Gold Price: ಚಿನ್ನದ ಬೆಲೆಯಲ್ಲಿ 4,000 ರೂಪಾಯಿ ಭರ್ಜರಿ ಕುಸಿತ! ಈಗ ಎಷ್ಟಿದೆ ಬೆಲೆ?
ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಕುಸಿತವಾಗಿದೆ. ಚಿನ್ನ ಖರೀದಿ ಮಾಡಬೇಕು ಅಂತಾ ಈ ಸಮಯದ ತನಕ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಒಂದಷ್ಟು ತೃಪ್ತಿ ಸಿಕ್ಕಂತೆ ಆಗಿದ್ದು, ನಿನ್ನೆ ಚಿನ್ನದ ಬೆಲೆಯಲ್ಲಿ ಒಂದಷ್ಟು ಬೆಲೆ ಏರಿಕೆ ಕಂಡು ಬಂದಿತ್ತು. ಆದರೆ ಇಂದು ದಿಢೀರ್ ಚಿನ್ನ ಬೆಲೆಯು ಕುಸಿತ ಕಂಡಿರುವುದು ಆಭರಣ ಪ್ರಿಯರಿಗೆ ಭಾರಿ ಸುದ್ದಿ ಕೊಟ್ಟಂತೆ ಆಗಿದೆ. ಇದೀಗ ಚಿನ್ನದ ಬೆಲೆಯಲ್ಲಿ 4,000 ರೂಪಾಯಿ ಭರ್ಜರಿ ಕುಸಿತವಾಗಿದೆ!
ಹೌದು, ಚಿನ್ನ ಬೆಲೆ ಮತ್ತೊಮ್ಮೆ ಕುಸಿತ ಕಂಡು ಈ ಮೂಲಕ ಚಿನ್ನ ಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ. ಚಿನ್ನ ಬೆಲೆ ಕಳೆದ ಕೆಲ ದಿನಗಳಿಂದ ಸಾಕಷ್ಟು ಏರಿಳಿತ ಕಾಣುತ್ತಿತ್ತು. ಹೀಗಾಗಿ ಆಭರಣ ಪ್ರಿಯರು ಮಾರುಕಟ್ಟೆ ಕಡೆಗೆ ಗಮನ ಇಟ್ಟು ಕೂತಿದ್ದರು. ಈಗಾಗಲೇ ಮದುವೆಗಳ ಸೀಸನ್ ಮುಗಿದಿದ್ದು, ಚಿನ್ನಕ್ಕೆ ಒಂದಷ್ಟು ಬೇಡಿಕೆ ಕಡಿಮೆ ಆಗಿದೆ. ಮತ್ತೊಂದು ಕಡೆಯಲ್ಲಿ ಯುದ್ಧದ ಭಯ ಕೂಡ ಮಾಯವಾಗಿದ್ದು, ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ ಎನ್ನಲಾಗ್ತಿದೆ. ಹಾಗಾದ್ರೆ ಚಿನ್ನದ ಬೆಲೆ ಇದೀಗ ಎಷ್ಟಿದೆ? ಮುಂದೆ ಓದಿ.

ಚಿನ್ನದ ಬೆಲೆ 4,000 ರೂಪಾಯಿ ಕುಸಿತ!
ಆಭರಣ ಚಿನ್ನ ಬೆಲೆ ಅಂದ್ರೆ 22 ಕ್ಯಾರೆಟ್ ಚಿನ್ನ ಬೆಲೆ ಭಾರಿ ಕುಸಿತ ಕಂಡ ಹಿನ್ನೆಲೆ ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 4,000 ರೂಪಾಯಿ ಇಳಿಕೆ ಆಗಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 400 ರೂಪಾಯಿ ಕಡಿತವಾಗಿ, ಆಭರಣ ಚಿನ್ನದ ಬೆಲೆಯು ಕುಸಿತದ ನಂತರ 10 ಗ್ರಾಂಗೆ 71,100 ರೂಪಾಯಿಗೆ ಮಾರಾಟ ಆಗುತ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 4,400 ರೂಪಾಯಿ ಕುಸಿತ ಕಂಡಿದೆ.
