Gold Price: ಚಿನ್ನದ ಮೇಲೆ ಹಣ ಹೂಡಿದರೆ ಭರ್ಜರಿ ಲಾಭ! ಹೂಡಿಕೆ ಹೇಗೆ, ಸಲಹೆಗಳು
ಬೆಂಗಳೂರು, ನವೆಂಬರ್ 23: ಭಾರತದಂತಹ ಜನಸಂಖ್ಯೆ ಹೆಚ್ಚಿರುವ ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದರೂ ಸಹಿತ ಬೇಡಿಕೆ ಮಾತ್ರ ಇಳಿಕೆ ಆಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ. ನವೆಂಬರ್ 19ರಂದು 7000 ರೂ.ಗೂ ಅಧಿಕ ಬೆಲೆ ಏರಿಕೆ ಆಗಿದೆ. ಭವಿಷ್ಯದಲ್ಲಿ ಇನ್ನಷ್ಟು ದರ ಹೆಚ್ಚಿಸಿಕೊಳ್ಳಲಿರುವ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಲಾಭ ಹೆಚ್ಚು ಎನ್ನುತ್ತಾರೆ ತಜ್ಞರು. ಹಾಗಾದರೆ ಹೂಡಿಕೆ ಹೇಗೆ, Gold Mutual Fund ಹೂಡಿಕೆಯ ಆಯ್ಕೆಗಳು, ಸುರಕ್ಷತೆ ಕುರಿತ ವಿಷಯ ಇಲ್ಲಿದೆ.
ದೇಶದಲ್ಲಿ ಕೆಲವೇ ವಾರಗಳಲ್ಲಿ ಚಿನ್ನದ ಬೆಲೆ ಏರುಗತಿಯಲ್ಲಿ ಸಾಗಿದೆ. ಕಳೆದ 2023ರ ದೀಪಾವಳಿ ವೇಳೆ 6000 ರೂ.ನಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ ಈ ವರ್ಷದ ದೀಪಾವಳಿ ಹೊತ್ತಿಗೆ ಶೇ.30ರಷ್ಟು ಅಂದರೆ 7850 ರೂ.ನಷ್ಟು ಏರಿಕೆ ಆಗಿದೆ. ಈ ಕಾರಣದಿಂದಲೇ ಚಿನ್ನದ ಮೇಲಿನ ಹೂಡಿಕೆಯು ಲಾಭದ ದಾರಿ ಎಂದು ಷೇರು ಮಾರುಕಟ್ಟೆಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಆಭರಣಗಳ ಮೇಲಿನ ಹೂಡಿಕೆ ಚಿನ್ನದ ಮೇಲಿನ ಹೂಡಿಕೆಯೇ?
ಮದುವೆ, ಹಬ್ಬ ಹರಿದಿನಗಳು ಇನ್ನಿತರ ಶುಭ ಸಮಾರಂಭಗಳಲ್ಲಿ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹಾಗಾದರೆ ಒಡವೆ, ಇನ್ನಿತರ ಚಿನ್ನಾಭರಣಗಳ ಮೇಲೆ ಹೂಡಿಕೆಯು ನಿಜವಾದ ಹೂಡಿಕೆಯೇ ಎಂದರೆ ಅಲ್ಲ ಎನ್ನಬಹುದು. ಯಾಕೆಂದರೆ ವೇಸ್ಟೇಜ್ ಚಾರ್ಜ್ ಇತರ ಮೇಕಿಂಗ್ ಶುಲ್ಕ ವಿಧಿಸಲಾಗುತ್ತದೆ. ಜಿಎಸ್‌ಟಿ ಸಹ ಇರುತ್ತದೆ. ಒಳ್ಳೆಯ ಚಿನ್ನ ನಿಮಗೆ ನೀಡಿದ್ದ ಎಂಬುದು ಖಾತ್ರಿ ಇರುವುದಿಲ್ಲ.
ಆದ್ದರಿಂದ ಹೂಡಿಕೆಗೆ ಆಸಕ್ತಿ ಇರುವವರು Gold ETF, Gold Mutual Fund, Digital gold ನಂತವುಗಳ ಮೇಲೆ ನೀವು ಹೂಡಿಕೆ ಮಾಡಬೇಕು. ಇವು ಬೇರೆ ಬೆರೆ ಬಂಗಾರ ಸಂಬಂಧಿ ಸ್ಟಾಕ್‌ಗಳ ಮೇಲೆ ಹೂಡಿಕೆ ಮಾಡಿರುತ್ತವೆ. ಬಂಗಾರಕ್ಕೆ ಸದಾ ಬೇಡಿಕೆ ಇರುವ ಕಾರಣ ಅದರ ಮೇಲಿನ ಹೂಡಿಕೆಯಿಂದ ನೀವು ಕನಿಷ್ಠ ಬಡ್ಡಿ/ಲಾಭ ಪಡೆಯಲು ಸಾಧ್ಯವಾಗುತ್ತದೆ.
ಆಸಕ್ತ ಹೂಡಿಕೆದಾರರಿಗೆ ಸಲಹೆಗಳು ಏನು?
