Gold Price: ಚಿನ್ನದ ಬೆಲೆ ಏರಿಕೆ, ಈಗ ರೇಟ್ ಹೀಗಿದೆ ನೋಡಿ!
ಚಿನ್ನದ ಬೆಲೆ ಕೈಗೆ ಸಿಗದ ವಸ್ತು ಆಗುವುದು ತುಂಬಾ ದಿನ ಉಳಿದಿಲ್ಲ ಅಂತಾ ಕಾಣುತ್ತದೆ, ಯಾಕಂದ್ರೆ ಚಿನ್ನ ಮತ್ತೆ ಏರಿದೆ. ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದ್ದು, ಮತ್ತೊಮ್ಮೆ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಚಿನ್ನಕ್ಕೆ ಡಿಮ್ಯಾಂಡ್ ಹೆಚ್ಚಾದ ಕಾರಣಕ್ಕೆ ಮತ್ತೊಮ್ಮೆ ಚಿನ್ನದ ಬೆಲೆ ಕೂಡ ಹೆಚ್ಚಳವಾಗಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟಿದೆ? ಬೆಂಗಳೂರಲ್ಲಿ ಚಿನ್ನ & ಬೆಳ್ಳಿಯ ಬೆಲೆ ಎಷ್ಟು? ಆ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ.
ಬಂಗಾರದ ಬೆಲೆ ಏರಿಕೆ ಕಾಣುತ್ತಿರುವ ರೀತಿ ನೋಡಿದರೆ, ಆದಷ್ಟು ಬೇಗ ಬೆಲೆಗೆ ಲಗಾಮು ಹಾಕಬೇಕಿದೆ. ಚಿನ್ನ ಇಷ್ಟಪಡುವ ಆಭರಣ ಪ್ರಿಯರಿಗೆ ಇದೀಗ ಬೆಲೆ ಏರಿಕೆಯ ಶಾಕ್ ಸಿಕ್ಕಂತಾಗಿದೆ. ಕಳೆದ ತಿಂಗಳು ಅಂದ್ರೆ 2025ರ ಮೇ ತಿಂಗಳಲ್ಲಿ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಸಿಕ್ಕಾಪಟ್ಟೆ ಏರಿಕೆ ಕಾಣುತ್ತಿದೆ. ಈ ಮೂಲಕ, ಆಭರಣ ಇಷ್ಟಪಡುವ ಮಹಿಳೆಯರಿಗೆ ಭಾರಿ ಶಾಕ್ ಸಿಕ್ಕಂತಾಗಿದೆ. ಚಿನ್ನ.. ಚಿನ್ನ.. ಚಿನ್ನ.. ಅಂತಾ ಚಿನ್ನದ ಖರೀದಿಗೆ ಕಾಯುತ್ತಿದ್ದ ಜನರಿಗೂ ಇದರಿಂದ ಶಾಕ್ ಸಿಕ್ಕಂತಾಗಿದೆ. ಹಾಗಾದ್ರೆ ಇದೀಗ ಚಿನ್ನದ ಬೆಲೆ ಎಷ್ಟಿದೆ?

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ!
ಭಾರತದಲ್ಲಿ ಚಿನ್ನಕ್ಕೆ ಸಾಕಷ್ಟು ಮಹತ್ವ ಕೊಡುತ್ತಾರೆ ಜನ, ಯಾಕಂದ್ರೆ ಚಿನ್ನ ಸಂಕಷ್ಟ ಬಂದ ಸಮಯದಲ್ಲಿ ಕೂಡ ಕೈಹಿಡಿದು ಕಾಪಾಡುತ್ತದೆ. ಮೈಮೇಲೆ ಚಿನ್ನ ಹಾಕಿಕೊಂಡು ಮೆರೆಯುವುದು ಮಾತ್ರವಲ್ಲ, ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಜೀವನ ಕೂಡ ಚನ್ನಾಗಿ ಇರುತ್ತದೆ ಎಂಬುದು ನಮ್ಮವರ ನಂಬಿಕೆ. ಹೀಗಾಗಿಯೇ ಚಿನ್ನದ ಮೇಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನ ಮಾಡುತ್ತಾರೆ ನಮ್ಮ ಭಾರತೀಯರು. ಹೀಗಿದ್ದಾಗಲೇ ಚಿನ್ನದ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ ಆಗುತ್ತಿದೆ...
ಚಿನ್ನದ ಬೆಲೆ ಭರ್ಜರಿ ಏರಿಕೆ!
ಶುದ್ಧ ಚಿನ್ನ ಅರ್ಥಾತ್ 24 ಕ್ಯಾರೆಟ್ ಚಿನ್ನ ಬೆಲೆ ಏರಿಕೆ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 9,96,000 ರೂಪಾಯಿ ತಲುಪಿದೆ. ಹಾಗೇ 24 ಕ್ಯಾರೆಟ್ ಚಿನ್ನ ಬೆಲೆಯು ಪ್ರತಿ 10 ಗ್ರಾಂಗೆ 99,600 ಆಗಿದೆ. ಹಾಗೇ ಮತ್ತೊಂದು ಕಡೆ ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಕಂಡಿದೆ, ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆಯು ಈಗ 9,13,000 ರೂಪಾಯಿ ಆಗಿದೆ. ಹಾಗೇ 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ ಇದೀಗ 91,300 ರೂಪಾಯಿ ಆಗಿದೆ. ಹೀಗಾಗಿ ಆಭರಣ ಪ್ರಿಯರು ಚಿನ್ನದ ಬೆಲೆ ಏರಿಕೆ ನಂತರ ಮತ್ತೆ ತಲೆ ಕೆಡಿಸಿಕೊಂಡು ಕೂರುವ ಪರಿಸ್ಥಿತಿ ಇದೆ. ಇನ್ನೊಂದು ಕಡೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಕೂಡ ದಟ್ಟವಾಗಿದೆ.












Click it and Unblock the Notifications