Gold Price: ಚಿನ್ನದ ಬೆಲೆಯಲ್ಲಿ 7,600 ರೂಪಾಯಿ ಭಾರಿ ಏರಿಕೆ, ಈಗ ಎಷ್ಟಿದೆ ಬೆಲೆ?
ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಭರ್ಜರಿ ಏರಿಕೆ ಕಂಡುಬಂದಿದೆ, ಈ ಮೂಲಕ ಚಿನ್ನವನ್ನ ಖರೀದಿ ಮಾಡಬೇಕು ಅಂತಾ ಕಾಯುತ್ತಿದ್ದ ಜನರಿಗೆ ದೊಡ್ಡ ಆಘಾತವೇ ಎದುರಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಅಂದಹಾಗೆ ಇಂದು ಒಂದೇ ದಿನದಲ್ಲಿ ಚಿನ್ನ ಬೆಲೆಯಲ್ಲಿ 7,600 ರೂಪಾಯಿ ಭಾರಿ ಏರಿಕೆ ಕಂಡು ಬಂದಿದ್ದು, ಈ ಮೂಲಕ ಮತ್ತೆ ಚಿನ್ನದ ಬೆಲೆ ಗಗನಕ್ಕೆ ಏರಿದೆ. ಹಾಗಿದ್ರೆ ಇದೀಗ ಎಷ್ಟಿದೆ ಬಂಗಾರದ ಬೆಲೆ? ಬೆಳ್ಳಿ ಬೆಲೆ ಎಷ್ಟಿದೆ? ಬನ್ನಿ ತಿಳಿಯೋಣ.
ಶುಭಕಾರ್ಯದಲ್ಲಿ ಚಿನ್ನ ಬಹುತೇಕ ಎಲ್ಲಾ ವಿಚಾರದಲ್ಲೂ ಅತ್ಯಗತ್ಯ ಎನ್ನಬಹುದು. ಚಿನ್ನದ ಬಗ್ಗೆ ಹೇಳುತ್ತಾ ಹೋದರೆ ಪುಸ್ತಕ ಬರೆಯಬಹುದು. ಯಾಕಂದ್ರೆ ಅಮೂಲ್ಯವಾದ ವಸ್ತು ಚಿನ್ನ ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಸಾಕಷ್ಟು ವಿಧದಲ್ಲಿ ಆಧಾರವಾಗಿದೆ ಹೀಗೆ ಸಾವಿರಾರು ವರ್ಷಗಳಿಂದ ಮನುಷ್ಯರ ಜೀವನದಲ್ಲಿ ಚಿನ್ನ ಬೆರೆತು ಹೋಗಿದೆ. ಭಾರತೀಯ ಸಂಪ್ರದಾಯದ ಪ್ರಕಾರ ಯಾವುದೇ ಶುಭಕಾರ್ಯಗಳು ನಡೆಯಲು ಚಿನ್ನ ಅತ್ಯಗತ್ಯ. ಚಿನ್ನ ಇಲ್ಲದೆ ಶುಭಕಾರ್ಯ ನಡೆಯುವುದಿಲ್ಲ ಎನ್ನಬಹುದು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದ್ದು, ಚಿನ್ನದ ಬೆಲೆ ಕೂಡ ರಾಕೆಟ್ ರೀತಿ ಒಂದೇ ಸಮನೇ ಮೇಲೆ ಏರುತ್ತಿದೆ! ಹಾಗಾದ್ರೆ ಈಗ ಚಿನ್ನದ ಬೆಲೆ ಎಷ್ಟಿದೆ?

ಚಿನ್ನ & ಬೆಳ್ಳಿ ಬೆಲೆ ಭರ್ಜರಿ ಏರಿಕೆ!
ಕರ್ನಾಟಕ & ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ ಕಂಡು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಪ್ರತಿ 100 ಗ್ರಾಂ 7,600 ರೂಪಾಯಿ ಹೆಚ್ಚಾಗಿದೆ. ಹೀಗೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ, ಪ್ರತಿ 100 ಗ್ರಾಂಗೆ 7,81,100 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂ 78,110 ರೂಪಾಯಿಗೆ ಏರಿಕೆ ಆಗಿದೆ.
ಬೆಳ್ಳಿ ಬೆಲೆ 2,000 ರೂಪಾಯಿ ಏರಿಕೆ!
ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,000 ರೂಪಾಯಿ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 700 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 71,600 ರೂಪಾಯಿ ಆಗಿದೆ. ಹಾಗೇ ಮತ್ತೊಂದು ಕಡೆ, ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 2,000 ರೂಪಾಯಿ ಏರಿಕೆ ಕಂಡು 91,500 ರೂಪಾಯಿಗೆ ಈಗ ಮಾರಾಟ ಆಗುತ್ತಿದೆ. ಇದು ಆಭರಣ ಪ್ರಿಯರಲ್ಲಿ ಒಂದಷ್ಟು ಟೆನ್ಷನ್ ಕೂಡ ನೀಡಿದೆ.












Click it and Unblock the Notifications