ಚಿನ್ನ ಸಾಲದ ಮಿತಿ 2 ಲಕ್ಷಕ್ಕೆ ಹೆಚ್ಚಿಸಿದ ರಿಸರ್ವ್ ಬ್ಯಾಂಕ್

ಮುಂಬೈ, ಜ. 9: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹಕಾರ ಬ್ಯಾಂಕ್‌ಗಳು ಕೊಡಮಾಡುವ ಚಿನ್ನದ ಸಾಲದ ಮಿತಿಯನ್ನು 2 ಲಕ್ಷ ರೂ.ಗೆ ವಿಸ್ತರಿಸಿದೆ. ಸಹಕಾರ ಬ್ಯಾಂಕ್‌ಗಳ ಬುಲೆಟ್ ರಿಪೇಮೆಂಟ್ ಯೋಜನೆಯ ಅಡಿಯಲ್ಲಿ ವಿತರಿಸುವ ಬಂಗಾರದ ಸಾಲದ ಮಿತಿಯನ್ನು 1 ಲಕ್ಷ ದಿಂದ 2 ಲಕ್ಷ ರೂ.ಗೆ ಏರಿಸಲು ಆರ್‌ಬಿಐ ಅನುಮತಿ ನೀಡಿದೆ.

ಈ ಸಂಬಂಧ ಆರ್ ಬಿಐ ಸುತ್ತೋಲೆ ಹೊರಡಿಸಿದ್ದು ಬ್ಯಾಂಕ್ ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಎಲ್ಲ ರಾಜ್ಯ ಮತ್ತು ಕೇಂದ್ರಿಯ ಸಹಕಾರ ಬ್ಯಾಂಕ್‌ಗಳಿಗೆ ಈ ನಿಯಮ ಅನ್ವಯವಾಗಲಿದೆ.[2005ಕ್ಕಿಂತ ಹಳೆಯ ನೋಟುಗಳಿದ್ದರೆ ಬದಲಾಯಿಸಿ]

loan

ಬುಲೆಟ್ ರಿಪೇಮೆಂಟ್ ಯೋಜನೆ ಅಡಿಯಲ್ಲಿ ಪಡೆಯುವ ಸಾಲ 12 ತಿಂಗಳು ಅಂದರೇ ಒಂದು ವರ್ಷದ ಅವಧಿಯದ್ದಾಗಿರುತ್ತದೆ. ಇಲ್ಲಿ ಅಡವಿಡುವ ಬಂಗಾರದ ಮೇಲಿನ ಬಡ್ಡಿ ಶೇ. 75ನ್ನು ದಾಟುವಂತಿಲ್ಲ ಎಂದು ಅಧಿಸೂಚನೆ ತಿಳಿಸಿದೆ.[ಮುಂದಿನ ವರ್ಷದಲ್ಲಿ ಮೈಸೂರಿಗರ ಕೈಲಿ ಪ್ಲಾಸ್ಟಿಕ್ ನೋಟು]

ರಾಜ್ಯ ಮತ್ತು ಕೇಂದ್ರೀಯ ಸಹಕಾರ ಬ್ಯಾಂಕ್‌ಗಳು ನಾನಾ ಉದ್ದೇಶಗಳಿಗೆ ಚಿನ್ನದ ಆಧಾರದಲ್ಲಿ ಸಾಲ ವಿತರಿಸುತ್ತವೆ . ಸಾಲ ನೀಡಿಕೆ ಮಿತಿ ಹೆಚ್ಚಳ ಮಾಡಿರುವುದು ಆರ್ಥಿಕ ಸ್ಥಿತಿ ಸುಧಾರಣೆ ಮತ್ತು ಹಣದ ವಹಿವಾಟು ಹೆಚ್ಚಿಸಲು ಕಾರಣವಾಗುತ್ತದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+