Gold Price: ಚಿನ್ನ ಬೆಲೆ 11,400 ಏರಿಕೆ, ಈಗ ಎಷ್ಟಿದೆ ಬಂಗಾರದ ಬೆಲೆ...
ಚಿನ್ನ.. ಚಿನ್ನ.. ಚಿನ್ನ.. ಹೀಗೆ ಚಿನ್ನ ಖರೀದಿ ಮಾಡಲು ಸದಾ ಕನಸಿನಲ್ಲೂ ಕನವರಿಸುತ್ತಿದ್ದ ಜನರಿಗೆ, ಆಭರಣ ಪ್ರಿಯರಿಗೆ ಇದೀಗ ಚಿನ್ನದ ಬೆಲೆ ಏರಿಕೆ ಚಿಂತೆ ತರಿಸಿದೆ. ಚಿನ್ನಕ್ಕೆ ಈಗ ಭಾರಿ ಭರ್ಜರಿ ಡಿಮ್ಯಾಂಡ್ ಬಂದುಬಿಟ್ಟಿದೆ, ಈ ಕಾರಣಕ್ಕೆ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಆಗುವ ನಿರೀಕ್ಷೆ ಮೂಡಿತ್ತು. ಹೀಗಿದ್ದಾಗಲೇ ಚಿನ್ನದ ಬೆಲೆ ಇದೀಗ ದಿಢೀರ್ ಸಿಕ್ಕಾಪಟ್ಟೆ ಏರಿಕೆ ಕಂಡುಬಿಟ್ಟಿದೆ. ಒಂದೇ ದಿನ ಚಿನ್ನದ ಬೆಲೆ 11,400 ರೂಪಾಯಿ ಭರ್ಜರಿ ಏರಿಕೆ ಕಂಡಿದ್ದು, ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಎಷ್ಟಿದೆ ಚಿನ್ನದ ಬೆಲೆ?
ಆಷಾಢ ಮಾಸ ಇನ್ನೇನು ಮುಗಿಯಿತು, ಶ್ರಾವಣ ಶುರುವಾಗುವ ಜೊತೆಗೆ ಸಾಲು ಸಾಲು ಮದುವೆಗಳು ಕೂಡ ಬರಲಿವೆ. ಹೀಗಾಗಿಯೇ ಕೋಟಿ, ಕೋಟಿ ಆಭರಣ ಪ್ರಿಯರು ಚಿನ್ನ ಖರೀದಿಗಾಗಿ ಕಾಯುತ್ತಾ ಕುಳಿತಿದ್ದರು. ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ ಮುಂದುವರಿದಿದೆ, ಅದರಲ್ಲೂ ಹಬ್ಬದ ಸಮಯದಲ್ಲಿ ಚಿನ್ನ ಬೆಲೆ ಇಳಿಕೆ ಆಗಬಹುದು ಈ ಮೂಲಕ ಚಿನ್ನ ಖರೀದಿ ಮಾಡೋಣ ಅಂತಾ ಜನರು ಕಾಯ್ತಾ ಇದ್ದರು. ಆದರೆ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡು ಆಘಾತ ನೀಡಿದೆ. ಅದರಲ್ಲೂ ಒಂದೇ ದಿನ ಚಿನ್ನದ ಬೆಲೆ 11,400 ರೂಪಾಯಿ ಭಾರಿ ಏರಿಕೆ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

1,00,000 ರೂಪಾಯಿ ಮೀರಿದ ಚಿನ್ನದ ಬೆಲೆ!
ಚಿನ್ನ ಸುಮಾರು 5000 ವರ್ಷಗಳಿಂದ ಮನುಷ್ಯರ ಜೀವನದಲ್ಲಿ & ವ್ಯವಹಾರದಲ್ಲಿ ಬೆರೆತು ಹೋಗಿದೆ. ಚಿನ್ನ ಇಲ್ಲದೆ ಮನುಷ್ಯ ಜೀವನ ನಡೆಸಲು ಆಗೋದೆ ಇಲ್ಲ ಅನ್ನುವಷ್ಟು ಅವಲಂಬನೆ ಕೂಡ ಶುರುವಾಗಿದೆ. ಹಲವು ರೀತಿ ಚಿನ್ನದ ಉಪಯೋಗ ಪಡೆಯಬಹುದಾಗಿದೆ ಇದೇ ಕಾರಣಕ್ಕೆ ಚಿನ್ನ ಅಂದ್ರೆ ಭಾರತೀಯರಿಗೆ ಇಷ್ಟ ಅಂತಾ ಹೇಳಬಹುದು. ಆದರೆ ಚಿನ್ನದ ಬೆಲೆ ಮಿತಿ ಮೀರಿ ಏರಿಕೆ ಕಂಡಿರುವ ಕಾರಣಕ್ಕೆ, ಆತಂಕ ಕೂಡ ಸೃಷ್ಟಿಯಾಗಿ ಜನರು ಬಂಗಾರ ಕೊಂಡುಕೊಳ್ಳಲು ಯೋಚನೆ ಮಾಡುವ ಸ್ಥಿತಿ ಇದೆ. 1,00,000 ರೂಪಾಯಿ ಮುಟ್ಟಿರುವ ಚಿನ್ನದ ಬೆಲೆ ಇದೀಗ ಮತ್ತೊಂದು ಹಂತ ತಲುಪಲು ಸಜ್ಜಾಗಿದೆ...
ಚಿನ್ನದ ಬೆಲೆ ಈಗ ಇಷ್ಟಿದೆ!
ಕರ್ನಾಟಕ & ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಶಾಕ್ ಕೊಟ್ಟಿದೆ. 100 ಗ್ರಾಂಗೆ 11,400 ರೂಪಾಯಿ ಏರಿಕೆ ಕಂಡಿರುವ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 10,12,000 ರೂಪಾಯಿ ಆಗಿದೆ. ಇದರ ಜೊತೆಗೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,01,000 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಭಾರಿ & ಭರ್ಜರಿ ಏರಿಕೆ ಕಂಡಿದೆ. ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡ ನಂತರ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 92,850 ರೂಪಾಯಿ ಆಗಿದೆ.












Click it and Unblock the Notifications