ಚಿನ್ನ-ಬೆಳ್ಳಿ ಬೆಲೆ ಇಂದು ಮತ್ತೆ ಗಗನಮುಖಿ: ಕೇವಲ 12 ತಿಂಗಳಲ್ಲಿ ದಾಖಲೆಯ ಏರಿಕೆ, ಇಲ್ಲಿದೆ ವರದಿ
ಬೆಂಗಳೂರು: ಚಿನ್ನದ ದರವು ಇಂದು ಮತ್ತೆ ಹೆಚ್ಚಳ ಕಂಡಿದೆ. ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎನ್ನಲಾಗುತ್ತಿದೆ. ಒಂದು ವರ್ಷದ (2024 ಡಿಸೆಂಬರ್) ಹಿಂದಷ್ಟೇ ಕೈಗೆಟುಕುವ ಬೆಲೆಯಲ್ಲಿದ್ದ ಚಿನ್ನದ ದರ ಈ ವರ್ಷದ ಡಿಸೆಂಬರ್‌ಗೆ ಸುಮಾರು ಶೇಕಡಾ 74 ರಿಂದ 77ರಷ್ಟು ದಾಖಲೆಯ ಭರ್ಜರಿ ಏರಿಕೆ ಕಂಡಿದೆ. ಇದು ಒಂದು ದೇಶದಲ್ಲೇ ವರ್ಷದ ಅತ್ಯಧಿಕ ಗರಿಷ್ಠ ಏರಿಕೆಯಾಗಿದೆ. ಬಂಗಾರ, ಬೆಳ್ಳಿಯ ದಿಢೀರ್ ಏರಿಕೆ ಕಾರಣಕ್ಕೆ ಗ್ರಾಹಕರು ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಹೂಡಿಕೆ ದೃಷ್ಟಿಯಿಂದ ಚಿನ್ನಕ್ಕೆ ಬೇಡಿಕೆ ಮುಂದುವರಿದಿದೆ. ಇನ್ನೂ ಇಂದು (ಡಿ.24) ಒಂದೇ ದಿನಕ್ಕೆ ಕೆಜಿ ಬೆಳ್ಳಿ ದರ ಬರೋಬ್ಬರಿ 10,000 ರೂ. ಏರಿಕೆ ಕಂಡಿದೆ.
ಚಿನ್ನ ಮಾತ್ರವಲ್ಲದೇ ಬೆಳ್ಳಿ ಮೇಲಿನ ಹೂಡಿಕೆಯಿಂದ ಹೂಡಿಕೆದಾರರು ಅತ್ಯಧಿಕ ಲಾಭ ಕಾಣುತ್ತಿದ್ದಾರೆ. ವಿದೇಶಿ ಸುಂಕ ನೀತಿ, ಯುಎಸ್ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ. ಅಂತಾರಾಷ್ಟ್ರೀಯ ಯುದ್ಧಗಳು ಹಾಗೂ ಒಂದಷ್ಟು ಜಾಗತಿಕ ಬದಲಾವಣೆಗಳ ಕಾರಣದಿಂದ ಈ ಎರಡು ಲೋಹಗಳ ಬೆಲೆ ಹೆಚ್ಚಾಗುತ್ತಿದೆ. ಈ ಏರುಗತಿಯು ಸದ್ಯಕ್ಕೆ ಇಳಿಮುಖ ಕಾಣುವುದು ಅನುಮಾನ ಎನ್ನಲಾಗಿದೆ.

ಒಂದೇ ವರ್ಷದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ
ಇಂದಿನ ಚಿನ್ನ ಬೆಳ್ಳಿ ದರ ನೋಡಿದ ಗ್ರಾಹಕರು ವರ್ಷದ ಹಿಂದೆಯೇ ಖರೀದಿಸಬೇಕಿತ್ತು ಎಂದುಕೊಂಡರೆ, ಹೂಡಿಕೆದಾರರು 2024 ಡಿಸೆಂಬರ್ ಮುನ್ನವೇ ಹೂಡಿಕೆ ಮಾಡಿದ್ದರೆ ಅಧಿಕ ಲಾಭ ಪಡೆಯುತ್ತಿದ್ದೆವು ಎಂದು ಈಗ ಯೋಚಿಸುತ್ತಿದ್ದಾರೆ. ಅವರು ಹೀಗೆ ಹೇಳಲು ಕಾರಣವಿದೆ. ಏಕೆಂದರೆ ಕೇವಲ 12 ತಿಂಗಳಲ್ಲಿ (2024 ಡಿಸೆಂಬರ್ ಟು ಡಿಸೆಂಬರ್ 2025) ಚಿನ್ನದ ದರವು ಸುಮಾರು 74 ರಿಂದ 77ರಷ್ಟು ಭರ್ಜರಿ ಏರಿಕೆ ಕಂಡಿದೆ. ದೇಶದಲ್ಲೇ ಒಂದು ವರ್ಷದಲ್ಲಿ ಏರಿಕೆ ಆದ ಗರಿಷ್ಠ ಬೆಲೆ ಹೆಚ್ಚಾದ ಕೀರ್ತಿ ಈ ಲೋಹಕ್ಕೆ ಸೇರುತ್ತದೆ.
