Gold Price: ಚಿನ್ನದ ಬೆಲೆ ಭಾರಿ ಕುಸಿತ & 1,00,000 ರೂಪಾಯಿ ಒಳಗೆ ಸಿಗುತ್ತಾ?
ಚಿನ್ನದ ಬೆಲೆ ಭಾರಿ ಏರಿಕೆ ಆಗಿದೆ, ಭವಿಷ್ಯದಲ್ಲಿ ಚಿನ್ನ ಖರೀದಿ ಮಾಡಲು ಆಗುತ್ತೋ? ಇಲ್ಲವೋ? ಅಂತಾ ಚಿಂತೆ ಮಾಡುತ್ತಿದ್ದ ಮಧ್ಯಮ ವರ್ಗ & ಬಡವರಿಗೆ ಇದೀಗ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಏನಂದರೆ, ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ಕುಸಿತ ಕಂಡು ಬಂದಿದ್ದು, ಒಂದೇ ದಿನದಲ್ಲಿ ಚಿನ್ನದ ಬೆಲೆ ಭರ್ಜರಿಯಾಗಿ ಕುಸಿದು ಬಿದ್ದಿದೆ. ಹಾಗಾದ್ರೆ, ಈಗ ಎಷ್ಟಿದೆ ಚಿನ್ನದ ಬೆಲೆ? ಚಿನ್ನದ ಬೆಲೆ ಭಾರಿ ಕುಸಿತದ ನಂತರ 1,00,000 ರೂಪಾಯಿ ಒಳಗೆ ಸಿಗುತ್ತಾ?
ಚಿನ್ನ... ಬಂಗಾರ... ಅಂತಾ ಚಿನ್ನದ ಜಪ ಮಾಡುತ್ತಿದ್ದ ಜನರಿಗೆ ಇದೀಗ ಭರ್ಜರಿ ಸುದ್ದಿಯೇ ಸಿಗುತ್ತಿದೆ. ಒಂದು ಕಡೆ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದೆ, ಇನ್ನು ಮುಂದೆ ಹೇಗಪ್ಪಾ ಚಿನ್ನ ಖರೀದಿ ಮಾಡುವುದು? ಅನ್ನೋ ಚಿಂತೆ ಜನರಲ್ಲಿ ಇತ್ತು. ಆದರೆ ಇದೀಗ ಆ ಚಿಂತೆ & ಸಮಸ್ಯೆ ದೂರ ಆದಂತೆ ಕಾಣ್ತಿದೆ. ಅಂದ್ರೆ ದಿಢೀರ್ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದ್ದು, ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ. ಈ ಮೂಲಕ 1,00,000 ರೂಪಾಯಿ ಮೀರಿ ಹೋಗಿದ್ದ ಚಿನ್ನ ಬೆಲೆ ಇದೀಗ ಭಾರಿ ಕುಸಿತ ಕಂಡಿದೆ. ಹಾಗಾದ್ರೆ ಬೆಂಗಳೂರು & ಕರ್ನಾಟಕದಲ್ಲಿ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆ ಈಗ ಎಷ್ಟಿದೆ?
ಚಿನ್ನ ಖರೀದಿ ಯಾವಾಗ ಮಾಡಬೇಕು? ಚಿನ್ನ ಖರೀದಿ ಮಾಡಲು ಇದು ಸರಿಯಾದ ಸಮಯ? ಹೀಗೆ ಆಭರಣ ಪ್ರಿಯರು ಚಿನ್ನವನ್ನು ಖರೀದಿ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಮಾಡ್ತಿದ್ದಾರೆ. ಬಂಗಾರದ ಬೆಲೆಯು ಈ ರೀತಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದ ಕಾರಣ, ಆಭರಣ ಪ್ರಿಯರು ಚಿನ್ನ ಖರೀದಿಗೆ ಚಿಂತೆ ಮಾಡುವ ರೀತಿ ಆಗಿತ್ತು. ಆದರೆ, ಇದೀಗ ದಿಢೀರ್ ಚಿನ್ನದ ಬೆಲೆ ಭರ್ಜರಿಯಾಗಿ ಕುಸಿತ ಕಂಡಿದೆ. ಒಂದೇ ದಿನದಲ್ಲಿ ಹೀಗೆ, ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಜನರು ಕೂಡ ಸಖತ್ ಖುಷಿಯಾಗಿದ್ದಾರೆ!
ಭರ್ಜರಿ ಇಳಿಕೆ ಕಂಡ ಚಿನ್ನ ಬೆಲೆ!
ಚಿನ್ನದ ಬೆಲೆ ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣುವ ಮೂಲಕ, ಇದೀಗ ಭರ್ಜರಿ ಸುದ್ದಿಯನ್ನೇ ನೀಡುತ್ತಿದೆ. ಅಷ್ಟಕ್ಕೂ ಇದೀಗ 24 ಕ್ಯಾರೆಟ್ ಅಂದರೆ ಶುದ್ಧ ಚಿನ್ನದ ಬೆಲೆ, ಪ್ರತಿ 10 ಗ್ರಾಂಗೆ 1,00,970 ರೂಪಾಯಿಗೆ ಭಾರಿ ಭರ್ಜರಿ ಇಳಿಕೆ ಕಂಡಿದೆ. ಹಾಗೇ 22 ಕ್ಯಾರೆಟ್ ಚಿನ್ನ ಬೆಲೆ ಅಂದ್ರೆ ಆಭರಣ ಚಿನ್ನದ ಬೆಲೆ 92,550 ರೂಪಾಯಿಗೆ ಇಳಿಕೆ ಕಾಣುವ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು & ಚಿನ್ನ ಖರೀದಿಗೆ ಅಂತಾನೇ ಕಾಯುತ್ತಿದ್ದವರಿಗೆ ಸಖತ್ ಸುದ್ದಿ ಕೊಟ್ಟಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ಕೂಡ ಇದೀಗ ದಟ್ಟವಾಗಿದೆ.












Click it and Unblock the Notifications