Gold Price: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಗ್ರಾಹಕರಿಗೆ ಹಬ್ಬಗಳ ಮುನ್ನ ಗುಡ್ ನ್ಯೂಸ್
Gold Price on July 29:ಚಿನ್ನದ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಕಳೆದ ಎಳು ದಿನಗಳಲ್ಲಿ ನಾಲ್ಕು ದಿನ ಚಿನ್ನ ಇಳಿಕೆಯಾಗುತ್ತಲೇ ಬಂದಿದೆ. ಎರಡು ದಿನಗಳ ಹಿಂದೆ ದರ ತಟಸ್ಥವಾಗಿತ್ತು. ಇಂದು ಮಂಗಳವಾರ ಚಿನ್ನದ ದರದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಹಾಗಾದ್ರೆ ಬೆಂಗಳೂರು, ಕರ್ನಾಟಕ ಸೇರಿದಂತೆ ನಗರವಾರು 22 ಕ್ಯಾರಟ್ ಮತ್ತು 24 ಕ್ಯಾರಟ್ ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಭಾರತದಂತಹ ನಗರದಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. ಇಂದು ವಿದೇಶಗಳಲ್ಲಿ ಚಿನ್ನದ ದರ ಕುಸಿತ ಕಂಡಿವೆ. ಬೆಳ್ಳಿ ದರದಲ್ಲಿ ಯಾವುದು ಬದಲಾವಣೆ ಆಗಿಲ್ಲ, ನೆನ್ನೆಯಂತೆ ಯಥಾ ಸ್ಥಿತಿಯಲ್ಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. 22 ಕ್ಯಾರಟ್ ಚಿನ್ನದ 10 ಗ್ರಾಂ 91,600 ರೂಪಾಯಿಯಿಂದ ₹91,500ಗೆ ಇಳಿಕೆ ಆಗಿದೆ. ಅಂದರೆ 100 ರೂಪಾಯಿ ಕುಸಿತವಾಗಿದೆ. ಇತ್ತ 100 ಗ್ರಾಂ ಬೆಲೆ ರೂಪಾಯಿ 9,16,000 ದಿಂದ 9,15,000 ರೂ.ಗೆ ಅಂದರೆ 1,000 ರೂಪಾಯಿ ಇಳಿಕೆ ಕಂಡಿದೆ.

24 ಕ್ಯಾರಟ್ ಬಂಗಾರದ ದರವು ಇಳಿಕೆ ಆಗಿದೆ. 10 ಗ್ರಾಂ ಚಿನ್ನವು 99,930 ರೂಪಾಯಿಯಿಂದ ₹99,820ಗೆ ಇಳಿಕೆ ಕಂಡಿದ್ದು, ಒಟ್ಟು 110 ರೂಪಾಯಿ ಕುಸಿತವಾಗಿದೆ. ಅದೇ ರೀತಿ 100 ಚಿನ್ನವು ನೆನ್ನೆ 9,99,300 ರೂ. ಇದ್ದರೆ ಇಂದು ₹9,98,200 ಗೆ ಅಂದರೆ 1,100 ಕುಸಿತ ಕಂಡಿದೆ. ಇದರಿಂದ ಗ್ರಾಹಕರಿಗೆ ಖರೀದಿಸಲು ಚೈತನ್ಯ ಸಿಕ್ಕಂತಾಗದೆ. ಮುಂದೆ ಸಾಲು ಸಾಲು ಹಬ್ಬಗಳು ಎದುರಾಗಲಿವೆ. ಸಂಭ್ರಮದ ಕ್ಷಣಗಳಲ್ಲಿ ಚಿನ್ನ ಖರೀದಿಸಬೇಕು ಎಂದು ಪ್ಲಾನ್ ಮಾಡಿಕೊಂಡವರಿಗೆ ಇಂದಿನ ಬೆಲೆ ಸಮಾಧಾನ ತಂದಿದೆ.
