Gold Price: ಜಾಗತಿಕ ಬೆಲೆ ಕುಸಿತ: ಭಾರತದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟು ಕಡಿಮೆಯಾಗುತ್ತೆ?

ಜಾಗತಿಕವಾಗಿ ಚಿನ್ನ ಹಾಗೂ ಬೆಳ್ಳಿ ದರಗಳು ಕುಸಿತ ಕಂಡಿರುವುದು ಖರೀದಿದಾರರಿಗೆ ನೆಮ್ಮದಿ ನೀಡಿದೆ. ಈ ತಿಂಗಳಿಡೀ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದ್ದ ದರಗಳು ಕುಸಿಯಲಾರಂಭಿಸಿದೆ. ಹೀಗಾಗಿ ಭಾರತದಲ್ಲಿಯೂ ದರಗಳು ಕ್ರಮೇಣ ಇಳಿಕೆ ಕಾಣಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ತಿಂಗಳು ಬಿಸಿಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ ನಂತರ ತಣ್ಣಗಾಗುತ್ತಿವೆ. ಜಾಗತಿಕವಾಗಿ ಚಿನ್ನದ ಬೆಲೆ ಬುಧವಾರ ಶೇ 2.9ರಷ್ಟು ಕುಸಿದಿದೆ. ಮಂಗಳವಾರದ ವಹಿವಾಟಿನಲ್ಲೂ ಶೇ.6.3ರಷ್ಟು ಕುಸಿತ ಕಂಡುಬಂದಿದ್ದು, ಭಾರತದಲ್ಲಿಯೂ ಇದರ ಪರಿಣಾಮದಿಂದ ದರ ಇಳಿಕೆ ಕಾಣುವ ನಿರೀಕ್ಷೆ ಇದೆ.

ವಿಶ್ವಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕಳೆದ ಎರಡು ದಿನಗಳಲ್ಲಿ ತೀವ್ರ ಕುಸಿತಗೊಂಡಿವೆ. ಬಳಿಕ ಭಾರತದಲ್ಲಿಯೂ ಇದೇ ತರಹದ ಪರಿಣಾಮ ಕಾಣುವ ನಿರೀಕ್ಷೆ ಇದೆ. ಅಕ್ಟೋಬರ್ 23ರ ಗುರುವಾರದಂದು ಚಿನ್ನ ಮತ್ತು ಬೆಳ್ಳಿ ವಹಿವಾಟು ಪುನರಾರಂಭವಾದಾಗ ಬೆಲೆಗಳು ಕಡಿಮೆ ಮಟ್ಟದಲ್ಲಿ ತೆರೆಯಬಹುದು ಎಂದು ಅರ್ಥಶಾಸ್ತ್ರಜ್ಞರು ಸೂಚಿಸಿದ್ದಾರೆ.

Gold Price Drop Global Market Fall May Lower Gold and Silver Rates In India

ಚಿನ್ನದ ಅಂತಾರಾಷ್ಟ್ರೀಯ ಬೆಲೆ ಮಂಗಳವಾರ ಶೇ 6.3ರಷ್ಟು ಇಳಿದು 4,082 ಡಾಲರ್ ತಲುಪಿದೆ. ಇದು ಕಳೆದ ಹನ್ನೆರಡು ವರ್ಷಗಳಲ್ಲಿ ಕಂಡ ಅತ್ಯಂತ ದೊಡ್ಡ ಏಕದಿನ ಕುಸಿತವಾಗಿದೆ. ಬೆಳ್ಳಿ ಕೂಡ ಶೇ 8.7ರಷ್ಟು ಇಳಿದು 47.89 ಡಾಲರ್ ಮಟ್ಟದಲ್ಲಿ ವಹಿವಾಟಾಗಿದೆ. ವ್ಯಾಪಾರಿಗಳು ಲಾಭದ ಮೊತ್ತವನ್ನು ಬುಕ್ಕಿಂಗ್ ಮಾಡುವುದು ಈ ಇಳಿಕೆಗಳಿಗೆ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.

