Gold Rate: ಇಂದು ದಾಖಲೆ ಬರೆದ ಚಿನ್ನ-ಬೆಳ್ಳಿ ದರ! 13,910 ರೂ, ಬೆಳ್ಳಿ 1ಕೆಜಿಗೆ 20,000 ರೂ ಹೆಚ್ಚಳ

Silver Rate Today Bengaluru: ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ದೊಡ್ಡದೊಂದು ಆಘಾತಕಾರಿ ಬೆಳವಣಿಗೆ ಆಗಿದೆ. ಒಂದಷ್ಟು ಕಾರಣಗಳಿಂದ ಇಳಿಕೆ ಆಗುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ದರವು ಇಂದು ಬುಧವಾರ (ಮೇ 13) ದಾಖಲೆಯ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಂಡಿದೆ. 22 ಮತ್ತು 24ಕ್ಯಾರಟ್ ಚಿನ್ನದ ಬೆಲೆಯು ಗಗನಕ್ಕೇರಿದ್ದು, ಖರೀದಿಗೆ ಮುಂದಾಗಿದ್ದ ಗ್ರಾಹಕರು ಹಿಂದೆ ಸರಿಯುವಂತಾಗಿದೆ. ಹೀಗೆ ದಿಢೀರ್ ದರ ಏರಿಕೆಗೆ ಕಾರಣಗಳೇನು, ಬೆಂಗಳೂರು ಸೇರಿ ವಿವಿಧೆಡೆ ಇಂದಿನ ಚಿನ್ನ-ಬೆಳ್ಳಿ ದರ, ಅಪ್ಡೇಟ್ ಮಾಹಿತಿ ಇಲ್ಲಿದೆ.

ವಾರದಿಂದ ಇಳಿಕೆಯತ್ತ ಸಾಗಿದ್ದು ಚಿನ್ನದ ದರಗಳಲ್ಲಿ ಕಳೆದ ಎರಡು ದಿನಗಳಿಂದಕ ಕೊಂಚ ಏರಿಕೆ ಆಗಿತ್ತು. ಆದರೆ ಇಂದು ಬುಧವಾರ ಅತ್ಯಧಿಕ ಪ್ರಮಾಣದಲ್ಲಿ ಬೆಲೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಕೇವಲ 10 ಗ್ರಾಂ ಬೆಲೆಯು ಒಂದೇ ದಿನಕ್ಕೆ ಬರೋಬ್ಬರಿ 13,910 ರೂಪಾಯಿಗೆ ಹೆಚ್ಚಾಗಿದೆ. 1,67,890 ರೂಪಾಯಿ ತಲುಪಿ ದಾಖಲೆ ಬರೆದಿದೆ. ಇದೇ ಚಿನ್ನಕ್ಕೆ ನೆನ್ನೆ ಮಂಗಳವಾರ (ಮೇ 12) 153,980 ರೂಪಾಯಿಯಷ್ಟಿತ್ತು.

Gold and Silver Prices

ಗಗನಕ್ಕೇರಿದ 22k ಚಿನ್ನದ ಬೆಲೆ

ಚಿನ್ನಾಭರಣಕ್ಕೆ ಹೆಚ್ಚು ಉಪಯೋಗವಾಗುವ 22 ಕ್ಯಾರಟ್ ಬಂಗಾರದ 10 ಗ್ರಾಂ ದರವು ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 12,750 ರೂಪಾಯಿ ಏರಿಕೆ ಕಂಡು ದಾಖಲೆ ನಿರ್ಮಿಸಿದೆ. ಈ ಮೂಲಕ ಬೆಲೆ 153,900 ರೂಪಾಯಿಗೆ ಏರಿಕೆ ಕಂಡಿದ್ದು, ನೆನ್ನೆ ಮಂಗಳವಾರ ಇದರ ದರ 1,41,150 ರೂಪಾಯಿ ಇತ್ತು.

