ಆಗಸ್ಟ್ 6 ಬುಧವಾರ ಚಿನ್ನದ ಬೆಲೆ ಎಷ್ಟಿದೆ? ಭಾರಿ ಇಳಿಕೆ ಕಾಣುವ ನಿರೀಕ್ಷೆಯಲ್ಲಿ ಬಂಗಾರ... Gold Price
ಬಂಗಾರ ಅಥವಾ ಚಿನ್ನ ಅಂತಾ ಕರೆಯುವ ಹಳದಿ ಲೋಹಕ್ಕೆ, ಭರ್ಜರಿ ಡಿಮ್ಯಾಂಡ್ ಸೃಷ್ಟಿ ಆಗುತ್ತಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ, ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಕೂಡ ಉಂಟಾಗುತ್ತಿದೆ. ಚಿನ್ನ & ಬೆಳ್ಳಿ ಇಲ್ಲದೆ ಮದುವೆ & ನಿಶ್ಚಿತಾರ್ಥ ಸೇರಿ ಯಾವುದೇ ಶುಭಕಾರ್ಯ ಕೂಡ ನಡೆಯುವುದಿಲ್ಲ. ಯಾಕಂದ್ರೆ ಶುಭಕಾರ್ಯ ನಡೆಸಲು ಚಿನ್ನ & ಬೆಳ್ಳಿಯೇ ಆಧಾರ. ಹೀಗಿದ್ದಾಗಲೇ ಆಷಾಢ ಮಾಸದಲ್ಲಿ ಕುಸಿತ ಕಂಡ ಹಳದಿ ಲೋಹ ಚಿನ್ನ ಬೆಲೆ ಈಗ ಆಷಾಢ ಮಾಸ ಮುಗಿದು ಶ್ರಾವಣ ಶುರುವಾಗಿದ್ದೇ ತಡ ಸತತ ಏರಿಕೆ ಹಾದಿ ಹಿಡಿದಿತ್ತು. ಹೀಗಿದ್ದಾಗಲೇ, ಆಗಸ್ಟ್ 6 ಬುಧವಾರ ಚಿನ್ನದ ಬೆಲೆ ಎಷ್ಟಿದೆ? ಭಾರಿ ಇಳಿಕೆ ಕಾಣುವ ನಿರೀಕ್ಷೆಯಲ್ಲಿ ಬಂಗಾರ...
ಚಿನ್ನ ಖರೀದಿ ಮಾಡಬೇಕು ಅಂತಾ ಕಾಯುತ್ತಿದ್ದೀರಾ? ಹಾಗಿದ್ರೆ ನಿಮಗೆ ಇಲ್ಲಿದೆ ಭರ್ಜರಿ ಸುದ್ದಿ. ಕಳೆದ ಕೆಲವು ತಿಂಗಳಿಂದ ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇದೀಗ ಆಭರಣ ಪ್ರಿಯರಿಗೆ ಸಖತ್ ಸಿಹಿಸುದ್ದಿ ನೀಡಿದೆ. ಚಿನ್ನದ ಬೆಲೆ ಕುಸಿತ ಕಂಡ ನಂತರ ಆಭರಣ ಖರೀದಿ ಮಾಡಲು ಕಾಯುತ್ತಿದ್ದವರಿಗೆ ಚಿನ್ನ ಮಾರುಕಟ್ಟೆಯ ತಜ್ಞರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದರಲ್ಲೂ ಶ್ರಾವಣ ಮಾಸ ಶುರುವಾಗಿ ಶುಭ ಕಾರ್ಯಗಳು ಸತತ, ನಡೆಯುತ್ತಿರುವ ಈ ಸಮಯದಲ್ಲೇ ಚಿನ್ನದ ಬೆಲೆ ಕುಸಿತ ಕಾಣುವ ಬಗ್ಗೆ ತಿಳಿಸಲಾಗಿದೆ. ಹಾಗಾದ್ರೆ ಇದೀಗ ಕರ್ನಾಟಕ ಸೇರಿದಂತೆ ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನದ ಬೆಲೆ? ಬನ್ನಿ ಬಂಗಾರದ ಬೆಲೆ ತಿಳಿಯೋಣ...

ಚಿನ್ನದ ಬೆಲೆ ಭಾರಿ ಕುಸಿತ ಕಾಣುವ...
