Gold Price Hike: ಮತ್ತೆ ಭಾರೀ ದುಬಾರಿ ಆಯ್ತು ಚಿನ್ನ-ಬೆಳ್ಳಿ, ಎಷ್ಟಿದೆ ಇಂದಿನ ದರ?

ಚಿನ್ನ ಖರೀದಿ ದಿನದಿಂದ ದಿನಕ್ಕೆ ದುಬಾರಿಯಾಗುತ್ತಲೇ ಇದೆ. ಕಳೆದ ವಾರವೂ ಅಕ್ಷಯ ತೃತೀಯಕ್ಕೆ ಚಿನ್ನ ಹಾಗೂ ಬೆಳ್ಳಿ ದರ ಭಾರಿ ಏರಿಕೆ ಕಂಡಿತ್ತು. ಈ ವಾರದ ಆರಂಭದಲ್ಲಿ ಮಾತ್ರ ಸ್ಥಿರವಾಗಿದ್ದ ಬೆಲೆಯು ಕಳೆದ ಮೂರು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದೆ. ಇಂದು ಕೂಡ ಚಿನ್ನದ ದರ ಮತ್ತಷ್ಟು ಏರಿಕೆ ಕಂಡಿದೆ. ಇದರಿಂದ ಚಿನ್ನ ಖರೀದಿದಾರರಿಗೆ ದೊಡ್ಡ ಶಾಕ್‌ ಎದುರಾಗಿದೆ. ರಾಜ್ಯದಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ದರದ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ..

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ನೋಡುವುದಾದರೆ, 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 9,900 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 9,075 ರೂಪಾಯಿ ಹಾಗೂ 18 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ 7,425 ರೂಪಾಯಿಗೆ ತಲುಪಿದೆ. 22 ಕ್ಯಾರೆಟ್‌ ಚಿನ್ನದ ಮೇಲೆ ಪ್ರತಿ ಗ್ರಾಂಗೆ 50 ರೂಪಾಯಿ ಏರಿಕೆ ಕಂಡಿದೆ. 24 ಕ್ಯಾರೆಟ್‌ ಚಿನ್ನವು ಗ್ರಾಂ.ಗೆ 54 ರೂಪಾಯಿ ಹಾಗೂ 18 ಕ್ಯಾರೆಟ್‌ ಚಿನ್ನದ ದರ ಗ್ರಾಂ. ಮೇಲೆ 41 ರೂಪಾಯಿಗೆ ಹೆಚ್ಚಾಗಿದೆ.

Gold Price Increases Again Check May 7 Today Gold Rates Here

22 ಕ್ಯಾರೆಟ್ ಚಿನ್ನದ ಬೆಲೆ ಪಟ್ಟಿ ತಿಳಿಯುವುದಾದರೆ ಇಂದು ಪ್ರತಿ ಗ್ರಾಂ ದರ 9,075 ರೂಪಾಯಿ, 8 ಗ್ರಾಂ ಚಿನ್ನದ ದರ 72,600 ರೂಪಾಯಿ (400 ರೂ.ಏರಿಕೆ), 10 ಗ್ರಾಂ ಚಿನ್ನದ ದರವು 90,750 ರೂಪಾಯಿಗೆ (500 ರೂ.ಏರಿಕೆ) ತಲುಪಿದೆ. 100 ಗ್ರಾಂ ಚಿನ್ನದ ದರವು 9,07,500 ರೂಪಾಯಿಗೆ ಹೆಚ್ಚಳ ಕಂಡಿದ್ದು, ಬರೋಬ್ಬರಿ 5,000 ರೂಪಾಯಿ ಏರಿಕೆಯಾಗಿದೆ.

Take a Poll

24 ಕ್ಯಾರೆಟ್ ಚಿನ್ನದ ದರವು ಗ್ರಾಂಗೆ 9,900 ರೂಪಾಯಿ ಇದೆ. 8 ಗ್ರಾಂ.ಗೆ 79,200 ರೂಪಾಯಿಗೆ ಏರಿಕೆ. 10 ಗ್ರಾಂ.ಗೆ 99,000 ರೂಪಾಯಿಗೆ ಹೆಚ್ಚಳವಾಗಿದ್ದು, 100 ಗ್ರಾಂ.ಚಿನ್ನದ ದರವು 9,84,600 ರೂಪಾಯಿಯಿಂದ 9,90,000 ರೂಪಾಯಿಗೆ ಜಿಗಿದಿದೆ. 18 ಕ್ಯಾರೆಟ್‌ ಚಿನ್ನದ ದರವು ಗ್ರಾಂ.ಗೆ 7,425 ರೂಪಾಯಿಗೆ ಏರಿದೆ. 8 ಗ್ರಾಂ ಚಿನ್ನಕ್ಕೆ 59,400 ರೂಪಾಯಿ ಆಗಿದೆ. 10 ಗ್ರಾಂ.ಗೆ 74,250 ರೂಪಾಯಿಗೆ ಹೆಚ್ಚಳವಾಗಿದ್ದು, 100 ಗ್ರಾಂ ಚಿನ್ನದ ದರವು 7,38,400 ರೂಪಾಯಿಯಿಂದ 7,42,500 ರೂಪಾಯಿಗೆ ಏರಿದೆ. ಬರೋಬ್ಬರಿ 4,100 ರೂಪಾಯಿ ಏರಿದೆ.

Gold Price Increases Again Check May 7 Today Gold Rates Here

ಚಿನ್ನದ ದರ ಪಟ್ಟಿ

ದಿನಾಂಕ: 22 ಕ್ಯಾರೆಟ್‌ ಚಿನ್ನ; 24 ಕ್ಯಾರೆಟ್ ಚಿನ್ನ (ಪ್ರತಿ ಗ್ರಾಂ.ಗೆ)

ಮೇ 7: ₹9,075 ; ₹9,900

ಮೇ 6: ₹9,025 ; ₹9,846

ಮೇ 5: ₹8,775 ; ₹9,573

ಮೇ 4: ₹8,755 ; ₹9,551

ಮೇ 3: ₹8,755 ; ₹9,551

ಮೇ 2: ₹8,755 ; ₹9,551

ಮೇ 1: ₹8,775 ; ₹9,573

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 99 ರೂಪಾಯಿ ಹಾಗೂ ಪ್ರತಿ ಕೆ.ಜಿಗೆ 99,000 ರೂಪಾಯಿಗೆ ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+