Gold Price: ಚಿನ್ನದ ಬೆಲೆಯಲ್ಲಿ ಬಂಪರ್ & ಭರ್ಜರಿ ಇಳಿಕೆ ಕಾರಣವೇನು!
ಅಮೆರಿಕ ಚುನಾವಣೆ ನಿರ್ಣಾಯಕ ಅಂತವನ್ನು ತಲುಪುತ್ತಿದ್ದಂತೆಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಕುಸಿದಿದೆ. ಈ ಹೊಸ ಬೆಳವಣಿಗೆ ಚಿನ್ನ ಪ್ರಿಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅಮೋಘ ಜಯ ಸಾಧಿಸಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಚಿನ್ನದ ಬೆಲೆ ಇಳಿಕೆಯಾಗಲು ಕಾರಣವೇನು, ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಎಷ್ಟು ಕಡಿಮೆಯಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಈಗ ಬಹುತೇಕ ನಿರ್ಣಾಯಕ ಹಂತದಿಂದ ಮುಕ್ತಾಯದ ಹಂತವನ್ನು ತಲುಪಿಯಾಗಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆ 2024 ಈ ಹಿಂದೆಂದಿಗಿಂತಲೂ ರೋಚಕವಾಗಿತ್ತು. ಇತ್ತ ಡೊಲಾನ್ಡ್ ಟ್ರಂಪ್ ವಿಜಯ ಸಾಧಿಸುತ್ತಿದ್ದಂತೆಯೇ ಚಿನ್ನದ ಬೆಲೆ ದಿಢೀರ್ ಕುಸಿತ ಕಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಕುಸಿಯುತ್ತಿರುವುದರಿಂದ ಸಹಜವಾಗಿಯೇ ಇದರ ಪರಿಣಾಮ ಭಾರತದ ಮೇಲೂ ಆಗುತ್ತಿದ್ದು, ಭಾರತದಲ್ಲೂ ಚಿನ್ನ ಬೆಲೆ ಕುಸಿಯುತ್ತಿದೆ.

ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾಗಲಿದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಡಾಲರ್ ಮೌಲ್ಯ ಬಲಿಷ್ಠವಾಗಿದೆ. ಡಾಲರ್ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುವ ಬದಲು ಡಾಲರ್ ಮೇಲೆ ಹೂಡಿಕೆ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಅಲ್ಲದೇ ಯುಎಸ್ ಬಾಂಡ್‌ಗಳ ವಿಚಾರದಲ್ಲೂ ಮಹತ್ವದ ಬದಲಾವಣೆಗಳು ಆಗುತ್ತಿದ್ದು, ಇದರ ಪರಿಣಾಮ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.
ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌ಗೆಲುವು ಸಾಧಿಸುತ್ತಿದ್ದಂತೆಯೇ ಸ್ಪಾಟ್ ಗೋಲ್ಡ್ ಡಾಲರ್ $2,658.35 ಕನಿಷ್ಠ ಮಟ್ಟ 3.1% ರಷ್ಟು ಕುಸಿತ ಕಂಡಿದೆ. ಭಾರತದ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯು 2.5% ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ಬೆಲೆಯು 76,505 ರೂ ಆಗಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 0.6% ರಷ್ಟು ಕುಸಿದಿದ್ದು, 78,106 ರೂಪಾಯಿ ತಲುಪಿದೆ.
ಟ್ರಂಪ್ ಅವರ 2.0 ಶುರುವಾಗಲಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ರಾಕೆಟ್ ವೇಗದಲ್ಲಿ ಡಾಲರ್ ಮೇಲಕ್ಕೆ ಹೋಗಿದೆ. ಟ್ರಂಪ್ ಅವರು ಚುನಾವಣೆ ಸಮಯದಲ್ಲಿ ಹೇಳಿದ್ದ ಅಥವಾ ನೀಡಿದ್ದ ಆರ್ಥಿಕ ಭರವಸೆಗಳೇ ಇದಕ್ಕೆ ಕಾರಣ ಎನ್ನಲಾಗಿದೆ. ಟ್ರಂಪ್ ಅವರು ಯಾವಾಗಲೂ ಅಮೆರಿಕ ಮೊದಲು ಆ ಮೇಲೆ ಬಾಕಿ ದೇಶದ ಚಿಂತೆ ಎನ್ನುವ ದಾಟಿಯಲ್ಲೇ ಈ ಹಿಂದಿನಿಂದಲೂ ಹೇಳಿದ್ದಾರೆ. ಈ ಬಾರಿ ಅವರ ಚುನಾವಣೆ ಘೋಷಣೆಯೇ ಮೇಕ್ ಅಮೆರಿಕ ಗ್ರೇಟ್ ಎಗೇನ್ ಎನ್ನುವುದಾಗಿದೆ.
ಜುಲೈನಿಂದಲೂ ಡಾಲರ್ ಮೌಲ್ಯ ಕುಸಿಯುತ್ತಲ್ಲೇ ಇತ್ತು. ಇದೀಗ ಟ್ರಂಪ್ ಅವರು ಬರುತ್ತಿದ್ದಂತೆಯೇ ಡಾಲರ್ ಮೌಲ್ಯ ಹೆಚ್ಚಳವಾಗಿದೆ. ಟ್ರಂಪ್ ಅಧಿಕಾರಕ್ಕೆ ಬಂದರೆ, ಅಮೆರಿಕದಲ್ಲಿ ಆಮದಾಗುವ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು ಹಾಗೂ ಕಾರ್ಪೋರೇಟ್ ಕಂಪನಿಗಳ ತೆರಿಗೆಯನ್ನು ಕಡಿಮೆ ಮಾಡುವುದು ಹಾಗೂ ಬಾಂಡ್‌ಗಳ ಮೌಲ್ಯದಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡುವುದು ಸೇರಿದಂತೆ ಆರ್ಥಿಕ ಸದೃಢತೆಗೆ ಪ್ರಮುಖ ಭರವಸೆ ನೀಡಿದ್ದರು. ಇದೇ ಕಾರಣಕ್ಕೆ ಅಮೆರಿಕದ ಡಾಲರ್ ಮೌಲ್ಯ ಜಿಗಿಯುತ್ತಿದ್ದು, ಚಿನ್ನದ ಬೆಲೆಯೂ ಇಳಿಕೆಯಾಗ್ತಿದೆ. ಡಾಲರ್‌ನ ಮುಂದೆ ಭಾರತದ ರೂಪಾಯಿ ಮೌಲ್ಯ ಕುಸಿಯದೆ ಇದ್ದರೆ, ಇದರ ಲಾಭ ಭಾರತಕ್ಕೂ ಸಿಗಲಿದೆ.












Click it and Unblock the Notifications