Gold Rate: ಚಿನ್ನದ ಬೆಲೆ ಭರ್ಜರಿ ಏರಿಕೆ; ಬೆಳ್ಳಿ ದರ ಹೇಗಿದೆ?

ಸತತ ಎರಡು ದಿನಗಳ ಕಾಲ ಕುಸಿತ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಎರಡು ದಿನ ಸತತವಾಗಿ ಸುಮಾರು 2000 ರೂಪಾಯಿಗಳಷ್ಟು ಕುಸಿದಿದ್ದ ಚಿನ್ನದ ಬೆಲೆ ಶುಕ್ರವಾರ ಒಂದೇ ದಿನ 4300 ರೂಪಾಯಿ ಏರಿಕೆ ಕಂಡಿದೆ.

ಕಳೆದ ಎರಡು ದಿನಗಳಿಂದ ಕುಸಿದಿದ್ದ ಚಿನ್ನದ ಬೆಲೆ ಆಭರಣ ಪ್ರಿಯರಲ್ಲಿ ಸಂತಸ ತಂದಿತ್ತು. ಆದರೆ ಶುಕ್ರವಾರ ಮತ್ತೆ ಏರಿಕೆಯಾಗಿದ್ದು, ಬಂಗಾರ ಮತ್ತಷ್ಟು ದುಬಾರಿಯಾಗಿದೆ. ಒಂದು ಗ್ರಾಂ ಆಭರಣ ಚಿನ್ನ (22 ಕ್ಯಾರೆಟ್) ಬೆಲೆ 40 ರೂಪಾಯಿ ಹೆಚ್ಚಾಗಿದ್ದು, 24 ಕ್ಯಾರೆಟ್ (ಶುದ್ಧ) ಚಿನ್ನದ ಬೆಲೆ ಒಂದು ಗ್ರಾಂಗೆ 43 ರೂಪಾಯಿ ಹೆಚ್ಚಳವಾಗಿದೆ.

Gold Price hike Rs 4300 on June 28th

ಗುರುವಾರ 6575 ರೂಪಾಯಿ ಇದ್ದ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಶುಕ್ರವಾರ 6615 ರೂಪಾಯಿಗೆ ಹೆಚ್ಚಾಗಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಬರೋಬ್ಬರಿ 4000 ರೂಪಾಯಿ ಹೆಚ್ಚಳವಾಗಿದೆ.

ಗುರುವಾರ 7,173 ರೂಪಾಯಿ ಇದ್ದ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 7216 ರೂಪಾಯಿಗೆ ಹೆಚ್ಚಳವಾಗಿದೆ. 7,17,300 ರೂಪಾಯಿ ಇದ್ದ 100 ಗ್ರಾಂ ಚಿನ್ನದ ದರ ಶುಕ್ರವಾರ 7,21,600 ರೂಪಾಯಿಗೆ ಹೆಚ್ಚಾಗಿದೆ.

ಚಿನ್ನದ ಬೆಲೆ ಏರಿಳಿತದ ಆಟವನ್ನು ಮುಂದುವರೆಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವುದು ಖಚಿತ ಎನ್ನಲಾಗಿದೆ.

ಬೆಳ್ಳಿ ದರ ಹೇಗಿದೆ?

ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದ್ದರೆ, ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಗುರುವಾರ 1500 ರೂಪಾಯಿ ಕುಸಿತ ಕಂಡು 89500 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ, ಶುಕ್ರವಾರ ಕೂಡ ಅದೇ ಬೆಲೆಗೆ ಮಾರಾಟವಾಗುತ್ತಿದೆ.

ಕುಸಿದ ಷೇರುಮಾರುಕಟ್ಟೆ

ಶುಕ್ರವಾರ ಭಾರತದ ಷೇರುಮಾರುಕಟ್ಟೆ ಅಲ್ಪ ಕುಸಿತ ಕಂಡಿದೆ. ಗುರುವಾರ 79243 ಅಂಕಗೊಂದಿಗೆ ಮುಕ್ತಾಯವಾಗಿದ್ದ ಷೇರು ಸೂಚ್ಯಂಕ, ಶುಕ್ರವಾರ 210 ಅಂಕಗಳಷ್ಟು ಕುಸಿತ ಕಂಡಿದೆ. 79032 ಅಂಕಗಳೊಂದಿಗೆ ಕೊನೆಯಾಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+