ದೀಪಾವಳಿ-ಬಲಿಪಾಡ್ಯಮಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರವರೆಗೂ ಎಂಸಿಎಕ್ಸ್ ಮುಚ್ಚಲ್ಪಟ್ಟಿದೆ. ಆದರೆ ಅಕ್ಟೋಬರ್ 23ರಂದು ಬೆಳಿಗ್ಗೆ ವಹಿವಾಟು ಆರಂಭವಾದಾಗ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಶೇ 6ರವರೆಗೆ ಇಳಿಕೆ ಕಾಣಬಹುದು ಎಂದು ವರದಿಯಾಗಿದೆ.​ ಈಗಾಗಲೇ ಚಿನ್ನದ ವಹಿವಾಟು 10 ಗ್ರಾಂಗೆ 1,28,000 ರೂ. ಇದ್ದು, ಹಿಂದಿನ ದರಕ್ಕೆ ಹೋಲಿಸಿದರೆ 271 ರೂ. ಕಡಿಮೆಯಾಗಿದೆ. ಬೆಳ್ಳಿ ವಹಿವಾಟು ಕೂಡ ಕಿಲೋಗ್ರಾಂಗೆ 1,50,000ರೂ.ಇದ್ದು, 327 ರೂಪಾಯಿ ಇಳಿಕೆ ಕಂಡಿದೆ. ಚಿನ್ನದ ಮಾರುಕಟ್ಟೆಯಲ್ಲಿ ಹಿಂದೆಂದೂ ನೋಡಿರದ ಮಟ್ಟದಲ್ಲಿ ಲಾಭ ಪಡೆಯಲು ವ್ಯಾಪಾರಿಗಳಿಗೆ ಇದು ಒಳ್ಳೆಯ ಅವಕಾಶ ಎಂದು ಹೇಳಲಾಗುತ್ತಿದೆ.

ಹೂಡಿಕೆದಾರರಿಗೆ ಜಾಕ್‌ಪಾಟ್‌

ಭಾರತೀಯ ಹೂಡಿಕೆದಾರರಿಗೆ ಗುರುವಾರದ ವಹಿವಾಟು ನಿರ್ಣಾಯಕವಾಗಲಿದೆ ಎಂದು ಹೇಳಲಾಗುತ್ತಿದೆ. ಚಿನ್ನ ಮತ್ತು ಬೆಳ್ಳಿ ಈ ವರ್ಷದ ಏರಿಕೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸುವ ಸಾಧ್ಯತೆ ಇಲ್ಲ. ಆದರೆ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆ, ಕೇಂದ್ರೀಯ ಬ್ಯಾಂಕ್ ಬೇಡಿಕೆ ಮತ್ತು ಕಡಿಮೆ ಬಡ್ಡಿದರಗಳ ನಿರೀಕ್ಷೆಗಳು ಸೇರಿದಂತೆ ದೀರ್ಘಕಾಲೀನ ಅಂಶಗಳು ಹಾಗೆಯೇ ಉಳಿದಿವೆ. ಆದರೆ ಅಲ್ಪಾವಧಿಯ ಕುಸಿತಗಳು ಹೂಡಿಕೆದಾರರಿಗೆ ಅವಕಾಶವನ್ನು ಒದಗಿಸಬಹುದು ಎಂದು ವರದಿಯಾಗಿವೆ.

ಇಂದು ಭಾರತೀಯ ಮಾರುಕಟ್ಟೆಯಲ್ಲಿ ಈ ಯಾವುದೇ ಕುಸಿತ ಕಂಡುಬಂದಿಲ್ಲ. ಜಾಗತಿಕ ಮಾರಾಟವು ದೇಶೀಯ ಮಾರುಕಟ್ಟೆಯ ಮೇಲೆ ಇನ್ನೂ ಪರಿಣಾಮ ಬೀರಿಲ್ಲ. ಆದರೆ ಅಕ್ಟೋಬರ್ 23ರಂದು ಎಂಸಿಎಕ್ಸ್‌ ಮತ್ತೆ ತೆರೆದಾಗ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಡಿಮೆಯಾಗುವುದು ಪಕ್ಕಾ ಎನ್ನಲಾಗಿದೆ. ಬೆಲೆಗಳು ಎಷ್ಟು ಕುಸಿಯಲಿದೆ ಎನ್ನುವ ಮಾಹಿತಿ ಸದ್ಯಕ್ಕೆ ತಿಳಿದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+