ನೀವು ವೈಯಕ್ತಿಕ ಆಸಕ್ತಿ ಮೇರೆಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತೀರಿ ಎಂದಾದರೆ, 1000 ರೂಪಾಯಿಯಲ್ಲಿ ಸುಮಾರು 100-200 ರೂ.ನಷ್ಟು ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ದೀರ್ಘಾವಧಿ ಹೂಡಿಕೆ ಆದರೆ ಉತ್ತಮ. ಏಕೆಂದರೆ ಯಾವುದೇ ಚಿನ್ನದ ಹೂಡಿಕೆ ಆಯ್ಕೆಗಳು ಸಹ ವಾರ್ಷಿಕವಾಗಿ ಕನಿಷ್ಠ ಶೇಕಡಾ 10-15ರಷ್ಟಾದರೂ ಲಾಭ ತಂದು ಕೊಟ್ಟಿವೆ. ಚಿನ್ನದ ಬೆಲೆ ಕೊಂಚ ಇಳಿಕೆ ಆದರೂ ನೀವು ಲಾಭದಲ್ಲಿ ಇರುತ್ತೀರಿ.
Gold Mutual Fund ಎಂದರೇನು?
ಚಿನ್ನಕ್ಕೆ ಸಂಬಂಧಿಸಿದ ಸ್ವತ್ತುಗಳ ಮೇಲೆ ಇಲ್ಲವೇ ಚಿನ್ನದ ಮೇಲೆ ಸ್ಥಿರವಾಗಿ ಹೂಡಿಕೆ ಮಾಡುವುದನ್ನು ಗೋಲ್ಡ್ ಮ್ಯೂಚುವಲ್ ಫಂಡ್ ಎನ್ನಬಹುದು. ಹೂಡಿಕೆಗೆ ಮೊದಲು ಷೇರು ಮಾರುಕಟ್ಟೆಯ ಜ್ಞಾನ ಅಗತ್ಯವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಚಿನ್ನವನ್ನು ಅಡಮಾನ ಇಟ್ಟು ಸಾಲ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿದು ಬಂದಿದೆ.
ಗೋಲ್ಡ್ ಮೇಲೆ ಹೂಡಿಕೆಯ ಆಯ್ಕೆಗಳು
ಷೇರು ಹೂಡಿಕೆಯ ವೇದಿಕೆ (mobile app) ಮೂಲಕ ನೀವು ಪರಾಮರ್ಶಿಸಿ ಹೂಡಿಕೆ ಮಾಡಬಹುದಾಗಿದೆ. ಮಾರುಕಟ್ಟೆಯಲ್ಲಿ SBI Direct Plan Growth, Axis Gold Plan Growth, HDFC gold direct plan ಸೇರಿದಂತೆ ಹಲವು ಹೂಡಿಕೆಯ ಆಯ್ಕೆಗಳಿವೆ. ನೀವು ಮೊಬೈಲ್ ಸಹಾಯದಿಂದಲೇ ಹೂಡಿಕೆ ಮಾಡಬಹುದು. ಹಿಂದಿನ ವರ್ಷಗಳು ಮಾರುಕಟ್ಟೆಯಲ್ಲಿ ಹೂಡಿಕೆ, ಕಂಪನಿಯ ಒಟ್ಟು ವಹೀವಾಟು, ಲಾಭಾಂಶ, ಬೆಳವಣಿಗೆ, ಮಾರುಕಟ್ಟೆಯಲ್ಲಿ ಕಂಪನಿಯ ಮೌಲ್ಯ, ವಾರ್ಷಿಕ ಲಾಭಾಂಶ ನೋಡಿಕೊಂಡು ಹೂಡಿಕೆ ಮಾಡಬಹುದಾಗಿದೆ.
ಚಿನ್ನದ ಮೇಲಿನ ಏರಿಳಿತಗಳು ನೀವು ಹೂಡಿಕೆ ಮಾಡಿರುವ Gold MF ಮೇಲೆ ಪ್ರಭಾವ ಬೀರುತ್ತವೆ. ಅದನ್ನು ನೀವು ಗಮನಿಸಬಹುದಾಗಿದೆ. ಹೂಡಿಕೆದಾರರು ವಿವಿಧ ಸ್ಟಾಕ್‌ಗಳ ಮೇಲೆ ಹೂಡಿಕೆ, SIP (ವ್ಯವಸ್ಥಿತ ಹೂಡಿಕೆ ಯೋಜನೆ) ಮಾಡುವ ಜೊತೆಗೆ ಚಿನ್ನದ ಮೇಲೆ ಹೂಡಿಕೆ ಮಾಡದರೆ, ಅದು ಇತರ ಹೂಡಿಕೆಯಲ್ಲಿನ ನಷ್ಟವನ್ನು ಸರಿದೂಗಿಸಲಿದೆ. ತಕ್ಕ ಮಟ್ಟಿನ ಲಾಭ ನೀಡಲಿದೆ ಎಂಬುದು ತಜ್ಞರ ಸಲಹೆಯಾಗಿದೆ. ಅದಕ್ಕಾಗಿ ಬೇರೆ ಬೇರೆ ವೇದಿಕೆಗಳ ಮೂಲಕ ನೀವು ಹೂಡಿಕೆ ಮಾಡಬಹುದು.
(ವಿಶೇಷ ಸೂಚನೆ: ಮಾರುಕಟ್ಟೆ ಹೂಡಿಕೆ ಅಪಾಯ, ಲಾಭ-ನಷ್ಟದ ಜ್ಞಾನ ಅರಿತು, ನಿಮ್ಮ ವೈಯಕ್ತಿಕ ಆಸಕ್ತಿ ಮೇರೆಗೆ ಹೂಡಿಕೆ ಮಾಡಬೇಕು. ಮಾಹಿತಿಗಾಗಿ ಮಾತ್ರವೇ ಈ ಲೇಖನ ಪರಿಗಣಿಸಬೇಕು)












Click it and Unblock the Notifications