Gold Price: ಚಿನ್ನದ ಬೆಲೆಯಲ್ಲಿ 14,700 ರೂಪಾಯಿ ಮಹಾ ಕುಸಿತ, ಈಗ ಎಷ್ಟಿದೆ ಬೆಲೆ?
ಚಿನ್ನ & ಬೆಳ್ಳಿ ಪ್ರಿಯರಿಗೆ ಅಂದ್ರೆ ಆಭರಣ ಪ್ರಿಯ ಮಹಿಳೆಯರಿಗೆ ಭರ್ಜರಿ ಸುದ್ದಿ ಸಿಗುತ್ತಿದೆ. ಚಿನ್ನ & ಬೆಳ್ಳಿ ಬೆಲೆಯಲ್ಲಿ ಭಾರಿ ಭರ್ಜರಿ ಕುಸಿತ ಕಂಡು ಬರುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನ & ಬೆಳ್ಳಿ ಬೆಲೆ ಭಾರಿ ಇಳಿಕೆ ಕಾಣುತ್ತಿದೆ. ಹೀಗಾಗಿ ಚಿನ್ನ ಖರೀದಿಗೆ ಅಂತ ಕಾಯುತ್ತಿದ್ದ ಜನರಿಗೆ ಸಿಕ್ಕಾಪಟ್ಟೆ ಖುಷಿ ಆಗುತ್ತಿದೆ. ಅದರಲ್ಲೂ ಒಂದೇ ದಿನದಲ್ಲಿ ಬಂಗಾರ ಬೆಲೆ 14,700 ರೂಪಾಯಿ ಮಹಾ ಕುಸಿತ ಕಂಡಿದೆ!
ಚಿನ್ನದ ಬೆಲೆ ಕುಸಿತ ಕಂಡಾಗ ಷೇರು ಮಾರುಕಟ್ಟೆ ಮೇಲೆ ಏರುತ್ತದೆ ಎನ್ನುವ ವಾದ ಇದೆ. ಆದರೆ ಈಗ ಎಲ್ಲಾ ಉಲ್ಟಾ ಆಗುತ್ತಿದೆ. ಯಾಕಂದ್ರೆ ಒಂದು ಕಡೆ ಚಿನ್ನದ ಬೆಲೆ ಕುಸಿತವನ್ನ ಕಂಡರೂ, ಷೇರು ಮಾರುಕಟ್ಟೆ ಮೇಲೆ ಹೋಗುತ್ತಿಲ್ಲ. ಬದಲಾಗಿ ಷೇರು ಪೇಟೆ ಕೂಡ ಈಗ ಕುಸಿತ ಕಾಣುತ್ತಿದೆ. ಚಿನ್ನದ ಜೊತೆಯಲ್ಲಿ ಇದೀಗ ಬೆಳ್ಳಿ ಬೆಲೆ ಕೂಡ ಭಾರಿ ಪ್ರಮಾಣದಲ್ಲೇ ಕುಸಿತ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ? ಮುಂದೆ ಓದಿ.

ಚಿನ್ನ ಭಾರಿ ಕುಸಿತ, ಎಷ್ಟಿದೆ ಬೆಲೆ?
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಭಾರಿ ಇಳಿಕೆ ಕಂಡಿದ್ದು, ಪ್ರತಿ 100 ಗ್ರಾಂಗೆ 14,700 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ, ಬಂಗಾರದ ಬೆಲೆ ಪ್ರತಿ 100 ಗ್ರಾಂಗೆ 7,72,900 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂ 77,290 ರೂಪಾಯಿಗೆ ಇಳಿಕೆ ಕಂಡಿದೆ. ಜೊತೆಯಲ್ಲೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಭಾರಿ ಇಳಿಕೆ ಇದೀಗ ಕಂಡು ಬಂದಿದೆ.
ಅಂದಹಾಗೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ದಾಖಲು ಆಗಿದ್ದು, ಇದೀಗ 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 100 ಗ್ರಾಂಗೆ 13,500 ರೂಪಾಯಿ ಕುಸಿತ ಕಂಡಿದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 10 ಗ್ರಾಂಗೆ 1,350 ರೂಪಾಯಿ ಇಳಿಕೆಯ ಕಂಡಿದೆ. ಇದರ ಜೊತೆಗೆ ಬೆಳ್ಳಿ ಬೆಲೆ ಕೂಡ ಭಾರಿ ಪ್ರಮಾಣದಲ್ಲಿ ಕುಸಿದು ಬೀಳುತ್ತಿದೆ.
ಬೆಳ್ಳಿ ಬೆಲೆ ಎಷ್ಟು ರೂಪಾಯಿ?
22 ಕ್ಯಾರೆಟ್ ಆಭರಣ ಚಿನ್ನ ಕುಸಿತ ಕಂಡ ನಂತರ ಇದೀಗ ಬೆಲೆ ಪ್ರತಿ 100 ಗ್ರಾಂಗೆ 7,08,500 ರೂಪಾಯಿ ಆಗಿದೆ. ಹಾಗೇ ಮತ್ತೊಂದು ಕಡೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂ 70,850 ರೂಪಾಯಿ ಆಗಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆ ಒಂದೇ ದಿನ ಬರೋಬ್ಬರಿ 2000 ರೂಪಾಯಿ ಕುಸಿತ ಕಂಡು, ಇದೀಗ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 91,000 ರೂಪಾಯಿಗೆ ಇಳಿಕೆ ಕಂಡಿದೆ.
ಹೀಗೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರಿ ಇಳಿಕೆ ಕಾಣುತ್ತಿರುವ ಹಿನ್ನೆಲೆ ಆಭರಣ ಖರೀದಿ ಸುಲಭವಾಗುತ್ತಿದೆ. ಯಾಕಂದ್ರೆ ಮದುವೆಗಳ ಸೀಸನ್ ಇನ್ನೇನು ಶುರುವಾಗುತ್ತಿದ್ದು, ಅದಕ್ಕೂ ಮೊದಲೇ ಚಿನ್ನಕ್ಕೆ ಆರ್ಡರ್ ಕೊಡಲು ಜನರಿಗೆ ಕೂಡ ಸುಲಭವಾಗಲಿದೆ. ಮತ್ತೊಂದು ಕಡೆ ಆಭರಣ ಪ್ರಿಯರಿಗೆ ಕೂಡ ಚಿನ್ನದ ಬೆಲೆ ಏರಿಕೆ ಸುದ್ದಿ ಖುಷಿ ನೀಡುತ್ತಿದೆ.












Click it and Unblock the Notifications