500 ರೂಪಾಯಿ ಏರಿಕೆ ಆಗಿಬಿಟ್ಟಿದೆ! ಹಾಗಾದರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?
ಚಿನ್ನ ಇಷ್ಟಪಡುವ ಆಭರಣ ಪ್ರಿಯರಿಗೆ ಇದೀಗ ಬೆಲೆ ಏರಿಕೆಯ ಶಾಕ್ ಸಿಕ್ಕಂತಾಗಿದೆ. 2024 ರಲ್ಲಿ ಚಿನ್ನದ ಬೆಲೆ ಶಾಕ್ ನೀಡಿದ್ದು ಸಾಕಾಗಲಿಲ್ಲ ಎನ್ನುವಂತೆ ಇದೀಗ ಮತ್ತೆ 2025 ರಲ್ಲಿ ಕೂಡ ಭಾರಿ ಏರಿಕೆ ಆಗುತ್ತಿದೆ ಚಿನ್ನದ ಬೆಲೆ. ಈ ಮೂಲಕ, ಆಭರಣ ಇಷ್ಟಪಡುವ ಮಹಿಳೆಯರಿಗೆ ಭಾರಿ ಶಾಕ್ ಸಿಕ್ಕಂತಾಗಿದೆ. ಚಿನ್ನ.. ಚಿನ್ನ.. ಚಿನ್ನ... ಅಂತಾ ಚಿನ್ನದ ಖರೀದಿಗೆ ಕಾಯುತ್ತಿದ್ದ ಜನರಿಗೂ ಇದರಿಂದ ಶಾಕ್ ಸಿಕ್ಕಂತಾಗಿದೆ. ಅದ್ರಲ್ಲೂ ಒಂದೇ ದಿನದಲ್ಲಿ ಚಿನ್ನ ಬೆಲೆಯು ಭರ್ಜರಿ 5,500 ರೂಪಾಯಿ ಏರಿಕೆ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಬಂಗಾರದ ಬೆಲೆ?

ಚಿನ್ನದ ಬೆಲೆ 5,500 ರೂಪಾಯಿ ಏರಿಕೆ!
ಮನೆಯಲ್ಲಿ ಚಿನ್ನಕ್ಕಾಗಿ ಬೇಡಿಕೆ ಇಟ್ಟಾಗ ಗಂಡಂದಿರುವ ನಾನಾ ನೆಪ ಹೇಳಿ ಎಸ್ಕೇಪ್ ಆಗಲು ನೋಡುತ್ತಾರೆ. ಹೀಗಿದ್ದಾಗ ಅಕಸ್ಮಾತ್ ನೀವು ಏನಾದರೂ ಈಗ ಚಿನ್ನ ಖರೀದಿ ಮಾಡುವ ಪ್ಲಾನ್ ಹಾಕಿಕೊಂಡಿದ್ದರೆ ಚಿನ್ನದ ಬೆಲೆಯನ್ನ ಇಲ್ಲಿ ತಿಳಿಯಿರಿ. ಯಾಕೆ ಅಂದ್ರೆ, 10 ವರ್ಷಗಳ ಹಿಂದೆ ಚಿನ್ನದ ಬೆಲೆ ಸುಮಾರು 30,000 ರೂಪಾಯಿ ಪ್ರತಿ 10 ಗ್ರಾಂಗೆ ಇತ್ತು. ಆದರೆ ಈಗ ಚಿನ್ನದ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ ಸಮೀಪಕ್ಕೆ ಬಂದು ತಲುಪಿದೆ!
ಬಂಗಾರದ ಬೆಲೆ ದಿಢೀರ್ ಏರಿಕೆ!
ಚಿನ್ನ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಬಂದ ಕಾರಣ ಚಿನ್ನ ಬೆಲೆ ಹೆಚ್ಚಾಗುತ್ತಿದೆ. ಒಂದೇ ದಿನ 24 ಕ್ಯಾರೆಟ್ ಶುದ್ಧ ಚಿನ್ನವು 5,500 ಪ್ರತಿ 100 ಗ್ರಾಂಗೆ ಏರಿಕೆ ಕಂಡು, 8,77,100 ರೂಪಾಯಿ ತಲುಪಿದೆ. ಹಾಗೇ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ, 550 ರೂಪಾಯಿ ಏರಿಕೆ ಕಂಡು 87,710 ರೂಪಾಯಿಗೆ ತಲುಪಿದೆ.
ಹೀಗಿದ್ದಾಗಲೇ, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 5,000 ರುಪಾಯಿ ಏರಿಕೆ ಕಂಡಿದೆ. ಹೀಗಾಗಿ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 8,04,000 ರೂಪಾಯಿ ಆಗಿದೆ. ಹಾಗೇ, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 500 ರೂಪಾಯಿ ಏರಿಕೆ ಕಂಡು 80,400 ರೂಪಾಯಿಗೆ ತಲುಪಿದೆ. ಹೀಗಾಗಿ ಆಭರಣ ಪ್ರಿಯರಲ್ಲಿ ಬೆಲೆ ಏರಿಕೆ ಇದೀಗ ಆತಂಕ ಹುಟ್ಟಿಸಿದೆ.












Click it and Unblock the Notifications