Gold Loan: ಬ್ಯಾಂಕ್‌ಗಳಲ್ಲಿ ಚಿನ್ನದ ಅಡಮಾನ: ಹೊಸ ಸಂಕಷ್ಟ, ಕೃಷಿ ಚಿನ್ನದ ಸಾಲ ಎಂದರೇನು ಇಲ್ಲಿದೆ ಮಾಹಿತಿ
ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಜನ ಚಿನ್ನ ಖರೀದಿ ಮಾಡುವುದೇ ಕಷ್ಟದ ಸಮಯದಲ್ಲಿ ಚಿನ್ನವನ್ನು ಅಡಮಾನ ಇರಿಸಿ, ಅದರಿಂದ ಬರುವ ಹಣವನ್ನು ಕಷ್ಟದ ಸಮಯದಲ್ಲಿ ಬಳಸಿಕೊಳ್ಳಬಹುದು ಎನ್ನುವ ಕಾರಣಕ್ಕೆ. ಆದರೆ ಬ್ಯಾಂಕ್‌ಗಳು ಚಿನ್ನವನ್ನು ಅಡಮಾನ ಇರಿಸುವ ಸಂದರ್ಭದಲ್ಲಿ ಮಾಡುತ್ತಿರುವ ಸಣ್ಣ ಬದಲಾವಣೆಯೊಂದು ಸಂಕಷ್ಟವನ್ನು ತಂದೊಡ್ಡುತ್ತಿದೆ. ಅದೇನು ಎನ್ನುವ ವಿವರ ಈ ಲೇಖನದಲ್ಲಿದೆ.
ಸರ್ಕಾರಿ ಬ್ಯಾಂಕ್‌ವೊಂದರಲ್ಲಿ 50,000 ರೂ. ಚಿನ್ನದ ಸಾಲ ತೆಗೆದುಕೊಂಡು ವ್ಯಕ್ತಿಯೊಬ್ಬರು ಎದುರಿಸಿದ ಅನುಭವ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. 50,000 ರೂ. ಚಿನ್ನದ ಸಾಲ ತೆಗೆದುಕೊಳ್ಳುವ ಸಂದರ್ಭದಲ್ಲಿ ಚಿನ್ನವನ್ನು ಗಿರವಿ ಇಟ್ಟು ಸುಮಾರು 8% ರಿಂದ 9% ಬಡ್ಡಿದರದಲ್ಲಿ ಸಾಲ ಸಿಕ್ಕಿದೆ. ಇದು ವೈಯಕ್ತಿಕ ಅಗತ್ಯಕ್ಕಾಗಿ ತೆಗೆದುಕೊಂಡ ಸಾಲ. ಆದರೆ ಬ್ಯಾಂಕ್‌ನಿಂದ ಬಂದ ಎಸ್‌ಎಂಎಸ್‌ಗಳಲ್ಲಿ ಮತ್ತು ಸ್ವೀಕೃತಿ ಮೆಸೇಜ್‌ಗಳಲ್ಲಿ ಈ ಸಾಲವನ್ನು ಕೃಷಿ ಚಿನ್ನದ ಸಾಲ ಎಂದು ನಮೂದಿಸಲಾಗಿದೆ. ನಾನು ರೈತ ಅಲ್ಲ, ಹಾಗಾಗಿ ಇದು ನನಗೆ ಗಾಬರಿಯಾಗಿಸಿತ್ತು ಎಂದು ಹೇಳಿಕೊಂಡಿದ್ದಾರೆ.

ಈ ವಿಚಾರವಾಗಿ ಅವರು ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದಾಗ 2 ಲಕ್ಷಕ್ಕಿಂತ ಕಡಿಮೆ ಮೊತ್ತದ ಚಿನ್ನದ ಸಾಲಗಳನ್ನು ಕೆಲವೊಮ್ಮೆ ಕೃಷಿ ಸಾಲ ಎಂದು ಟ್ಯಾಗ್ ಮಾಡುತ್ತಾರೆ. ಇದು ಕೇವಲ ಬ್ಯಾಂಕ್‌ನ ಸಿಸ್ಟಮ್ ವಿಷಯ. ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದಿದ್ದಾರೆ. ನಿಜವಾಗಿಯೂ, ಬ್ಯಾಂಕ್‌ಗಳಲ್ಲಿ ಕೆಲವೊಮ್ಮೆ ತಪ್ಪಾದ ಎಂಟ್ರಿ ಅಥವಾ ಕೋಡ್ ತಪ್ಪು ಆಗಬಹುದು. ಕೇವಲ ಎಸ್‌ಎಂಎಸ್‌ನಲ್ಲಿ ಕೃಷಿ ಸಾಲ ಎಂದು ಬಂದಿದ್ದರಿಂದ, ಅದು ಸರ್ಕಾರದ ಸಬ್ಸಿಡಿ ಪಡೆದ ಸಾಲ ಆಗುವುದಿಲ್ಲ ಆದರೂ ಸುರಕ್ಷತವಾಗಿರಬೇಕು.
