Gold Price: ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಈಗ ರೇಟ್ ಎಷ್ಟಿದೆ ತಿಳಿಯಿರಿ!
ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದ್ದು, ಒಂದಲ್ಲ & ಎರಡಲ್ಲ ಬರೋಬ್ಬರಿ 3,300 ರೂಪಾಯಿ ಹೆಚ್ಚಾಗಿದೆ ಚಿನ್ನದ ರೇಟ್. ಕಳೆದ ಕೆಲ ದಿನಗಳ ಕಾಲ ಕುಸಿತ ಕಂಡಿದ್ದ ಚಿನ್ನದ ಬೆಲೆ, ಈ ವಾರ ಕೂಡ ಕುಸಿತದ ಹಾದಿ ಹಿಡಿಯಲಿದೆ ಎಂಬ ಆತಂಕ ಇತ್ತು. ಆದರೆ ಕಳೆದ 2 ದಿನಗಳಿಂದಲೂ ನಿರಂತರವಾಗಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಅದರಲ್ಲೂ ಇಂದು ಒಂದೇ ದಿನ ಭರ್ಜರಿ 3,300 ರೂಪಾಯಿ ಏರಿಕೆ ಕಂಡಿದೆ ಚಿನ್ನದ ಬೆಲೆ!
ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡ ಬೆನ್ನಲ್ಲೇ, ಚಿನ್ನದ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ ಗ್ಯಾರಂಟಿ ಎನ್ನಲಾಗುತ್ತಿದೆ. ನೋಡ ನೋಡುತ್ತಲೇ ಚಿನ್ನದ ಬೆಲೆ ಆಕಾಶ ಮುಟ್ಟುತ್ತಿದೆ. ಅದರಲ್ಲೂ ಕೆಲ ದಿನಗಳಲ್ಲೇ ಆಷಾಢ ಮಾಸ ಬೇರೆ ಮುಗಿಯಲಿದೆ. ಹೀಗೆ ಆಷಾಢ ಮಾಸ ಮುಗಿದ ನಂತರ, ಶುಭ ಕಾರ್ಯಗಳು ಕೂಡ ಶುರು ಆಗಲಿವೆ. ಹೀಗಾಗಿ ಚಿನ್ನ ಮತ್ತಷ್ಟು ಏರಿಕೆ ಕಾಣುವ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹಾಗಾದ್ರೆ ಇದೀಗ ಚಿನ್ನದ ಬೆಲೆ ಏರಿಕೆ ಕಂಡ ನಂತರ, ಎಷ್ಟಿದೆ ಗೊತ್ತಾ ಬೆಲೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಚಿನ್ನದ ಬೆಲೆ ನಮ್ಮಲ್ಲಿ ಇಷ್ಟಿದೆ!
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಹೊಸ ದಾಖಲೆ ಸೃಷ್ಟಿ ಮಾಡಿದೆ. 100 ಗ್ರಾಂಗೆ 3,300 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,37,500 ರೂಪಾಯಿ ಆಗಿದೆ ಇದರ ಜೊತೆ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 73,750 ರೂಪಾಯಿಗೆ ಏರಿಕೆ ಆಗಿದೆ.
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಏರಿಕೆ ಕಂಡು, ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 3,000 ರೂಪಾಯಿ ಏರಿಕೆ ಆಗಿಬಿಟ್ಟಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆ ಈಗ 300 ರೂಪಾಯಿ ಏರಿಕೆ ಆಗಿದೆ. ಆಭರಣ ಚಿನ್ನ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 67,600 ರೂಪಾಯಿಗೆ ಮಾರಾಟ ಆಗುತ್ತಿದೆ. ಈ ಮೂಲಕ ಚಿನ್ನ ಖರೀದಿಗೆ ಕಾದು ಕೂತಿದ್ದ ಜನರಿಗೆ ಶಾಕ್ ಸಿಕ್ಕಂತಾಗಿದೆ.
ಚಿನ್ನದ ಬೆಲೆ 70,000 ರೂಪಾಯಿ?
ಮನುಷ್ಯ ನಾಗರಿಕತೆ ಕಡೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನ ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡಲ್ಲ. ಆದರೆ, ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದೆ. ಹೀಗಾಗಿ ಚಿನ್ನದ ಬೆಲೆ ಇದೀಗ ಮುಗಿಲು ಮುಟ್ಟುತ್ತಿದೆ. ಇದೀಗ ಚಿನ್ನದ ಬೆಲೆ 70,000 ರೂಪಾಯಿಗೆ ತಲುಪುವ ನಿರೀಕ್ಷೆ ದಟ್ಟವಾಗಿದೆ.
ಬೆಲೆ ಏರಿಕೆಗೆ ಕಾರಣ ಏನು?
ಚಿನ್ನಕ್ಕೆ ಸಖತ್ ಡಿಮ್ಯಾಂಡ್ ಬಂದಿದ್ದಕ್ಕೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿದ್ದು. ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲು ಇಷ್ಟಪಡುತ್ತಿದ್ದಾರೆ ಕೂಡ. ಏಪ್ರಿಲ್ ತಿಂಗಳಲ್ಲಿ, ಇತಿಹಾಸ ಬರೆದಿತ್ತು ಚಿನ್ನದ ಬೆಲೆ. ಹೀಗಿದ್ದಾಗ ಚಿನ್ನದ ಬೆಲೆ ನಂತರ ಹಾದಿಗೆ ಮರಳಿತ್ತು, ಅದರಲ್ಲೂ ತನ್ನ ಗರಿಷ್ಠ ಬೆಲೆಯಿಂದ ಚಿನ್ನದ ಬೆಲೆ ಮತ್ತೆ ಕೆಳಗೆ ಇಳಿಯುತ್ತಿತ್ತು. ಆದ್ರೆ ಈಗ ಶುಭ ಕಾರ್ಯಗಳು ಮತ್ತೆ ಆರಂಭ ಆಗಲಿರುವ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ ಎನ್ನಲಾಗಿದೆ. ಯಾಕಂದ್ರೆ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಚಿನ್ನವೇ ಮೊದಲ ಆಯ್ಕೆ. ಹೀಗಾಗಿ ಚಿನ್ನದ ಬೆಲೆ ಭಾರಿ ಏರಿಕೆ ಕಾಣುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications