Gold Silver Price: ಸಂಕ್ರಾಂತಿಗೆ ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್, ಚಿನ್ನದ ದರ ₹1100 ಇಳಿಕೆ
ಬೆಂಗಳೂರು, ಜನವರಿ 14: ದೇಶಾದ್ಯಂತ ಚಿನ್ನದ ಬೆಲ್ಲೆಯಲ್ಲಿ ಬದಲಾವಣೆ ಮುಂದುವರಿದಿದೆ. ಸಂಕ್ರಾಂತಿ ಹಬ್ಬದಂದು ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಆಗಿದೆ. ಒಟ್ಟು 22 ಕ್ಯಾರಟ್ ಚಿನ್ನದ ಬೆಲೆ 1000 ರೂ. ಮತ್ತು 24 ಕ್ಯಾರಟ್ ಬಂಗಾರದ ಬೆಲೆ 1100 ರೂಪಾಯಿ ಇಳಿಕೆ ಆಗಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಗೆ ಈ ಇಳಿಕೆ ಬೆಲೆ ಹೆಚ್ಚು ಅನುಕೂಲಕರವಾಗಿದೆ.
ಸಂಕ್ರಾಂತಿ ಹಬ್ಬದಂದು ಜನವರಿ 14ರಂದು ಅಪರಂಜಿ ಚಿನ್ನದ ಬೆಲೆ 8000 ರೂಪಾಯಿಗಿಂತ ಕಡಿಮೆಗೆ ಇಳಿಕೆ ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ 10 ಗ್ರಾಂ ಬೆಳ್ಳಿ ದರ 925ರೂಪಾಯಿ ಆಗಿದೆ. ಭಾರತದಲ್ಲಿ 22 ಕ್ಯಾರಟ್ ಹತ್ತು ಗ್ರಾಂ ಬಂಗಾರದ ಬೆಲೆ ನೆನ್ನೆ 73,400 ರೂ. ಇದ್ದದ್ದು, 73,300 ರೂಪಾಯಿಗೆ ಇಳಿಕೆ ಆಗಿದೆ.

ಇನ್ನೂ 24 ಕ್ಯಾರಟ್ ಬಂಗಾರ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಈ 10 ಗ್ರಾಂ ಚಿನ್ನದ ದರವು ಸೋಮವಾರ 80,070 ಇದ್ದದ್ದು, 79,960 ರೂಪಾಯಿಗೆ ಇಲಾಖೆ ಆಗಿದೆ. ಈ ಮೂಲಕ 22 ಕ್ಯಾರಟ್ 100 ಗ್ರಾಂ ಚಿನ್ನಕ್ಕೆ 1000 ರೂಪಾಯಿ ಇಳಿಕೆ ಆದರೆ, 24 ಕ್ಯಾರಟ್ 100 ಗ್ರಾಂ ಚಿನ್ನಕ್ಕೆ ಬರೋಬ್ಬರಿ 1100 ರೂಪಾಯಿ ಕುಸಿತ ಕಂಡಿದೆ.
100 ಗ್ರಾಂ ಬೆಳ್ಳಿಯ ದರವು 9250 ರೂಪಾಯಿಗೆ ಇಳಿದಿದೆ. ಚಿನ್ನದ ಏರಿಳಿತವು ಮುಂದುವರಿದಿದೆ. ಯಾವುದೇ ಸಂದರ್ಭದಲ್ಲೂ ಚಿನ್ನಕ್ಕೆ ಡಿಮ್ಯಾಂಡ್ ಮಾತ್ರ ಕಡಿಮೆ ಆಗುವುದಿಲ್ಲ. ಕೆಲವು ಬಾರಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಆದರೆ, ಮತ್ತೆ ಕೊಂಚ ಕೊಂಚವೇ ಇಳಿಕೆ ಆಗುತ್ತ ಬಂದಿದೆ. ನಗರವಾರು ಚಿನ್ನಾಭರಣ ಬೆಲೆ ದರ ಪಟ್ಟಿ ಇಲ್ಲಿದೆ.
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ
ಬೆಂಗಳೂರು- 73,300 ರೂಪಾಯಿ
ದೆಹಲಿ- 73,450 ರೂಪಾಯಿ
ಚೆನ್ನೈ- 73,300 ರೂಪಾಯಿ
ಮುಂಬೈ- 73,300 ರೂಪಾಯಿ
ಕೇರಳ- 73,300 ರೂಪಾಯಿ
ಭುವನೇಶ್ವರ್- 73,300 ರೂಪಾಯಿ
ಕೋಲ್ಕತಾ- 73,300 ರೂಪಾಯಿ
ಜೈಪುರ್- 73,450 ರೂಪಾಯಿ
ಅಹ್ಮದಾಬಾದ್- 73,350 ರೂಪಾಯಿ

ನಗರವಾರು ಬೆಳ್ಳಿ 100 ಗ್ರಾಂ ದರ ಪಟ್ಟಿ
ಬೆಂಗಳೂರು- 9,250 ರೂಪಾಯಿ
ದೆಹಲಿ - 9,250 ರೂಪಾಯಿ
ಕೋಲ್ಕತ್ತಾ - 9,250 ರೂಪಾಯಿ
ಚೆನ್ನೈ- 10,000 ರೂಪಾಯಿ
ಜೈಪುರ್ - 9,250 ರೂಪಾಯಿ
ಲಕ್ನೋ - 9,250 ರೂಪಾಯಿ
ಕೇರಳ - 10,000 ರೂಪಾಯಿ
ಮುಂಬೈ - 9,250 ರೂಪಾಯಿ
ಅಹ್ಮದಾಬಾದ್ - 9,250 ರೂಪಾಯಿ












Click it and Unblock the Notifications