Gold Price: ಚಿನ್ನದ ಬೆಲೆ 6,000 ರೂಪಾಯಿ ಕುಸಿತ, ಖರೀದಿ ಮಾಡಲು....
ಚಿನ್ನ, ಚಿನ್ನ ಅಂತಾ ಬಂಗಾರ ಖರೀದಿ ಮಾಡಲು ಕಾಯುತ್ತಿದ್ದ ಜನರು ಇದೀಗ ಮುಗಿಬಿದ್ದು ಮುಂದೆ ಹೋಗುವಂತೆ ಆಗಿದೆ. ಯಾಕಂದ್ರೆ ಭಾರಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಈಗ ಲಗಾಮು ಬಿದ್ದಂತೆ ಕಾಣುತ್ತಿದೆ. ಚಿನ್ನದ ಬೆಲೆ ಏರಿಕೆಯ ಪರಿಸ್ಥಿತಿ ನೋಡಿ, ಮತ್ತಷ್ಟು ದಿನ ಇದೇ ರೀತಿ ಚಿನ್ನ ಏರಿಕೆ ಕಂಡರೆ ಪರಿಸ್ಥಿತಿ ಹೇಗೆ? ಅಂತಾ ಚಿಂತೆ ಮಾಡುತ್ತಿದ್ದರು ಪ್ರಜೆಗಳು. ಇಂತಹ ಸಮಯದಲ್ಲೇ, ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಅದರಲ್ಲೂ, ಚಿನ್ನದ ಬೆಲೆ 6,000 ರೂಪಾಯಿ ಕುಸಿತ ಕಂಡಿದ್ದು ಖರೀದಿ ಮಾಡಲು....
ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣಬೇಕು ಅಂತಾ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಖುಷಿಯಾದ ಸುದ್ದಿ ಸಿಕ್ಕಂತಾಗಿದೆ. ಯಾಕಂದ್ರೆ ಚಿನ್ನ ಬೆಲೆ ನೋಡ ನೋಡುತ್ತಿದ್ದಂತೆ ಆಕಾಶ ಮುಟ್ಟುತ್ತಾ ಭೀತಿ ಹುಟ್ಟಿಸಿತ್ತು. ಇದೇ ಕಾರಣಕ್ಕೆ ಬಂಗಾರದ ಬೆಲೆಯಲ್ಲಿ ಇಳಿಕೆ ಆಗಬೇಕು ಅಂತಾ ಜನ ಕಾಯುತ್ತಿದ್ದರು. ಜನರು ಮಾಡುತ್ತಿದ್ದ ಪ್ರಾರ್ಥನೆ & ಜನರ ನಿರೀಕ್ಷೆಗಳು ಇದೀಗ ಈಡೇರಿವೆ. ಯಾಕಂದ್ರೆ, ಒಂದೇ ದಿನದಲ್ಲಿ ಚಿನ್ನದ ಬೆಲೆ 6,000 ರೂಪಾಯಿ ಕುಸಿತ ಕಂಡಿದೆ!

ಚಿನ್ನದ ಬೆಲೆ 6,000 ರೂಪಾಯಿ ಕುಸಿತ!
ಹೌದು ಶುದ್ಧ ಚಿನ್ನ ಅಂದ್ರೆ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ ಭಾರಿ ಕುಸಿತವನ್ನ ಕಂಡು ಪ್ರತಿ 100 ಗ್ರಾಂ ಶುದ್ಧ ಚಿನ್ನ 6,000 ರೂಪಾಯಿ ಇಳಿಕೆ ಕಂಡಿದೆ. ಹೀಗಾಗಿಯೇ ಪ್ರತಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ 600 ರೂಪಾಯಿ ಕಡಿತವಾಗಿತ್ತು. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಭಾರಿ ಕುಸಿತದ ನಂತರ ಪ್ರತಿ 10 ಗ್ರಾಂಗೆ 78,870 ರೂಪಾಯಿ ಆಗಿದೆ. ಇನ್ನುಳಿದಂತೆ ಆಭರಣ ಚಿನ್ನ ಬೆಲೆ ಕೂಡ ಭಾರಿ ಕುಸಿತ ಕಂಡಿದೆ.
ಬೆಳ್ಳಿ ಬೆಲೆ 3,000 ರೂಪಾಯಿ ಕುಸಿತ!
ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆ ಆಗಿತ್ತು, ಆದರೆ ಈಗ ಕುಸಿತ ಕಂಡಿದೆ ಚಿನ್ನ. ಆಭರಣ ಚಿನ್ನದ ಬೆಲೆ ಅಂದ್ರೆ 22 ಕ್ಯಾರೆಟ್ ಚಿನ್ನ ಬೆಲೆ, ಒಂದೇ ದಿನ ಪ್ರತಿ 100 ಗ್ರಾಂಗೆ 5,500 ರೂಪಾಯಿ ಇಳಿಕೆಯನ್ನು ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 550 ರೂಪಾಯಿ ಇಳಿಕೆ ಆಗಿದೆ.
ಹೀಗಾಗಿ ಇದೀಗ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 72,300 ರೂಪಾಯಿಗೆ ಕುಸಿದಿದೆ. ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 3,000 ರೂಪಾಯಿ ಕುಸಿತ ಕಂಡು 93,500 ರೂಪಾಯಿಗೆ ಇಳಿದಿದ್ದು ಆಭರಣ ಪ್ರಿಯರಿಗೆ ಈ ಸುದ್ದಿ ಖುಷಿ ಖುಷಿ ನೀಡಿದೆ. ಬೆಳ್ಳಿ ಬೆಲೆಯಲ್ಲಿ ಒಂದೇ ದಿನ ಈ ರೀತಿ ಭಾರಿ ದೊಡ್ಡ ಕುಸಿತ ಕಂಡಿರುವುದು ಸಾಕಷ್ಟು ಗಮನ ಸೆಳೆದಿದೆ.












Click it and Unblock the Notifications