ಬೆಳ್ಳಿ ಬೆಲೆ 1,900 ರೂಪಾಯಿ ಕುಸಿತ!
24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 4,400 ರೂಪಾಯಿ ಕುಸಿತ ಕಂಡ ನಂತರ, ಈಗ ಪ್ರತಿ 10 ಗ್ರಾಂಗೆ 440 ರೂಪಾಯಿ ಇಳಿಕೆ ಆಗಿದೆ. ಈ ಮೂಲಕ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 77,560 ರೂಪಾಯಿಗೆ ಮಾರಾಟ ಆಗುತ್ತಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿತ ಕಂಡು ಹಳದಿ ಲೋಹದ ಬೆಲೆ ಕುಸಿತದ ಹಾದಿ ಹಿಡಿದಿದೆ. ಮತ್ತೊಂದು ಕಡೆಯಲ್ಲಿ ಬೆಳ್ಳಿ ಬೆಲೆ ಭರ್ಜರಿ 1,900 ರೂಪಾಯಿ ಕುಸಿತ ಕಂಡಿದೆ. ಬೆಳ್ಳಿಯ ಬೆಲೆ ಇಂದು, ಪ್ರತಿ 1 ಕೆ.ಜಿ.ಗೆ ಬರೋಬ್ಬರಿ 1,900 ರೂಪಾಯಿ ಕುಸಿತ ಕಂಡ ಹಿನ್ನೆಲೆ 90,500 ರೂಪಾಯಿಗೆ ಮಾರಾಟ ಆಗುತ್ತಿದೆ.
ಏರಿಕೆ ಆಗುತ್ತಾ? ಇಳಿಕೆ ಕಾಣುತ್ತಾ?
ಒಟ್ನಲ್ಲಿ ಚಿನ್ನ ಮಾರುಕಟ್ಟೆಯಲ್ಲಿ ಚಿನ್ನ ಕುಸಿತ ಕಾಣುತ್ತಿದ್ದು, ಹೂಡಿಕೆದಾರರಿಗೆ ಸ್ವಲ್ಪ ಆತಂಕ ಶುರುವಾಗಿದೆ. ಯಾಕಂದ್ರೆ ಚಿನ್ನ ಕೂಡ ಆರ್ಥಿಕತೆ ಒಂದು ಭಾಗ ಆಗಿದೆ. ಹೀಗಿದ್ದಾಗಲೆ, ಚಿನ್ನದ ಬೆಲೆಯಲ್ಲಿ ಸತತ ಕುಸಿತ ದಾಖಲಾಗುತ್ತಿದೆ ಎಂಬುದು ಚಿಂತೆಗೆ ದೂಡುತ್ತಿದೆ. ಅದರಲ್ಲೂ, ಕಳೆದ ಒಂದು ತಿಂಗಳಲ್ಲಿ ಚಿನ್ನ ದೊಡ್ಡ ಪ್ರಮಾಣದಲ್ಲಿ ತನ್ನ ಬೆಲೆ ಕಳೆದುಕೊಂಡಿದೆ. ಇದರ ಜೊತೆಗೆ, ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಏರಿಕೆ ಕಾಣುವ ನಿರೀಕ್ಷೆ ಕೂಡ ಇದೆ ಎನ್ನಲಾಗುತ್ತಿದ್ದು. ಹೊಸ ವರ್ಷದ ಮೊದಲ ದಿನ ಅಂದ್ರೆ ಜನವರಿ 1ಕ್ಕೆ ಚಿನ್ನದ ಬೆಲೆ ಏನಾಗುತ್ತೆ? ಏರಿಕೆ ಆಗುತ್ತಾ? ಇಳಿಕೆ ಕಾಣುತ್ತಾ? ಅನ್ನೋ ಕುತೂಹಲ ಮೂಡಿದೆ.












Click it and Unblock the Notifications