ಮೊಬೈಲ್ ತಯಾರಿಸಲು ಚಿನ್ನ ಬೇಕು & ಕಂಪ್ಯೂಟರ್ ತಯಾರಿಸಲು ಕೂಡ ಚಿನ್ನ ಬೇಕು, ಇನ್ನು ಆಭರಣ ತಯಾರಿಕೆಗೆ ಚಿನ್ನ ಇಲ್ಲದೆ ಹೋದರೆ ಹೇಗೆ? ಅಂದಹಾಗೆ ಚಿನ್ನ ಬಹು ಬೇಡಿಕೆ ವಸ್ತುವಾಗಿದ್ದು, ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗಲೇ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಈಗಾಗಲೇ ಚಿನ್ನದ ಬೆಲೆ 1,00,000 ಲಕ್ಷ ರೂಪಾಯಿ ದಾಟಿ ಹೋಗಿದೆ. ಇಂತಹ ಸಮಯದಲ್ಲೇ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಚಿನ್ನದ ಬೆಲೆ ಭಾರಿ ಕುಸಿತ ಕಾಣುವುದು ಗ್ಯಾರಂಟಿ ಆಗಿದೆ. ಹಾಗಾದ್ರೆ ಇಂದು ಕರ್ನಾಟಕ ಸೇರಿ ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.
ಚಿನ್ನದ ಬೆಲೆ ಭಾರಿ ಕುಸಿತ ಗ್ಯಾರಂಟಿ?
ಬೆಂಗಳೂರಲ್ಲಿ ಇಂದು ಪ್ರತಿ 10 ಗ್ರಾಂ ಶುದ್ಧ ಚಿನ್ನ ಅಂದ್ರೆ 24 ಕ್ಯಾರೆಟ್ ಚಿನ್ನದ ಬೆಲೆ 1,02,330 ರೂಪಾಯಿ ಆಗಿದೆ. ಹಾಗೇ ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 93,800 ರೂಪಾಯಿ ಇದೆ. ಆದರೆ ಇದೀಗ ಚಿನ್ನ ಮಾರುಕಟ್ಟೆ ತಜ್ಞರು ಚಿನ್ನ ಬೆಲೆಯಲ್ಲಿ ಭಾರಿ ಕುಸಿತ ಕಾಣುವ ಬಗ್ಗೆ ಮುನ್ಸೂಚನೆ ನೀಡಿ ಖುಷಿ ಸುದ್ದಿ ಕೊಟ್ಟಿದ್ದಾರೆ. ಚಿನ್ನದ ಬೆಲೆ ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೀಘ್ರವೇ ಭಾರಿ ಕುಸಿತ ಕಾಣುವ ನಿರೀಕ್ಷೆ ಇದೆ. ಅದರಲ್ಲೂ ಚಿನ್ನಕ್ಕೆ ಬೇಡಿಕೆ ಒಂದಷ್ಟು ಕಡಿಮೆ ಆಗುವ ಜೊತೆಗೆ ಇದೀಗ ಚಿನ್ನ ಉತ್ಪಾದನೆ, ಅಂದ್ರೆ ಗಣಿಗಾರಿಕೆ ಕೂಡ ಹೆಚ್ಚಾಗಿರುವ ಕಾರಣ ಚಿನ್ನದ ಬೆಲೆ ಭಾರಿ ಕುಸಿತ ಕಾಣುವ ಬಗ್ಗೆ ಈಗ ಮುನ್ಸೂಚನೆ ನೀಡಲಾಗಿದೆ.
