Gold Price: ಚಿನ್ನದ ಬೆಲೆ 6,500 ರೂಪಾಯಿ ಕುಸಿತ, ಬಂಗಾರದ ಬೆಲೆ ಈಗ ಎಷ್ಟಿದೆ?

ಚಿನ್ನ ಬೆಲೆ ಭಾರಿ ಏರಿಕೆ ಕಂಡ ನಂತರ ಇದೀಗ ಚಿನ್ನ ಬೆಲೆ ಭಾರಿ ಕುಸಿತ ಕಾಣುತ್ತಿದೆ. ಹೀಗೆ ಜಗತ್ತಿನ ಅತ್ಯುತ್ತಮ ಲೋಹ ಅಂತಾ ಕರೆಯಲಾಗುವ ಹಳದಿ ಲೋಹ ಬಂಗಾರದ ಬೆಲೆಯು ಇಳಿಕೆ ಕಂಡಿರುವುದು ಆಭರಣ ಪ್ರಿಯರಿಗೆ ಸಖತ್ ಖುಷಿ ನೀಡಿದೆ. ನವೆಂಬರ್ ತಿಂಗಳಲ್ಲಿ ಈ ಚಿನ್ನದ ಬೆಲೆ ಏರಿಕೆ & ಇಳಿಕೆ ಕಂಡು ಗಮನ ಸೆಳೆದಿತ್ತು. ಇದೀಗ ಡಿಸೆಂಬರ್ ಆರಂಭದಲ್ಲೇ ಚಿನ್ನದ ಬೆಲೆ 6,500 ರೂಪಾಯಿ ಕುಸಿತ ಕಂಡಿದೆ, ಹಾಗಾದ್ರೆ ಚಿನ್ನದ ಬೆಲೆ ಕುಸಿತದ ನಂತರ ಈಗ ಎಷ್ಟಿದೆ ರೇಟ್?

ಚಿನ್ನ ಖರೀದಿ ಮಾಡಲು ಕಾಯುತ್ತಿರುವ ಆಭರಣ ಪ್ರಿಯರಿಗೆ ಭಾರಿ ಭರ್ಜರಿ ಸುದ್ದಿ ಇದೀಗ ಸಿಗುತ್ತಿದೆ. ಚಿನ್ನ ಖರೀದಿ ಮಾಡಲು, ಸಾಕಷ್ಟು ದುಬಾರಿ ಆಗಿದೆ ಬಂಗಾರ ಅಂತಾ ಸಿಕ್ಕಾಪಟ್ಟೆ ಯೋಚನೆ ಮಾಡುವಂತೆ ಆಗಿತ್ತು. ಅದರಲ್ಲೂ, ಮದುವೆ ಸೀನ್ ಆರಂಭ ಆಗಿದ್ದ ಕಾರಣಕ್ಕೆ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಾ ಇತ್ತು. ಆದರೆ ಇದೀಗ ಮದುವೆ ಸೀಸನ್ ಮುಗಿತಾ ಇದ್ದು, ಚಿನ್ನದ ಬೆಲೆ ಕುಸಿತದ ಕಡೆಗೆ ಮುಖ ಮಾಡಿದೆ. ಅದರಲ್ಲೂ ಇಂದು ಒಂದೇ ದಿನದಲ್ಲಿ ಚಿನ್ನ ಬೆಲೆ 6,500 ರೂಪಾಯಿ ಕುಸಿತ....

Gold Price And Silver Price Is Decreased On December 1st Of 2024

ಚಿನ್ನ ಬೆಲೆ 6,500 ರೂಪಾಯಿ ಕುಸಿತ....

