Gold Price: ಚಿನ್ನ ಬೆಳ್ಳಿ ಬೆಲೆ ಅಗ್ಗ: 7 ನವೆಂಬರ್‌ 22, 24 ಕ್ಯಾರೆಟ್ ಚಿನ್ನದ ಹೊಸ ದರ ಇಲ್ಲಿದೆ...

ಭಾರತದಲ್ಲಿ ಇಂದು (7 ನವೆಂಬರ್ 2024) ಬೆಳಿಗ್ಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 76 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ, ಬೆಳ್ಳಿಯ ಬೆಲೆ ಕೆಜಿಗೆ 90 ಸಾವಿರ ರೂಪಾಯಿ ಇದೆ. ರಾಷ್ಟ್ರಮಟ್ಟದಲ್ಲಿ 999 ಶುದ್ಧತೆಯ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 76556 ರೂಪಾಯಿ ಹಾಗೂ 999 ಶುದ್ಧ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 90153 ರೂಪಾಯಿ ಇದೆ.

ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, ಬುಧವಾರ ಸಂಜೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 78136 ರೂ ಆಗಿದ್ದು, ಇಂದು (ಗುರುವಾರ) ಬೆಳಿಗ್ಗೆ 76556 ರೂ.ಗೆ ಅಗ್ಗವಾಗಿದೆ. ಶುದ್ಧತೆಯ ಆಧಾರದ ಮೇಲೆ ಚಿನ್ನ ಮತ್ತು ಬೆಳ್ಳಿ ಎರಡೂ ಅಗ್ಗವಾಗಿವೆ.

gold and silver rate drop on november 7 in India new update

ಇಂದು 22-24 ಕ್ಯಾರೆಟ್ ಚಿನ್ನದ ದರ ಎಷ್ಟು?

ಅಧಿಕೃತ ವೆಬ್‌ಸೈಟ್ ibjarates.com ಪ್ರಕಾರ ಇಂದು 995 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 76249 ರೂ. 916 (22 ಕ್ಯಾರೆಟ್) ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 70125 ರೂ. 750 (18 ಕ್ಯಾರೆಟ್) ಶುದ್ಧತೆಯ ಚಿನ್ನದ ದರ 10 ಗ್ರಾಂಗೆ 57417 ರೂ. 585 (14 ಕ್ಯಾರೆಟ್) ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 44785 ರೂ. ಇದೆ.

ಭಾರತದಲ್ಲಿ 100 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 7,36,500 ರೂ.ನಿಂದ ಇಂದು 7,20,000 ರೂ.ಗೆ ಕುಸಿದಿದ್ದು, ಒಂದೇ ದಿನದಲ್ಲಿ 16,500 ರೂಪಾಯಿ ಇಳಿಕೆಯಾಗಿದೆ. ಇನ್ನು 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಬುಧವಾರ 8,03,500 ರಿಂದ ಭಾರತದಲ್ಲಿ 7,85,600 ರೂ.ಗೆ ಕುಸಿದಿದೆ. ಇದು ಒಂದೇ ದಿನದಲ್ಲಿ 17,900 ರೂಪಾಯಿ ಇಳಿಕೆಯಾಗಿದೆ.

ಭಾರತದಲ್ಲಿ ಇಂದು 18ಕ್ಯಾರಟ್ ಚಿನ್ನದ ದರಗಳು

ಭಾರತದಲ್ಲಿ 10 ಗ್ರಾಂ 18 ಕ್ಯಾರೆಟ್ ಚಿನ್ನ ಇಂದು ರೂ 58,910 ಕ್ಕೆ ಇಳಿದಿದೆ, ನಿನ್ನೆ ರೂ 60,260 ಕ್ಕೆ ಹೋಲಿಸಿದರೆ ರೂ 1,350 ರ ಬೆಲೆ ಕುಸಿತ ಕಂಡಿದೆ. ಅದೇ ರೀತಿ ಗುರುವಾರ ಭಾರತದಲ್ಲಿ 100 ಗ್ರಾಂ 18 ಕ್ಯಾರಟ್ ಚಿನ್ನದ ದರವು 5,89,100ಕ್ಕೆ ಇಳಿದಿದೆ, ಇದು ಬುಧವಾರ ರೂ 6,02,600 ಇದು 15.500 ರೂಪಾಯಿಯಷ್ಟು ಅಗ್ಗವಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿಜಯದ ನಂತರ ಡಾಲರ್ ವೇಗವನ್ನು ಪಡೆಯುತ್ತಿದ್ದಂತೆ, ಗುರುವಾರ ಸುಮಾರು ಮೂರು ವಾರಗಳಲ್ಲಿ ಕಾಣದ ಮಟ್ಟಕ್ಕೆ ಚಿನ್ನದ ಬೆಲೆ ಕುಸಿದಿದೆ.