ಒಂದು ವರ್ಷದ ಹಿಂದೆ ಡಿಸೆಂಬರ್ 2024 ರಲ್ಲಿ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 70,400 ರೂ.ನಿಂದ 73,010 ರೂಪಾಯಿಗೆ ಸಿಗುತ್ತಿತ್ತು. ಆ ವರ್ಷ ಡಿಸೆಂಬರ್ 11 ಮತ್ತು 12 ರಂದು ಅತ್ಯಧಿಕ ಬೆಲೆ ದಾಖಲಾಗಿತ್ತು. ಅದೇ ವರ್ಷ 2024ರ ಡಿಸೆಂಬರ್ 20 ದರ ಮತ್ತೆ ಕುಸಿದಿತ್ತು. ಅದನ್ನು ಈ ವರ್ಷ 2025ರ ಡಿಸೆಂಬರ್‌ಗೆ ಹೋಲಿಸಿ ನೋಡಿದರೆ ಚಿನ್ನವು ಬೆಲೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಇತ್ತೀಚೆಗೆ ಬೆಳ್ಳಿ ದರವು ಹೆಚ್ಚಾಗುತ್ತಲೇ ಇದ್ದು, ಒಂದೇ ದಿನಕ್ಕೆ ಬೆಳ್ಳಿ ಒಂದು ಕೆಜಿಗೆ 5,000 ರಿಂದ 11,000 ರೂ.ವರೆಗೆ ಹೆಚ್ಚಾಗಿದ್ದು ಇದೆ. ಈ ವರ್ಷ ನಾ ಮುಂದೆ, ತಾ ಮುಂದು ಎಂಬಂತೆ ಚಿನ್ನ- ಬೆಳ್ಳಿ ದರಗಳು ಗಗನಕ್ಕೇರುತ್ತಿವೆ. ಇವತ್ತು ಸಹ (ಡಿ.24ಕ್ಕೆ) ಬೆಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ.
ಇಂದು ಕೆಜಿ ಬೆಳ್ಳಿ ದರ 10,000 ರೂ. ಏರಿಕೆ
ಗ್ರಾಹಕರು ಇಂದು ಬೆಳ್ಳಿಯ ದರದಲ್ಲಿ ಭಾರೀ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದಾರೆ. 100 ಗ್ರಾಂ ಬೆಳ್ಳಿಗೆ 1000 ರೂಪಾಯಿ ಹಾಗೂ ಒಂದು ಕೆಜಿ ಬೆಳ್ಳಿಗೆ 10,000 ರೂಪಾಯಿ ಏರಿಕೆ ಕಂಡಿದೆ. ಕ್ರಮವಾಗಿ ಇಂದು ಬೆಳ್ಳಿ ದರವು 23,300 ರೂಪಾಯಿ ಹಾಗೂ 2,33,000 ರೂಪಾಯಿ ತಲುಪಿದೆ. ಈ ಮೂಲಕ ಚಿನ್ನದ ರೀತಿಯಲ್ಲಿ ಬೆಳ್ಳಿಯು ಜನರಿಗೆ ನಿರಂತರ ಶಾಕ್ ನೀಡುತ್ತಿದೆ.
ಕ್ರಿಸ್ಮಸ್ ದಿನಕ್ಕೂ ಮುನ್ನ ಚಿನ್ನ-ಬೆಳ್ಳಿ ದರ ಅಪ್ಡೇಟ್ಸ್
ಇಂದು ಬುಧವಾರ (ಡಿಸೆಂಬರ್ 24) 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 350 ರೂ. ಹೆಚ್ಚಾಗಿದ್ದು 1,27, 350 ರೂ.ತಲುಪಿದೆ. 24 ಕ್ಯಾರಟ್ ಬಂಗಾರದ ದರ 380 ರೂಪಾಯಿ ಏರಿಕೆ ಆಗುವ ಮೂಲಕ ದರವು 1,38, 930 ರೂಪಾಯಿ ತಲುಪಿದೆ. ನಗರವಾರು ಇಂದಿನ ಬಂಗಾರದ ದರಪಟ್ಟಿ ಮುಂದಿದೆ.
22 ಕ್ಯಾರಟ್ 01 ಗ್ರಾಂನ ನಗರವಾರು ದರಪಟ್ಟಿ
ಬೆಂಗಳೂರು : 12,735
ಚೆನ್ನೈ : 12,800
ಮುಂಬೈ : 12,735
ದೆಹಲಿ : 12,750
ಕೊಲ್ಕತ್ತಾ : 12,735
ಹೈದರಾಬಾದ್ : 12,735
ಕೇರಳ : 12,735
ಪುಣೆ : 12,735
(ವಿಶೇಷ ಸೂಚನೆ: ನಗರದಿಂದ ನಗರಕ್ಕೆ ಹಾಗೂ ಮಳಿಗೆಯಿಂದ ಮಳಿಗೆಗೆ ವೇಸ್ಟೇಜ್, ಇತರ ಶುಲ್ಕ ಹಾಗೂ ಜಿಎಸ್‌ಟಿ ಸೇರಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕೊಂಚ ವ್ಯತ್ಯಾಸವಾಗುತ್ತದೆ)












Click it and Unblock the Notifications