Gold Price: ಚಿನ್ನದ ಬೆಲೆ 6,000 ರೂ. ಏರಿಕೆ, ದೀಪಾವಳಿಗೆ ಮೊದಲೇ ಬಂಗಾರದ ಬೆಲೆ 1 ಲಕ್ಷ ರೂಪಾಯಿ?

ಚಿನ್ನ.. ಚಿನ್ನ.. ಚಿನ್ನ.. ಹೀಗೆ ದೀಪಾವಳಿ ಹಬ್ಬಕ್ಕೆ ಮೊದಲು ಆಭರಣ ಪ್ರಿಯರು ಬಂಗಾರದ ಖರೀದಿಗೆ ಕಾಯುತ್ತಿದ್ದಾರೆ. ಬಂಗಾರದ ಬೆಲೆಯಲ್ಲಿ ಹೀಗಿದ್ದಾಗ ಭಾರಿ ಇಳಿಕೆ ಆಗಲಿದೆ ಅಂತಾನೇ ಜನ ಎದುರು ನೋಡುತ್ತಿದ್ದರು. ನಿನ್ನೆ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಕೂಡ ಆಗಿತ್ತು, ಆದರೆ ಇವತ್ತು ದಿಢೀರ್ ಆಘಾತವೇ ಎದುರಾಗಿದೆ. ಯಾಕಂದ್ರೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 6,000 ರೂಪಾಯಿ ಏರಿಕೆ ಕಂಡಿದೆ. ಹಾಗಾದ್ರೆ ಇಂದು ಎಷ್ಟಿದೆ ಚಿನ್ನ & ಬೆಳ್ಳಿಯ ಬೆಲೆ? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿ, ಆಭರಣ ಪ್ರಿಯರಿಗೆ ದೊಡ್ಡ ಆಘಾತವೇ ಸಿಕ್ಕಿದೆ. ಈ ಹಿಂದೆ ಅಂದ್ರೆ ಕಳೆದ ಕೆಲ ದಿನಗಳಿಂದ ಚಿನ್ನ ನಿರಂತರ ಇಳಿಕೆ ಕಂಡಿತ್ತು. ಆದ್ರೆ ದಿಢೀರ್ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಮಹಿಳೆಯರಿಗೆ ಚಿನ್ನದ ಮೇಲೆ ಬೆಟ್ಟದಷ್ಟು ಪ್ರೀತಿ ಇರುತ್ತದೆ. ಹೀಗೆ ಕೆಜಿ ಕೆಜಿ ಚಿನ್ನ ಇದ್ದರೂ ಮತ್ತಷ್ಟು ಚಿನ್ನ ಬೇಕು ಎಂಬ ಆಸೆ ಪ್ರತಿಯೊಬ್ಬ ಮಹಿಳೆಯರಲ್ಲಿ ಕೂಡ ಇರುತ್ತೆ. ಜೊತೆಗೆ ಹೂಡಿಕೆ ಮಾಡುವವರಿಗೆ ಕೂಡ ಚಿನ್ನವೇ ಬೆಸ್ಟ್ ಆಯ್ಕೆ. ಹಾಗಿದ್ರೆ ಭಾರತದಲ್ಲಿ ಚಿನ್ನದ ಬೆಲೆ ಇದೀಗ ಎಷ್ಟಿದೆ? ಬೆಂಗಳೂರಿನಲ್ಲಿ ಚಿನ್ನದ ರೇಟ್ ಎಷ್ಟಿದೆ? ಮುಂದೆ ಓದಿ.

Gold Price Increased By 6 000 Rupees Per 100 Gram

ಚಿನ್ನದ ಬೆಲೆ 8,04,500 ರೂಪಾಯಿ...

ಶುದ್ಧ ಚಿನ್ನ ಎನ್ನುವ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 6,500 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ, ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 8,04,500 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 80,450 ರೂಪಾಯಿಗೆ ಏರಿಕೆ ಆಗಿದೆ.

ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿದೆ ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 6,000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 600 ರೂಪಾಯಿ ಏರಿಕೆಯಾಗಿದೆ. ಆಭರಣ ಚಿನ್ನ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 73,750 ರೂಪಾಯಿಗೆ ಮಾರಾಟ ಆಗುತ್ತಿದೆ.

ಬಂಗಾರಕ್ಕೆ ಯುದ್ಧಗಳು ನಡೆದು ಹೋಗಿವೆ!

ಚಿನ್ನಕ್ಕಾಗಿ ಈ ಜಗತ್ತಿನಲ್ಲಿ ಅದೆಷ್ಟೋ ಯುದ್ಧಗಳು ನಡೆದಿವೆ, ಅದೆಷ್ಟೋ ಹಿಂಸೆಗಳು ತಲೆ ಎತ್ತಿವೆ. ಯಾಕಂದ್ರೆ ಸಾವಿರಾರು ವರ್ಷಗಳಿಂದ ಕೂಡ ಮನುಷ್ಯ ಚಿನ್ನವನ್ನು ಬಳಸುತ್ತಾ ಬಂದಿದ್ದಾನೆ. ಈ ಕಾರಣಕ್ಕೆ ಬಂಗಾರದ ಬೆಲೆ ಕೂಡ ಸಾಕಷ್ಟು ಏರಿಕೆ ಕಂಡಿದೆ. ನೂರಾರು ವರ್ಷಗಳ ಹಿಂದೆ ಹೀಗೆ ಬಂಗಾರದ ನಾಣ್ಯಗಳನ್ನೇ ಚಲಾವಣೆ ಮಾಡುತ್ತಿದ್ದರು. ಆ ನಂತರ ಬಂಗಾರ ದುಬಾರಿ ಆಗುತ್ತಾ, ಆಗುತ್ತಾ ಬಂದು ಈಗ ಸುಮಾರು 1 ಲಕ್ಷ ರೂಪಾಯಿ ಆಸುಪಾಸಿಗೆ ಬಂದಿದೆ. ಇದು ಆಭರಣವನ್ನು ಇಷ್ಟಪಡುವ ಜನರಿಗೆ ಬೇಸರ ತರಿಸಿದ್ದರೆ, ಅದೇ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಮಾತ್ರ ಸಖತ್ ಖುಷಿ ಕೊಟ್ಟಿದೆ. ಯಾಕಂದ್ರೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಭರ್ಜರಿ ಲಾಭವನ್ನ ತಂದುಕೊಡುತ್ತಿದೆ ಚಿನ್ನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+