ಇಂದಿನ ಬೆಳ್ಳಿ ದರಗಳು

ಭಾರತದಲ್ಲಿ ಬೆಳ್ಳಿಯ ಬೆಲೆ ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 93,000 ರೂಪಾಯಿ ಮತ್ತು ಪ್ರತಿ ಗ್ರಾಂಗೆ 93 ರೂ ಆಗಿದೆ. ಬುಧವಾರದಂದು 960 ರೂ.ಗೆ ಹೋಲಿಸಿದರೆ 10 ಗ್ರಾಂ ಬೆಳ್ಳಿ ಗುರುವಾರ 930 ರೂ.ಗೆ ತಲುಪಿದೆ. ಇದು 30ರೂ. ಕುಸಿತವನ್ನು ಕಂಡಿದೆ. ಭಾರತದಲ್ಲಿ ಇಂದು 100 ಗ್ರಾಂ ಬೆಳ್ಳಿ ದರ ನಿನ್ನೆ ರೂ.9,600 ಕ್ಕೆ ಹೋಲಿಸಿದರೆ 9,300ರೂ ಆಗಿದೆ. 1 ಕೆಜಿ ಬೆಳ್ಳಿಯ ಬೆಲೆ ಇಂದು ಭಾರತದಲ್ಲಿ 93,000 ರೂ.ಯಾಗಿದ್ದು, ನಿನ್ನೆ 96,000 ರೂ.ಗಳಿಗೆ ಹೋಲಿಸಿದರೆ ಒಂದೇ ದಿನದಲ್ಲಿ 3,000 ರೂಪಾಯಿ ಇಳಿಕೆಯಾಗಿದೆ.

ಭಾರತೀಯರಿಗೆ ಚಿನ್ನ ಅಂದರೆ ಬಹಳ ಅಚ್ಚುಮೆಚ್ಚು. ಬಹಳ ಹಿಂದನಿಂದಲೂ ಹೆಣ್ಮಕ್ಕಳಿಗೆ ಚಿನ್ನ ಅಂದರೆ ವ್ಯಾಮೋಹ ಜಾಸ್ತಿ. ಚಿನ್ನ ಸೌಂದರ್ಯ ಅಲ್ಲದೆ ಸಂಪತ್ತು, ಶಕ್ತಿ ಮತ್ತು ಸಮೃದ್ಧಿಯೊಂದಿಗೆ ಸಂಬಂಧಿಸಿದೆ. ಹೀಗಾಗಿ ಚಿನ್ನ ಬೆಳ್ಳಿ ಬೆಲೆ ಕಡಿಮೆಯಾಗುತ್ತಿದ್ದಂತೆ ಚಿನ್ನ ಖರೀದಿ ಮಾಡಲು ಜನ ಮುಗಿ ಬಿದ್ದಿದ್ದಾರೆ. ಹಬ್ಬದ ಸಂದರ್ಭದಲ್ಲಿ ಯಾರಿಗೆ ಚಿನ್ನ ಖರೀದಿ ಮಾಡಲು ಸಾಧ್ಯವಾಗಿಲ್ಲವೋ ಅವರಿಗೆಲ್ಲಾ ಚಿನ್ನದ ಬೆಲೆ ಕೇಳಿ ಸಂತೋಷವಾಗಿದೆ. ಚಿನ್ನದ ಬೆಲೆ ಹೆಚ್ಚಿರುವಾಗಲೇ ಖರೀದಿಗೆ ಮುಂದಾಗುವ ಜನ ಇನ್ನೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಾಗ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ಚಿನ್ನದ ಶುದ್ಧತೆ ತಿಳಿಯುವುದು ಹೇಗೆ?

ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ISO (ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್) ಹಾಲ್ ಮಾರ್ಕ್‌ಗಳನ್ನು ನೀಡುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್‌ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾಗಿರುತ್ತದೆ. ಹಾಲ್ ಮಾರ್ಕ್‌ ಇದ್ದ ಚಿನ್ನವನ್ನು ಖರೀದಿ ಮಾಡುವುದು ಮುಖ್ಯ.

ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಕೆಲವರು 18 ಕ್ಯಾರೆಟ್‌ಗಳನ್ನು ಸಹ ಬಳಸುತ್ತಾರೆ. ಕ್ಯಾರೆಟ್ 24 ಕ್ಕಿಂತ ಹೆಚ್ಚಿಲ್ಲ. ಹೆಚ್ಚಿನ ಕ್ಯಾರೆಟ್ ಚಿನ್ನವು ಶುದ್ಧವಾಗಿರುತ್ತದೆ.

22 ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸವೇನು ಗೊತ್ತಾ?

24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ ಮತ್ತು 22 ಕ್ಯಾರೆಟ್ ಚಿನ್ನವು ಸರಿಸುಮಾರು 91 ಪ್ರತಿಶತ ಶುದ್ಧವಾಗಿರುತ್ತದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತು ಮುಂತಾದ ಇತರ ಲೋಹಗಳನ್ನು ಶೇ.9 ರಷ್ಟು ಮಿಶ್ರಣ ಮಾಡಿ ಆಭರಣಗಳನ್ನು ತಯಾರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನ ಶುದ್ಧ ಚಿನ್ನವಾಗಿದ್ದು ಅದನ್ನು ಆಭರಣವಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್‌ನಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಾರೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+