ಅಮೆರಿಕ ಮತ್ತು ಇರಾನ್ ​ನಡುವಿನ ಉದ್ವಿಗ್ನ ಸ್ಥಿತಿ, ಚಿನ್ನದ ಬೆಲೆ ಏರಿಕೆ

ನವದೆಹಲಿ, ಜೂನ್ 26 : ಜಾಗತಿಕ ವಿದ್ಯಮಾನಗಳು, ಆಭರಣಗಾರರ ಬೇಡಿಕೆ, ಗ್ರಾಹಕರ ಕೊಳ್ಳುವಿಕೆ ಆಧಾರದ ಮೇಲೆ ಚಿನ್ನದ ಬೆಲೆ ಏರಿಳಿತ ಕಾಣುತ್ತದೆ. ಸತತವಾಗಿ ಹಳದಿ ಲೋಹದ ಬೆಲೆ ಏರಿಕೆಯಾಗುತ್ತಿದೆ. ಬುಧವಾರದಂದು ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 300 ರೂ. ಹೆಚ್ಚಳವಾಗಿದ್ದು ಬೆಲೆ ಪ್ರತಿ 10 ಗ್ರಾಂಗೆ 34,470 ರೂ.ನಂತೆ ಮಾರಾಟವಾಗಿದೆ.

ಅಮೆರಿಕ ಮತ್ತು ಇರಾನ್​ ನಡುವಿನ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆ ಎಂಸಿಎಕ್ಸ್ ನಲ್ಲಿಯೂ ಬಂಗಾರದ ಬೆಲೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 6 ವರ್ಷಗಳಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಏರಿಕೆ ಕಂಡು ಬಂದಿದೆ. ಪರಿಸ್ಥಿತಿ ಇನ್ನೂ ಒಂದು ವಾರ ಹೀಗೆ ಮುಂದುವರೆಯುವ ಸಾಧ್ಯತೆಗಳಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಪ್ರತಿ ಔನ್ಸಿಗೆ 1,408.57 ಡಾಲರ್ಸ್ ನಷ್ಟಿತ್ತು. ಬೆಳ್ಳಿ ಬೆಲೆ ಔನ್ಸಿಗೆ 15.22 ಡಾಲರ್ ನಂತೆ ನ್ಯೂಯಾರ್ಕಿನಲ್ಲಿ ವಹಿವಾಟು ನಡೆಸಿದೆ.

 Gold plunges Rs 300 on weak global cues, muted demand

ಎಂಸಿಎಕ್ಸ್ ನಲ್ಲಿ ಫ್ಯೂಚರ್ ಬಂಗಾರದ ಬೆಲೆ ಮಂಗಳವಾರದಂದು 35 ಸಾವಿರ ರು ಗಡಿ ದಾಟುವ ಸುಳಿವು ನೀಡಿತ್ತು. ಮಾರುಕಟ್ಟೆಯಲ್ಲಿ ಮಂಗಳವಾರ ಬೆಲೆ 403 ರೂಪಾಯಿ ಏರಿಕೆ ಕಂಡಿತ್ತು. ಅಂತಿಮವಾಗಿ 200 ರು ಏರಿಕೆ ಕಂಡು 10 ಗ್ರಾಂ ಬಂಗಾರದ ಬೆಲೆ 34,470 ರೂಪಾಯಿಯಾಗಿತ್ತು. ಬೆಳ್ಳಿ ಬೆಲೆ 190 ರೂಪಾಯಿ ತನಕ ಏರಿಕೆ ಕಂಡರೂ ದಿನದ ವಹಿವಾಟದ ಅಂತ್ಯಕ್ಕೆ 110ರು ಏರಿಕೆ ಕಂಡು 1 ಕೆ.ಜಿಗೆ 39,200 ರೂಪಾಯಿಯಂತೆ ವಹಿವಾಟು ನಡೆಸಿದೆ.

ಬುಧವಾರದಂದು ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 31,170ರು ಹಾಗೂ ಬೆಳ್ಳಿ ಬೆಲೆ 500 ರು ಏರಿಕೆ ಕಂಡು 1 ಕೆಜಿಗೆ 38,700 ರು ನಂತೆ ವಹಿವಾಟು ನಡೆಸಿದೆ.

ದೆಹಲಿಯಲ್ಲಿ 99.9% ಪರಿಶುದ್ಧ ಚಿನ್ನ ಹಾಗೂ 99.5% ಪರಿಶುದ್ಧ ಚಿನ್ನ ಬೆಲೆ ಕ್ರಮವಾಗಿ 10 ಗ್ರಾಂಗೆ 34,170ರು ಹಾಗೂ 34,00ರು ಪ್ರತಿ 10ಗ್ರಾಂ ನಂತೆ ಮಾರಾಟ ಕಂಡಿದೆ.

ಸವರನ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿದ್ದು, 100ರು ಇಳಿಕೆ ಕಂಡು 8 ಗ್ರಾಂಗೆ 26,800ರು ನಷ್ಟಿದೆ. ಬೆಳ್ಳಿ ನಾಣ್ಯಗಳು 1,000 ರು ಏರಿಕೆ ಕಂಡು 100ಕ್ಕೆ 81,000ರು ಖರೀದಿಗೆ ಹಾಗೂ 82,000 ರು ಮಾರಾಟಕ್ಕೆ ದರ ಪಡೆದುಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+