ಕೃಷಿಕರಲ್ಲದವರು ಚಿನ್ನವನ್ನು ಅಡಮಾನ ಇರಿಸಿ ಸಾಲ ಪಡೆಯುವಾಗ ಕೃಷಿ ಚಿನ್ನದ ಸಾಲ ಎಂದು ನಮೂದಿಸುವುದು ಸಮಸ್ಯೆ ಅಲ್ಲ ಎಂದು ಬ್ಯಾಂಕ್‌ಗಳು ಹೇಳಿದರೂ. ಮುಂದಿನ ದಿನಗಳಲ್ಲಿ ನೀವು ಸಾಲ ಪಡೆಯುವಾಗ ಅಥವಾ ದಾಖಲೆಗಳಲ್ಲಿ ಸಮಸ್ಯೆ ಆಗುವ ಸಾಧ್ಯೆತ ಇದ್ದೇ ಇರುತ್ತದೆ. ಅಲ್ಲದೇ ಇದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ಈ ವಿಚಾರದಲ್ಲಿ ಪರಿಶೀಲನೆ ಮಾಡುವುದು ಅತ್ಯಗತ್ಯವಾಗಿದೆ.
ಕೃಷಿ ಚಿನ್ನದ ಸಾಲ ಎಂದರೇನು
ಕೃಷಿ ಚಿನ್ನದ ಸಾಲವು ರೈತರು ಮತ್ತು ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಗಿರುವವರಿಗೆ ನೀಡುವ ವಿಶೇಷ ಸಾಲವಾಗಿದೆ. ಬೀಜ, ಗೊಬ್ಬರ, ನೀರಾವರಿ, ಕೃಷಿ ಉಪಕರಣಗಳ ದುರಸ್ತಿ ಮುಂತಾದ ಕೃಷಿ ಅಗತ್ಯಗಳಿಗೆ ಈ ಸಾಲವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಕಡಿಮೆ ಬಡ್ಡಿದರ (ಸುಮಾರು 7%ರಿಂದ) ಇರುತ್ತದೆ ಮತ್ತು ಬೆಳೆ ಕಟಾವು ಸಮಯಕ್ಕೆ ಅನುಗುಣವಾಗಿ ಮರುಪಾವತಿ ಮಾಡುವುದಕ್ಕೆ ಅವಕಾಶ ಇರಲಿದೆ. ಸಾಮಾನ್ಯವಾಗಿ ಚಿನ್ನದ ಸಾಲವನ್ನು ಯಾರಾದರೂ ವೈಯಕ್ತಿಕ ಅಗತ್ಯಕ್ಕೆ ಬಳಸಬಹುದು, ಆದರೆ ಕೃಷಿ ಚಿನ್ನದ ಸಾಲವು ಕೃಷಿಗೆ ಮಾತ್ರ ಸೀಮಿತವಾಗಿರುತ್ತದೆ ಎನ್ನುವ ನಿಯಮವಿದೆ. ಆದರೆ ಬ್ಯಾಂಕ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ತಪ್ಪು ನಮೂದು ಆಗುತ್ತಿರುವುದು ಬೆಳಕಿಗೆ ಬಂದಿದೆ.
ಕೃಷಿ ಚಿನ್ನದ ಸಾಲ ಎಂಟ್ರಿ ತಪ್ಪಿಸುವುದು ಹೇಗೆ
1. ಚಿನ್ನವನ್ನು ಅಡಮಾನ ಇರಿಸುವಾಗ ನಿಮ್ಮ ಸಾಲ ಒಪ್ಪಂದ ಪತ್ರವನ್ನು ಚೆನ್ನಾಗಿ ಓದಿ.
2. ಸಾಲದ ಉದ್ದೇಶ ವೈಯಕ್ತಿಕ ಎಂದು ಇದೆಯೇ ಎಂದು ಪರಿಶೀಲನೆ ಮಾಡಿ.
3. ಬಡ್ಡಿದರ ಸರಿಯಾಗಿದೆಯೇ ಪರಿಶೀಲಿನೆ ಮಾಡಿಕೊಳ್ಳಿ.
4. ಅದೇ ಸರಿಯಾಗಿದ್ದರೆ, ಚಿಂತಿಸಬೇಕಾದ ಅಗತ್ಯ ಇರುವುದಿಲ್ಲ.
5. ಇನ್ನೂ ಅನುಮಾನ ಇದ್ದರೆ ಬ್ಯಾಂಕ್ ಗ್ರಾಹಕ ಸೇವೆಗೆ ಇಮೇಲ್ ಮೂಲಕ ಬರಹದಲ್ಲಿ ತಿಳಿಸಿ ಅಥವಾ ದೂರು ವಿಭಾಗಕ್ಕೆ ವಿಷಯವನ್ನು ದಾಖಲಿಸಬಹುದು.












Click it and Unblock the Notifications