ಹೌದು, ಇಂದು ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 6,500 ರೂಪಾಯಿ ಕುಸಿತವು ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ ಈ ರೀತಿಯಾಗಿ ಒಂದೇ ದಿನ ಭರ್ಜರಿ ಕುಸಿತ ಕಂಡ ಕಾರಣಕ್ಕೆ ಆಭರಣ ಖರೀದಿ ಮಾಡಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಕೂಡ ಸಿಕ್ಕಾಪಟ್ಟೆ ಖುಷಿ ಖುಷಿ ಆಗಿದೆ. ಹಾಗಾದ್ರೆ ಇದೀಗ ಆಭರಣ ಚಿನ್ನದ ಬೆಲೆ ಎಷ್ಟಿದೆ? ಬೆಲೆ ಕುಸಿತದ ಬಳಿಕ ಚಿನ್ನ ಎಷ್ಟು ಸಾವಿರಕ್ಕೆ ಇಳಿಕೆ ಆಗಿದೆ? ಮುಂದೆ ಓದಿ.

24 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತಿ 100 ಗ್ರಾಂಗೆ 6,500 ರೂಪಾಯಿ ಕುಸಿತ ಕಂಡಿದ್ದು, ಈ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,73,500 ರೂಪಾಯಿ ಆಗಿದೆ. ಹಾಗೇ, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 77,350 ರೂಪಾಯಿಗೆ ಇಳಿಕೆ ಕಂಡಿದೆ.

ಮತ್ತೊಂದು ಕಡೆ 22 ಕ್ಯಾರೆಟ್ ಚಿನ್ನ ಅಂದ್ರೆ ಆಭರಣ ಚಿನ್ನದ ಬೆಲೆಯು ಪ್ರತಿ 100 ಗ್ರಾಂಗೆ 6,000 ರೂಪಾಯಿ ಕುಸಿತ ಕಂಡಿದ್ದು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,09,000 ರೂಪಾಯಿಗೆ ಇಳಿಕೆ ಆಗಿದೆ. ಹಾಗೇ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಈಗ 70,900 ರೂಪಾಯಿಗೆ ಇಳಿಕೆ ಆಗಿದೆ.

ಬೆಳ್ಳಿ ಬೆಲೆಯಲ್ಲೂ ಭರ್ಜರಿ ಕುಸಿತ!

ಒಟ್ನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನವು ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆ ದಟ್ಟವಾಗಿದೆ. ಹಾಗೇ ಇನ್ನೊಂದು ಕಡೆ ಅಂತಾರಾಷ್ಟ್ರೀಯ ಬೆಳವಣಿಗೆಗಳು ಕೂಡ ಇದೀಗ ಚಿನ್ನದ ಬೆಲೆಯ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಬೆಳ್ಳಿ ಬೆಲೆಯಲ್ಲಿ ಕೂಡ ಕುಸಿತ ಕಂಡು ಬಂದಿದೆ. ಈಗ, ಪ್ರತಿ 01 ಕೆ.ಜಿ. ಬೆಳ್ಳಿ ಬೆಲೆ 500 ರೂಪಾಯಿ ಕುಸಿತ ಕಂಡು, 91,000 ರೂಪಾಯಿ ಪ್ರತಿ ಕೆಜಿಗೆ ಮಾರಾಟ ಆಗುತ್ತಿದೆ.

1 ಲಕ್ಷ ರೂಪಾಯಿ ತಲುಪಿತ್ತು!

ಚಿನ್ನ ಬಹು ಬೇಡಿಕೆಯ ವಸ್ತುವಾಗಿದೆ ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗಲೇ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿಯ ಬೆಲೆ ಹತ್ತಿರ ಹತ್ತಿರ 1 ಲಕ್ಷ ರೂಪಾಯಿ ಮುಟ್ಟಿತ್ತು. ಇಂಥ ಸ್ಥಿತಿಯಲ್ಲಿ ದಿಢೀರ್ ಬೆಳ್ಳಿ ಬೆಲೆಯಲ್ಲಿ ದೊಡ್ಡ ಕುಸಿತವೇ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆ ಕೂಡ ಇದೆ. ಬೆಳ್ಳಿ ಬೆಲೆಯನ್ನ ಬಿಡಿ ಚಿನ್ನ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣ್ತಿದೆ! ಇದು ಈಗ ಆಭರಣ ಪ್ರಿಯರಿಗೆ ಸಖತ್ ಖುಷಿ ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+