ಬೆಂಗಳೂರು ಕರ್ನಾಟಕ ಸೇರಿದಂತೆ ಭಾರತದಲ್ಲಿ ಬೆಳ್ಳಿಯ ಇಂದಿನ 100 ಗ್ರಾಂ ದರ 11,600 ರೂಪಾಯಿ, ಒಂದು ಕೆ.ಜಿ. ಬೆಳ್ಳಿಗೆ 1,16,000 ರೂಪಾಯಿ ಇದೆ. ಇನ್ನು ಕಳೆದ ಒಂದು ವಾರದಲ್ಲಿ 22 ಬಂಗಾರವು ಹೆಚ್ಚಾಗಿದ್ದಕ್ಕಿಂತ ಇಳಿಕೆ ಆಗಿದ್ದೆ ಹೆಚ್ಚು.
ದೇಶದ ವಿವಿಧ ನಗರಗಳಲ್ಲಿ (24k) ಎಷ್ಟಿದೆ ಚಿನ್ನದ ಬೆಲೆ
ಬೆಂಗಳೂರು: 97,940 ರೂಪಾಯಿ
ಮುಂಬೈ: 97,860 ರೂಪಾಯಿ
ದೆಹಲಿ: 97,790 ರೂಪಾಯಿ
ಹೈದರಾಬಾದ್: 98,020 ರೂಪಾಯಿ
ಅಹಮದಾಬಾದ್: 97,990 ರೂಪಾಯಿ
ಚೆನ್ನೈ: 98,150 ರೂಪಾಯಿ
ಪಾಟ್ನಾ: 97,810 ರೂಪಾಯಿ
ಚಂಡೀಗಢ: 97,860 ರೂಪಾಯಿ
ಕೋಲ್ಕತ್ತಾ: 97,730 ರೂಪಾಯಿ
ಜೈಪುರ: 97,940 ರೂಪಾಯಿ
ನಗರವಾರು 22k ಚಿನ್ನದ ವ್ಯತ್ಯಾಸ ದರಪಟ್ಟಿ
ಬೆಂಗಳೂರು: ₹91,605 / ₹91,600 / ₹89,778
ಮುಂಬೈ: ₹91,617 / ₹91,600 / ₹89,705
ದೆಹಲಿ: ₹91,763 / ₹91,750 / ₹89,641
ಕೋಲ್ಕತ್ತಾ: ₹91,615 / ₹91,600 / ₹89,586
ಹೈದರಾಬಾದ್: ₹91,600 / ₹89,852
ಪುಣೆ: ₹91,623 / ₹89,705
ಚೆನ್ನೈ: ₹91,611 / ₹91,600 / ₹89,971
ಅಹಮದಾಬಾದ್: ₹91,671 / ₹89,824
ವಿಶೇಷ ಸೂಚನೆ: ಚಿನ್ನದರ ದರವು ನಗರದಿಂದ ನಗರಕ್ಕೆ ಕೊಂಚ ವ್ಯತ್ಯಾಸವಿರುತ್ತದೆ. ಏಕೆಂದರೆ ವೇಸ್ಟೇಜ್, ಜಿಎಸ್‌ಟಿ ಮತ್ತು ಇತರ ಶುಲ್ಕಗಳ ಮೇಲೆ ಅಂತಿಮ ದರ ನಿರ್ಧಾರವಾಗುತ್ತದೆ. ಹೀಗಾಗಿ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಉಂಟಾಗಬಹುದು. ಕೆಲವು ಕಡೆಗಳಲ್ಲಿ ಮಳಿಗೆಯಿಂದ ಮಳಿಗೆ ಚಿನ್ನದ ಒಟ್ಟು ಮೊತ್ತದ ಮೇಲಿನ ಚಿಲ್ಲರೆ ಹಣದಲ್ಲಿ ವ್ಯತ್ಯಾಸ ಕಂಡುಬರಬಹುದೆಂದು ಗ್ರಾಹಕರಿಗೆ ತಿಳಿಸಲಾಗಿದೆ.












Click it and Unblock the Notifications