Gold and silver prices Today: ಒಂದು ವಾರದಲ್ಲಿ ಬಂಗಾರ, ಬೆಳ್ಳಿ ಬೆಲೆ ಕಡಿಮೆಯಾಯ್ತಾ? ಏರಿಕೆಯಾಯ್ತಾ?
ಬೆಂಗಳೂರು, ಫೆಬ್ರವರಿ.19: ಚಿನ್ನ ಪ್ರಿಯರಿಗೆ ಕೊಂಚ ಸಮಾಧಾನ. ಸತತ ಎರಡು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಇಂದು ಕೊಂಚ ಸಮಾಧಾನ ತಂದಿದೆ. ವಾರದಿಂದ ಹೆಚ್ಚಾಗಿದ್ದ ಚಿನ್ನ ಬೆಲೆ ಕೊಂಚ ಮಟ್ಟಿಗೆ ಬದಲಾಗದೆ ಇವೆ. ಹೆಚ್ಚುತ್ತಿರುವ ದೇಶೀಯ ಬೇಡಿಕೆ ಮತ್ತು ಅಂತಾರಾಷ್ಟ್ರೀಯ ಚಿನ್ನದ ಬೆಲೆ ಏರಿಕೆಯಿಂದಾಗಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡಿದ್ದಾರೆ.
ಪ್ರಸ್ತುತ ನಮ್ಮ ದೇಶದಲ್ಲಿ ಮದುವೆ ಸೀಸನ್ ಇರುವ ಹಿನ್ನೆಲೆ ಚಿನ್ನಾಭರಣಗಳು ಹಾಗೂ ಶುದ್ಧ ಚಿನ್ನವನ್ನು ಹೆಚ್ಚಾಗಿ ಖರೀದಿಸಲಾಗುತ್ತಿದೆ. ಇದರಿಂದಾಗಿ ಈ ತಿಂಗಳಿನಲ್ಲಿ ಚಿನ್ನದ ಬೆಲೆ ಕ್ರಮೇಣ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಫೆಬ್ರವರಿ 19 ರಂದು ಬೆಂಗಳೂರು ಸೇರಿದಂತೆ ದೆಹಲಿಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ ಎಂಬುದನ್ನು ನೋಡೋಣ.

ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ನೋಡುವುದಾದರೇ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಏರಿಕೆಯಾಗುತ್ತಿವೆ. ಪ್ರಸ್ತುತ ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 2013.45 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಸ್ಪಾಟ್ ಬೆಳ್ಳಿ ದರವು ಪ್ರತಿ ಔನ್ಸ್‌ಗೆ 23.43 ಡಾಲರ್‌ಗಳಲ್ಲಿ ಮುಂದುವರಿಯುತ್ತದೆ. ಅಂತಾರಾಷ್ಟ್ರೀಯ ಡಾಲರ್‌ಗೆ ಹೋಲಿಸಿದರೆ ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯ ಇಂದು ಕೊಂಚ ಇಳಿಕೆಯಾಗಿದೆ.
ಭಾನುವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿತ್ತು. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 6273.1 ಆಗಿದ್ದು, ರೂ.679.0 ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ.5746.2 ಆಗಿದ್ದು, ರೂ.622.0 ಕಡಿಮೆಯಾಗಿದೆ. ಕಳೆದ ಒಂದು ವಾರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 3.21% ಆಗಿದ್ದರೆ, ಕಳೆದ ತಿಂಗಳಲ್ಲಿ ಅದು 2.16% ಆಗಿದೆ. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ರೂ.75,600 ರೂಪಾಯಿಯಿತ್ತು.

ಆದರೆ, ಫೆಬ್ರವರಿ 19 ರಂದು ಸೋಮವಾರ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,400 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,200 ರೂಪಾಯಿ ಮತ್ತು ಬೆಳ್ಳಿ 100 ಗ್ರಾಮ್ಗೆ 7,300 ರೂಪಾಯಿ ದರದಲ್ಲಿವೆ.
ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೀಗಿವೆ:
*ಚೆನ್ನೈ: ಚಿನ್ನದ ಬೆಲೆ ರೂ.63163.0/10 ಗ್ರಾಂ
ಬೆಳ್ಳಿ ಬೆಲೆ ರೂ.77000.0/1ಕೆಜಿ.
* ದೆಹಲಿ: ಚಿನ್ನದ ಬೆಲೆ ರೂ.62731.0/10ಗ್ರಾಂ
ಬೆಳ್ಳಿ ಬೆಲೆ ರೂ.75600.0/1ಕೆಜಿ.
*ಮುಂಬೈ: ಚಿನ್ನದ ಬೆಲೆ ರೂ.63657.0/10ಗ್ರಾಂ
ಬೆಳ್ಳಿ ಬೆಲೆ ರೂ.75600.0/1ಕೆಜಿ.
* ಕೋಲ್ಕತ್ತಾ: ಚಿನ್ನದ ಬೆಲೆ ರೂ.62731.0/10ಗ್ರಾಂ
ಬೆಳ್ಳಿ ಬೆಲೆ ರೂ.75600.0/1ಕೆಜಿ.
* ಹೈದರಾಬಾದ್: ಚಿನ್ನದ ಬೆಲೆ ರೂ 57200.0/10ಗ್ರಾಂ
ಬೆಳ್ಳಿ ಬೆಲೆ ರೂ.75500.0/1ಕೆಜಿ.
ಇನ್ನು, ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿನ ಏರಿಳಿತಗಳು ಪ್ರತಿಷ್ಠಿತ ಆಭರಣಕಾರರ ಇನ್ಪುಟ್ ಸೇರಿದಂತೆ ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಬಂಗಾರಕ್ಕೆ ಇರುವ ಜಾಗತಿಕ ಬೇಡಿಕೆ, ಕರೆನ್ಸಿ ಏರಿಳಿತಗಳು, ಚಾಲ್ತಿಯಲ್ಲಿರುವ ಬಡ್ಡಿದರಗಳು ಮತ್ತು ಚಿನ್ನದ ಮಾರುಕಟ್ಟೆಗೆ ಸಂಬಂಧಿಸಿದ ಸರ್ಕಾರಿ ನಿಯಮಗಳಂತಹ ಅಂಶಗಳು ಈ ಏರಿಳಿತಗಳಿಗೆ ಕಾರಣವಾಗುತ್ತವೆ. ಇದರ ಜೊತೆಗೆ ವಿಶ್ವ ಆರ್ಥಿಕತೆಯ ಸ್ಥಿತಿ ಮತ್ತು ಜಾಗತಿಕ ಘಟನೆಗಳು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ.












Click it and Unblock the Notifications