Gold Price: ಚಿನ್ನದ ಬೆಲೆ 4,500 ರೂಪಾಯಿ ಭರ್ಜರಿ ಕುಸಿತ, ಈಗ ಎಷ್ಟಿದೆ ಬಂಗಾರದ ಬೆಲೆ?

ಚಿನ್ನ ಭರ್ಜರಿ ಬೇಡಿಕೆ ವಸ್ತು ಆಗಿರುವ ಹಿನ್ನೆಲೆ ಚಿನ್ನ ಖರೀದಿಗೆ ಜನರು ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಬಂಗಾರದ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿದ್ದು, ಇನ್ನೇನು ಸುಲಭವಾಗಿ ಚಿನ್ನ 1 ಲಕ್ಷ ರೂಪಾಯಿ ತಲುಪಬಹುದು ಎನ್ನಲಾಗಿತ್ತು. ನಿನ್ನೆ & ಮೊನ್ನೆ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡುಬಂದು ಜನರು ಚಿಂತೆ ಮಾಡುವ ರೀತಿ ಆಗಿತ್ತು. ಆದರೆ ಇವತ್ತು ದಿಢೀರ್ ಚಿನ್ನದ ಬೆಲೆಯು 4,500 ರೂಪಾಯಿ ಭರ್ಜರಿ ಕುಸಿತ ಕಂಡಿದೆ!

ಚಿನ್ನ ಕೇವಲ ಲೋಹವಲ್ಲ ಚಿನ್ನ ಎಂಬುದು ಅಪರೂಪದ ವಸ್ತು ಕೂಡ. ಚಿನ್ನ ಆಭರಣಗಳಿಗೆ ಮಾತ್ರವಲ್ಲ ಹಲವು ವಿಚಾರದಲ್ಲೂ ಬಳಕೆ ಆಗುತ್ತೆ ಈ ಅಮೂಲ್ಯ ಲೋಹವನ್ನ ಪ್ರತಿಯೊಂದು ದೇಶವೂ ರಕ್ಷಣೆ ಮಾಡುತ್ತದೆ. ಅದರಲ್ಲೂ ಚಿನ್ನ ಖರೀದಿ ಮಾಡಿ ಸಂಗ್ರಹ ಮಾಡುವುದು ಕೂಡ ಪ್ರತಿಯೊಂದು ದೇಶದ ಆರ್ಥಿಕತೆ ರಕ್ಷಿಸುವಲ್ಲಿ ಪ್ರಮುಖ ಪಾತ್ರ ಬೀರುತ್ತದೆ.

Gold Price Is Decreased By 4 500 Rupees Per 100 Gram On January 4th Of 2025

ಚಿನ್ನದ ಬೆಲೆ 4,500 ರೂಪಾಯಿ ಕುಸಿತ!

ಶ್ರೀಮಂತ ದೇಶಗಳು ಚಿನ್ನ ಖರೀದಿ ಮಾಡಿ ಅದನ್ನ ರಕ್ಷಿಸುತ್ತವೆ. ಹೀಗಿದ್ದಾಗಲೇ ಚಿನ್ನ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಾ ಇದ್ದು, ಬಡ ಜನರು ಚಿನ್ನ ಖರೀದಿ ಮಾಡುವುದೇ ಕಷ್ಟ ಆಗ್ತಿದೆ. ಮತ್ತೊಂದು ಕಡೆ ಇಂತಹ ಸಮಯದಲ್ಲೇ ಇಂದು ಒಂದೇ ದಿನ ಚಿನ್ನದ ಬೆಲೆ 4,500 ರೂಪಾಯಿ ಭರ್ಜರಿ ಕುಸಿತ ಕಂಡಿದೆ!

22 ಕ್ಯಾರೆಟ್ ಚಿನ್ನದ ಬೆಲೆ ಇಂದು...

ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನ ಕಂಡು, ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 4,500 ರೂಪಾಯಿ ಕುಸಿತ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆಯು ಇದೀಗ 450 ರೂಪಾಯಿ ಕಡಿತವಾಗಿದ್ದು, ಆಭರಣ ಚಿನ್ನದ ಬೆಲೆ ಕುಸಿತದ ನಂತರ ಪ್ರತಿ 10 ಗ್ರಾಂಗೆ 72,150 ರೂಪಾಯಿ ಬೆಲೆ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ.

24 ಕ್ಯಾರೆಟ್ ಚಿನ್ನ ಬೆಲೆ 10 ಗ್ರಾಂಗೆ 490 ರೂಪಾಯಿ ಕುಸಿತ ಕಂಡು 78,710 ರೂಪಾಯಿ ಆಗಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಕೂಡ ಇಂದು ಕುಸಿತ ಕಂಡು ಬಂದಿದ್ದು, ಇಂದು ಒಂದೇ ದಿನ ಬೆಳ್ಳಿ ಬೆಲೆಯಲ್ಲಿ 1,000 ರೂಪಾಯಿ ಕುಸಿತ ಕಂಡು ಬಂದಿದೆ. ಈ ಮೂಲಕ ಬೆಳ್ಳಿ ಬೆಲೆ ಒಂದೇ ದಿನದಲ್ಲಿ ಪ್ರತಿ 1 ಕೆ.ಜಿಗೆ 1,000 ರೂಪಾಯಿ ಕುಸಿತ ಕಂಡು 91,500 ರೂಪಾಯಿ ಆಗಿದೆ. ಹೀಗೆ ಶನಿವಾರದ ದಿನ ಆಭರಣ ಪ್ರಿಯರಿಗೆ ಭರ್ಜರಿ ಸುದ್ದಿ ಸಿಕ್ಕಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+