Gold Price on feb 9: ಫೆಬ್ರವರಿ ಮೊದಲ ವಾರದಲ್ಲೇ ಚಿನ್ನ ಪ್ರಿಯರಿಗೆ ಶಾಕ್!
Gold Price on feb 9: ಫೆಬ್ರವರಿ ಮೊದಲ ವಾರದಲ್ಲೇ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ. ಕಳೆದ 15 ದಿನಗಳಿಂದಲೂ ಚಿನ್ನದ ಬೆಲೆ ಹೆಚ್ಚಳವಾಗುತ್ತಲ್ಲೇ ಇದ್ದು. ಚಿನ್ನ ಖರೀದಿ ಮಾಡುವವರಿಗೆ ಶಾಕ್ ಎದುರಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಚಿನ್ನದ ಬೆಲೆಯು 80,000 ಸಾವಿರ ರೂಪಾಯಿ ಗಡಿದಾಟಿ ಹಲವು ತಿಂಗಳುಗಳೇ ಆಗಿವೆ. ಇದೀಗ ಇನ್ನು ಕೆಲವೇ ದಿನಗಳಲ್ಲಿ ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ಆದರೂ ಅಚ್ಚರಿ ಇಲ್ಲ ಎಂದೇ ಹೇಳಲಾಗುತ್ತಿದೆ. ಈ ವಾರದಲ್ಲಿ ಚಿನ್ನದ ಬೆಲೆ ಹೇಗಿತ್ತು. ಫೆಬ್ರವರಿ 9ರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ದೇಶದಾದ್ಯಂತ ಚಿನ್ನದ ಬೆಲೆ ಹೆಚ್ಚಳವಾಗುತ್ತಿದ್ದು, ಚಿನ್ನ ಖರೀದಿ ಮಾಡಬೇಕು ಅಂತ ಅಂದು qಕೊಂಡಿರುವವರು ಹಿಂದೇಟು ಹಾಕುವಂತೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಜನ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿರುವುದರಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಚಿನ್ನದ ಡಿಮ್ಯಾಂಡ್ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಸಹ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಚಿನ್ನದ ಬೆಲೆ ವಾರಾಂತ್ಯದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಆದರೆ ಫೆಬ್ರವರಿ 1ರಿಂದ ಚಿನ್ನದ ಬೆಲೆ ಏರಿಕೆ ಕಂಡು ಬಂದಿದೆ.

ಜನವರಿ 31ಕ್ಕೆ 24 ಕ್ಯಾರೇಟ್ ಚಿನ್ನದ ಬೆಲೆಯು 1 ಗ್ರಾಂಗೆ 8,433 ರೂಪಾಯಿ ಇತ್ತು. ಫೆಬ್ರವರಿ 8ಕ್ಕೆ 8,667 ರೂಪಾಯಿ ಆಗಿದೆ. ವಾರಾಂತ್ಯದಲ್ಲಿ ಅಂದರೆ ಭಾನುವಾರ ಚಿನ್ನದ ಬೆಲೆ ಸಾಮಾನ್ಯವಾಗಿ ಬದಲಾಗುವುದಿಲ್ಲ. ಹೀಗಾಗಿ ಶನಿವಾರದ ಬೆಲೆಯೇ ಮುಂದುವರಿದಿದೆ. ಆದರೆ ಈ ವಾರದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದ್ದೇ ಹೆಚ್ಚು.
ಕಳೆದ ಒಂದು ವಾರದ ಅವಧಿಯಲ್ಲಿ ಚಿನ್ನದ ಬೆಲೆಯು 300 ರೂಪಾಯಿ ಹೆಚ್ಚಳವಾಗಿದೆ. ಇನ್ನು ಈಗಾಗಲೇ ಚಿನ್ನದ ಬೆಲೆಯು 87,000 ಸಾವಿರ ರೂಪಾಯಿ ಸಮೀಪಿಸುತ್ತಿದ್ದು. 90,000 ಸಾವಿರ ರೂಪಾಯಿಗೆ ಕೇವಲ 3,000 ಸಾವಿರ ರೂಪಾಯಿ ಮಾತ್ರ ಬಾಕಿ ಉಳಿದಿದೆ.

ವಾರಾಂತ್ಯದ ಚಿನ್ನದ ಬೆಲೆ ಏನಿದೆ ?
ಫೆಬ್ರವರಿ 9ರ ಚಿನ್ನ ಮತ್ತು ಬೆಳ್ಳಿ ಬೆಲೆ: ವಾರಾಂತ್ಯದಲ್ಲಿ ಅಂದರೆ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಆಗಿಲ್ಲ. 24 ಕ್ಯಾರೇಟ್ ಚಿನ್ನದ ಬೆಲೆಯು 1 ಗ್ರಾಂಗೆ 8,667 ರೂಪಾಯಿ ಆಗಿದೆ. ಇನ್ನು 10 ಗ್ರಾಂಗೆ 86,670 ರೂಪಾಯಿ ಆಗಿದೆ. ಇನ್ನು 22 ಕ್ಯಾರೇಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 7,945 ರೂಪಾಯಿ ಇದ್ದರೆ, 10 ಗ್ರಾಂಗೆ 79,450 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ ಹೇಗಿದೆ: ಇನ್ನು ಫೆಬ್ರವರಿ 9ರಂದು ಬೆಳ್ಳಿ ಬೆಲೆ ಸಹ ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 99.50 ರೂಪಾಯಿ ಇದೆ. ಪ್ರತಿ ಕೆ.ಜಿ ಬೆಳ್ಳಿ ಬೆಲೆಯು 99,500 ರೂಪಾಯಿ ಆಗಿದೆ.












Click it and Unblock the Notifications