Gold Rate: ಎರಡು ದಿನಗಳಲ್ಲಿ ₹7,100 ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ಬೆಲೆ ಎಷ್ಟಿದೆ?

ಸೋಮವಾರ ಮತ್ತು ಮಂಗಳವಾರ (ಅಕ್ಟೋಬರ್ 14 & 15) ಇಳಿಕೆ ಕಂಡಿದ್ದ ಚಿನ್ನದ ಬೆಲೆ ಬಳಿಕ ಸತತ ಎರಡು ದಿನ ಭರ್ಜರಿ ಏರಿಕೆ ಕಂಡಿದೆ. ಬುಧವಾರ ಒಂದೇ ದಿನ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 49 ರೂಪಾಯಿ ಏರಿಕೆಯಾಗಿದ್ದರೆ, ಗುರುವಾರ ಕೂಡ 22 ರೂಪಾಯಿ ಏರಿಕೆಯಾಗಿದೆ. ಎರಡು ದಿನಗಳಲ್ಲಿ 100 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 7100 ರೂಪಾಯಿ ಏರಿಕೆಯಾಗಿದ್ದು ಆಭರಣ ಪ್ರಿಯರ ಜೇಬನ್ನು ಭಾರವಾಗಿಸಿದೆ.

ಇಸ್ರೇಲ್-ಇರಾನ್ ನಡುವೆ ಹೆಚ್ಚುತ್ತಿರುವ ಸಂಘರ್ಷ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕುಸಿತ ಸೇರಿದಂತೆ ಹಲವು ವಿಚಾರಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿದೆ. ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿದ ಕಾರಣ, ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿರುವ ಕಾರಣ ಬೆಲೆ ಕೂಡ ಸಾರ್ವಕಾಲಿಕ ದಾಖಲೆಯನ್ನು ಮುಟ್ಟಿದೆ.

Gold price hike by 2200 rs on october 17th

ಬುಧವಾರ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 7,789 ರೂಪಾಯಿ ಇದ್ದರೆ ಗುರುವಾರ 22 ರೂಪಾಯಿ ಏರಿಕೆಯಾಗಿದ್ದು, 7,811 ರೂಪಾಯಿಗೆ ತಲುಪಿದೆ. 100 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 2,200 ರೂಪಾಯಿ ಏರಿಕೆಯಾಗಿದ್ದು, 7,81,000 ರೂಪಾಯಿಗೆ ತಲುಪಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 78,110 ರೂಪಾಯಿಗಳಿಗೆ ತಲುಪಿದ್ದು, 80,000 ರೂಪಾಯಿ ಸನಿಹಕ್ಕೆ ಬಂದಿದೆ.

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೂಡ 20 ರೂಪಾಯಿ ಏರಿಕೆಯಾಗಿದೆ. ಬುಧವಾರ 7140 ರೂಪಾಯಿ ಇದ್ದ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ಗುರುವಾರ 7,160 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಏರಿಕೆಯಾಗಿದ್ದು, 71,600 ರೂಪಾಯಿಗೆ ತಲುಪಿದೆ.

18 ಕ್ಯಾರಟ್ ಚಿನ್ನದ ಬೆಲೆ ಕೂಡ ಪ್ರತಿ ಗ್ರಾಂಗೆ 16 ರೂಪಾಯಿ ಏರಿಕೆಯಾಗಿದೆ. ಬುಧವಾರ 5842 ರೂಪಾಯಿ ಇದ್ದ 18 ಕ್ಯಾರಟ್ ಚಿನ್ನದ ಬೆಲೆ ಗುರುವಾರ 5,858 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 1,600 ರೂಪಾಯಿ ಏರಿಕೆಯಾಗಿದೆ.

ಬೆಳ್ಳಿ ಧಾರಣೆ ಎಷ್ಟಿದೆ?

ಚಿನ್ನದ ಬೆಲೆಯಲ್ಲಿ ಸತತ ಎರಡು ದಿನವೂ ಏರಿಕೆಯಾಗಿದ್ದರೆ, ಬೆಳ್ಳಿ ಬೆಲೆ ಮಾತ್ರ ಸ್ಥಿರತೆ ಕಾಯ್ದುಕೊಂಡಿದೆ. ಅಕ್ಟೋಬರ್ 15ರಂದು 1500 ರೂಪಾಯಿ ಇಳಿಕೆ ಕಂಡು 92,000 ರೂಪಾಯಿಗೆ ಮಾರಾಟವಾಗುತ್ತಿದ್ದ ಒಂದು ಕೆಜಿ ಬೆಳ್ಳಿ ಬೆಲೆ ಬುಧವಾರ ಕೂಡ ಸ್ಥಿರತೆ ಕಾಯ್ದುಕೊಂಡಿತ್ತು. ಇಂದು ಕೂಡ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+