Gold Price on April 9: ಚಿನ್ನ ಪ್ರಿಯರಿಗೆ ಬಂಪರ್ ಗುಡ್‌ನ್ಯೂಸ್: ಬಂಗಾರದ ಬೆಲೆ ಭರ್ಜರಿ ಕುಸಿತ!
Gold Price: ವಿಶ್ವದಾದ್ಯಂತ ಷೇರುಮಾರುಕಟ್ಟೆ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಭಾರತದಲ್ಲೂ ಷೇರುಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಈ ರೀತಿ ಸಂದರ್ಭ ಎದುರಾದಾಗೆಲ್ಲವೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಉಂಟಾಗುತ್ತಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಹುಚ್ಚು ನಿರ್ಧಾರಗಳ ನಡುವೆಯೂ ಇದೀಗ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ದೇಶದಲ್ಲಿ ಇನ್ನಷ್ಟು ಚಿನ್ನದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 9ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ವಿವರ ನೋಡೋಣ.
ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕದ ನೀತಿಗಳು ಹೌದು ಅಮೆರಿಕದ ಅಧ್ಯಕ್ಷರ ರಿಟರ್ನ್ ಟ್ಯಾಕ್ಸ್ ಪಾಲಿಸಿಯಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಯಾಕೆಂದರೆ ಯುಎಸ್‌ನ ಬೀಟ್ ಕಾಯಿನ್ ಹಾಗೂ ಡಾಲರ್ ಸ್ಟ್ರಾಂಗ್ ಆಗಿದೆ. ಈ ಕಾರಣಕ್ಕೆ ಜನ ಚಿನ್ನ ಖರೀದಿ ಮಾಡುತ್ತಿಲ್ಲ. ಹೀಗಾಗಿ, ಚಿನ್ನದ ಬೆಲೆಯು ಭರ್ಜರಿ ಇಳಿಕೆ ಕಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಖರೀದಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ 9ರ 22 ಕ್ಯಾರೆಟ್ ಚಿನ್ನದ ಬೆಲೆ: ಏಪ್ರಿಲ್ 9ಕ್ಕೆ (ಬುಧವಾರ) 22 ಕ್ಯಾರೆಟ್‌ನ ಚಿನ್ನದ ಬೆಲೆ ಪ್ರತಿ 1 ಗ್ರಾಂ 8,224 ರೂಪಾಯಿ ಆಗಿದೆ. 10 ಗ್ರಾಂಗೆ 82,240 ರೂಪಾಯಿ ಆಗಿದೆ. ನೆನ್ನೆಗಿಂತ ಚಿನ್ನದ ಬೆಲೆ ಇಳಿಕೆ ಕಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಮಂಗಳವಾರ ಭರ್ಜರಿ ಇಳಿಕೆಯಾಗಿತ್ತು. ಬುಧವಾರವೂ ಈ ಇಳಿಕೆ ಮುಂದುವರಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 1 ಗ್ರಾಂಗೆ 8,972 ರೂಪಾಯಿ ಆಗಿದೆ. 10 ಗ್ರಾಂಗೆ 89,720 ರೂಪಾಯಿ ಆಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ: 18 ಕ್ಯಾರೆಟ್ ಬಂಗಾರವು 1 ಗ್ರಾಂಗೆ 6,729 ರೂಪಾಯಿ ಇದ್ದರೆ, 10 ಗ್ರಾಂಗೆ 67,290 ರೂಪಾಯಿ ಆಗಿದೆ.
ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಸಾಧ್ಯತೆ: ಕಳೆದ ಎರಡು ಮೂರು ವರ್ಷಗಳಿಂದ ಚಿನ್ನದ ಬೆಲೆಯು ಭರ್ಜರಿ ಏರಿಕೆ ಕಂಡಿದೆ. 55,000 ಸಾವಿರ ರೂಪಾಯಿ ಯಿಂದ ಚಿನ್ನದ ಬೆಲೆಯು ಇದೀಗ 82,000 ಸಾವಿರಕ್ಕೆ ತಲುಪಿದೆ. ಕೆಲವೇ ದಿನಗಳ ಹಿಂದಷ್ಟೇ ಚಿನ್ನದ ಬೆಲೆಯು 86,000 ಸಾವಿರ ಮುಟ್ಟಿತ್ತು. ಆದರೆ, ಬದಲಾದ ಮಾರುಕಟ್ಟೆಯ ಸನ್ನಿವೇಶದಲ್ಲಿ ಚಿನ್ನದ ಬೆಲೆಯು ಭರ್ಜರಿ ಇಳಿಕೆ ಕಂಡಿದೆ.

ಇನ್ನೊಂದು ವಾರ ಚಿನ್ನದ ಬೆಲೆಯು ಇದೇ ರೀತಿ ಇಳಿಕೆಯಲ್ಲೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಹಳೆಯ ರೇಟ್‌ಗೆ ಅಥವಾ 10,000 ರಿಂದ 15,000 ಸಾವಿರ ರೂಪಾಯಿ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಅಸ್ಥಿರತೆ ಎದುರಾಗುವ ಸಂದರ್ಭಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತದೆ. ಆದರೆ ಈ ಬಾರಿ ಅಮೆರಿಕನ್ ಡಾಲರ್ ಸ್ಟ್ರಾಂಗ್ ಆಗುತ್ತಿದೆ. ಅಲ್ಲದೇ ಜನ ಬೀಟ್ ಕಾಯಿನ್ ಮೇಲೆ ಹೂಡಿಕೆ ಮಾಡುವುದು ಹೆಚ್ಚಳವಾಗಿದೆ. ಹೀಗಾಗಿ, ಚಿನ್ನದ ಬೆಲೆ ಇಳಿಕೆಯಾಗುತ್ತಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.












Click it and Unblock the Notifications