ಶೀಘ್ರದಲ್ಲೇ ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 80,000 ರೂಪಾಯಿಗೆ ಕುಸಿದು ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆ ಶುದ್ಧ ಚಿನ್ನ ಅಂದ್ರೆ 24 ಕ್ಯಾರೆಟ್ ಚಿನ್ನದ ಬೆಲೆ 90,000 ರೂಪಾಯಿಗೆ ಕುಸಿದು ಬೀಳುವ ಬಗ್ಗೆ ಕೂಡ ಇದೀಗ ನಿರೀಕ್ಷೆ ಮೂಡಿದೆ. ಈ ಮೂಲಕ ಆಭರಣ ಪ್ರಿಯರ ಮನಸ್ಸಿನಲ್ಲಿ ಇದೀಗ ಮಂದಹಾಸ ಮೂಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಆದರೆ ಹೀಗೆ ಚಿನ್ನದ ಬೆಲೆ ಕುಸಿತ ಕಾಣಲು ಇನ್ನೂ 3 ಅಥವಾ 4 ತಿಂಗಳು ಕಾಯಬೇಕಿದೆ ಅಂತಾ ಕೂಡ ಇದೀಗ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈಗಾಗಲೇ ಭಾರತದಲ್ಲಿ ಶ್ರಾವಣ ಮಾಸ ಶುರುವಾಗಿ ಹಬ್ಬಗಳು ಕೂಡ ಬಂದಿವೆ, ಈ ಸಮಯದಲ್ಲೇ ಮದುವೆ ಕೂಡ ಸಾಲು ಸಾಲಾಗಿ ನಡೆಯುತ್ತಿವೆ. ಹೀಗಾಗಿ ಆಗಸ್ಟ್ ತಿಂಗಳಲ್ಲೇ ಚಿನ್ನದ ಬೆಲೆ ಕಡಿಮೆ ಆಗಿ ಕುಸಿದು ಬಿದ್ದಿದ್ದರೆ ಚನ್ನಾಗಿ ಇರುತ್ತಿತ್ತು ಅಂತಿದ್ದಾರೆ ಆಭರಣ ಪ್ರಿಯ ಮಹಿಳೆಯರು...
ಚಿನ್ನದ ಬೆಲೆ ಮುಂದೆ ಎಷ್ಟಾಗಬಹುದು?
ಚಿನ್ನ.. ಚಿನ್ನ.. ಚಿನ್ನ.. ಹಬ್ಬಗಳು ಬಂದರೆ ಸಾಕು ಆಭರಣ ಪ್ರಿಯ ಮಹಿಳೆಯರಿಗೆ ಇದೊಂದೇ ಧ್ಯಾನ. ಭಾರತವು ಚಿನ್ನ ಖರೀದಿ ಮಾಡುವ ದೇಶಗಳಲ್ಲಿ ಮುಂಚೂಣಿಯಲ್ಲಿ ಇರುವ ದೇಶವಾಗಿದೆ. ಯಾಕಂದ್ರೆ ನಮ್ಮ ದೇಶದಲ್ಲಿ ಚಿನ್ನ ಖರೀದಿಗೆ ಪ್ರಜೆಗಳೇ ಆದ್ಯತೆಯನ್ನ ನೀಡ್ತಾರೆ. ವಿದೇಶಗಳಲ್ಲಿ ಚಿನ್ನ ಖರೀದಿಗಾಗಿ ಸರ್ಕಾರಗಳು ಮುಂದೆ ಬಂದರೆ, ಭಾರತದಲ್ಲಿ ಈ ಮೊದಲಿನಿಂದಲು ಕೂಡ ಸರ್ಕಾರವನ್ನು ಮೀರಿಸಿ ಜನರೇ ಚಿನ್ನ ಖರೀದಿಗೆ ಮುಂದೆ ಬರುತ್ತಿದ್ದಾರೆ. ಭಾರತೀಯರಿಗೆ ಈ ಗುಣ ಸಾವಿರಾರು ವರ್ಷಗಳಿಂದ ಒಲಿದು ಬಂದಿದ್ದು, ಆರ್ಥಿಕ ದೃಷ್ಟಿಯಿಂದ ಇದು ಉತ್ತಮವಾಗಿದೆ ಅಂತಾರೆ ತಜ್ಞರು. ಆದರೆ, ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದ ಕಾರಣಕ್ಕೆ ಜನರು ಚಿಂತೆ ಮಾಡುತ್ತಿದ್ದರು. ಹೀಗಿದ್ದಾಗ ಇದೀಗ ಬಂಗಾರ ಮಾರುಕಟ್ಟೆ ತಜ್ಞರು ಚಿನ್ನದ ಬೆಲೆಯು ಕುಸಿದು ಬೀಳಲಿದೆ ಅಂತಾ ಹೇಳಿರುವುದು ಸಿಕ್ಕಾಪಟ್ಟೆ ಖುಷಿ ನೀಡಿದೆ. ಹೀಗಾಗಿ ಒಂದಷ್ಟು ದಿನಗಳ ಕಾಲ ಕಾದು ನೋಡಬೇಕಿದೆ...












Click it and Unblock the Notifications