Gold Price: ಚಿನ್ನದ ಬೆಲೆ 67,600 ರೂಪಾಯಿ: ಬಂಗಾರದ ಬೆಲೆ 70,000 ಮುಟ್ಟಲು 2400 ರೂಪಾಯಿ ಬಾಕಿ!
ಚಿನ್ನ.. ಚಿನ್ನ.. ಚಿನ್ನ.. ಈಗ ಎಲ್ಲೆಲ್ಲೂ ಚಿನ್ನ & ಬೆಳ್ಳಿ ಬಗ್ಗೆಯೇ ಧ್ಯಾನ ನಡೆಯುತ್ತಿದೆ. ಈ ಸಮಯದಲ್ಲಿ ದಿಢೀರ್ ಯಾಕಪ್ಪಾ ಚಿನ್ನದ ಬಗ್ಗೆ ಮಾತು ಅಂದ್ರಾ? ಅಷ್ಟಕ್ಕೂ ಇನ್ನೇನು ಆಷಾಢ ಮಾಸ ಮುಗಿದೇ ಹೋಗುತ್ತಿದೆ. ಹೀಗಾಗಿ ಶ್ರಾವಣ ಶುರುವಾಗಿ, ಶುಭ ಕಾರ್ಯಗಳ ಸರದಿ ಆರಂಭ ಆಗಲಿದೆ. ಹೀಗಾಗಿ ಚಿನ್ನ & ಬೆಳ್ಳಿಗೆ ಭಾರಿ ಬೇಡಿಕೆ ಬಂದಿದೆ. ಹಾಗಾದ್ರೆ ಚಿನ್ನ & ಬೆಳ್ಳಿ ಬೆಲೆ ಈಗ ಎಷ್ಟಿದೆ ಗೊತ್ತಾ? ಬನ್ನಿ ತಿಳಿಯೋಣ.
ಚಿನ್ನದ ಬೆಲೆ ಹೆಚ್ಚಾದರೆ ಹೂಡಿಕೆ ಮಾಡುವವರಿಗೆ ಖುಷಿ ಆಗುತ್ತೆ. ಆದ್ರೂ, ಆಭರಣವನ್ನ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನ ಬೆಲೆ ಕುಸಿದರೆ ಮಾತ್ರ ಸಂತಸವಾಗುತ್ತೆ. ಹೀಗೆ ಚಿನ್ನದ ಬೆಲೆಯು ಕಳೆದ 3 ತಿಂಗಳಿಂದ ಭಾರಿ ಏರಿಳಿತವನ್ನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಆಭರಣ ಕೊಳ್ಳುವವರಿಗೆ ಈ ತಿಂಗಳು ಚಿನ್ನ ಕೈಸುಡಲಿದೆ ಎನ್ನಲಾಗಿತ್ತು. ಈ ಹೊತ್ತಲ್ಲಿ ಕಳೆದ ವಾರ ಪೂರ್ತಿ ಚಿನ್ನದ ಬೆಲೆ ಏರುತ್ತಲೇ ಸಾಗಿತ್ತು. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಬಂಗಾರದ ಬೆಲೆ ಮಾಹಿತಿ ಇಲ್ಲಿದೆ
ಚಿನ್ನಕ್ಕೆ ಎಂದಿಗೂ ಅದರದ್ದೇ ಆದ ಗತ್ತು & ಬೆಲೆ ಇದ್ದೇ ಇರುತ್ತದೆ ಎಂಬ ಮಾತು ಸತ್ಯವಾಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮೊನ್ನೆ ಏರಿಕೆ ಬಳಿಕ ಹೊಸ ದಾಖಲೆ ಸೃಷ್ಟಿ ಮಾಡಿದೆ. 100 ಗ್ರಾಂಗೆ 3,300 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,37,500 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 73,750 ರೂಪಾಯಿಗೆ ಏರಿಕೆ ಆಗಿದೆ. ಹಾಗಾದ್ರೆ ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನ ಈಗ ಎಷ್ಟಿದೆ? ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಮುಂದೆ ಓದಿ.
ಬೆಳ್ಳಿ ಬೆಲೆ ಈಗ ಎಷ್ಟಿದೆ?
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನ ಬೆಲೆ ಭಾರಿ ಏರಿಕೆ ಕಂಡು, ಪ್ರತಿ 100 ಗ್ರಾಂ ಆಭರಣ ಚಿನ್ನ ಬೆಲೆ ಈಗ 3,000 ರೂಪಾಯಿ ಏರಿಕೆ ಆಗಿಬಿಟ್ಟಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆ 300 ರೂಪಾಯಿ ಏರಿಕೆ ಆಗಿದೆ. ಆಭರಣ ಚಿನ್ನ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 67,600 ರೂಪಾಯಿಗೆ ಮಾರಾಟ ಆಗುತ್ತಿದೆ. ಒಟ್ನಲ್ಲಿ ಇದೇ ರೀತಿ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣ್ತಿದೆ ಎನ್ನಬಹುದು. ಬೆಳ್ಳಿ ಬೆಲೆ ಇದೀಗ ಕೆಜಿಗೆ 95,000 ರೂಪಾಯಿ ಆಗಿದೆ. ಆದರೂ ಚಿನ್ನ & ಬೆಳ್ಳಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.












Click it and Unblock the Notifications