Gold Price: ಇಂದು ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ: ಒಂದೇ ದಿನಕ್ಕೆ ಬೆಳ್ಳಿ 15,000 ರೂ ಹೆಚ್ಚಳ
Gold Price: ಇಂದು ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ: ಒಂದೇ ದಿನಕ್ಕೆ ಬೆಳ್ಳಿ 15,000 ರೂ ಹೆಚ್ಚಳ

18 ಕ್ಯಾರಟ್ 10 ಗ್ರಾಂ ಚಿನ್ನದ ಮೌಲ್ಯವು ಇವತ್ತಿಗೆ 10,430 ರೂಪಾಯಿ ಹೆಚ್ಚಾಗಿದ್ದು, ಅದರ ಬೆಲೆಯು 1,25,920 ರೂಪಾಯಿಗೆ ಏರಿಕೆಯಾಗಿದೆ. ಒಂದು ದಿನದ ಹಿಂದೆ ಇದರ ಬೆಲೆ 1,15,490 ರೂಪಾಯಿಯಷ್ಟಿತ್ತು ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.

ಒಂದೇ ದಿನಕ್ಕೆ ಬೆಳ್ಳಿ ದರ 20,000 ರೂ ಹೆಚ್ಚಳ

ವಿವಿಧ ಕಾರಣಗಳಿಂದ ಇಳಿಕೆ ಕಂಡು, ಬಳಿಕ ಮೂರು ದಿನ ಯತಾಸ್ಥಿತಿಲ್ಲಿದ್ದ ಬಿಳಿ ಲೋಹ (ಬೆಳ್ಳಿ) ಕಳೆದ ಎರಡು ದಿನಗಳಿಂದ ತಕ್ಕ ಮಟ್ಟಿನ ಏರಿಕೆ ಆಗಿತ್ತು. 2.75 ಲಕ್ಷ ರೂಪಾಯಿ ಆಸುಪಾಸಿನಲ್ಲಿದ್ದ 1 ಕೆಜಿ ಬೆಳ್ಳಿಯು ಇಂದು ಒಂದೇ ದಿನಕ್ಕೆ 20,000 ರೂಪಾಯಿ ಹೆಚ್ಚಳ ಕಂಡು ಗ್ರಾಹಕರನ್ನು ನಿಬ್ಬೆರಗಾಗಿಸಿದೆ. ಸದ್ಯ ಬೆಳ್ಳಿ 1ಕೆಜಿಗೆ 3,10,000ರೂ ತಲುಪಿದೆ. ಚಿನ್ನದ ಬೆಲೆಯಂತೆ ಮೌಲ್ಯ ಹೆಚ್ಚಿಸಿಕೊಂಡಿದೆ. ನೆನ್ನೆ ಇದೇ ಒಂದು ಕೆಜಿ ಬೆಳ್ಳಿಯ ಬೆಲೆ 15,000 ರೂ. ಏರಿಕೆ ಆಗಿ 2,90,000 ಲಕ್ಷ ರೂಪಾಯಿ ಮುಟ್ಟಿತ್ತು.

ಬಂಗಾರ-ಬೆಳ್ಳಿ ದರ ಹೆಚ್ಚಳಕ್ಕೆ ಕಾರಣಗಳೇನು?

ಒಂದೇ ದಿನಕ್ಕೆ ಇಷ್ಟು ಪ್ರಮಾಣದಲ್ಲಿ ಚಿನ್ನದ ಬೆಲೆ ಹೆಚ್ಚಾಗಲು ಕೆಲವು ಕಾರಣಗಳಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಕೇಂದ್ರೀಯ ಬ್ಯಾಂಕ್‌ಗಳ ಚಿನ್ನ ಖರೀದಿ, ದರ ಇಳಿಕೆ ಆದಾಗ ಹೂಡಿಕೆ ಏರಿಕೆ ಹೆಚ್ಚಳವಾಗುವುದು ಸೇರಿ ಕೆಲವು ಕಾರಣಗಳಿಂದ ಚಿನ್ನ-ಬೆಳ್ಳಿಗೆ ಡಿಮ್ಯಾಂಡ್ ಬಂದಿದೆ. ಈ ಕಾರಣಕ್ಕೆ ಬೆಲೆ ಹೆಚ್ಚಾಗಿದೆ ಎನ್ನಲಾಗಿದೆ. ಇನ್ನೂ ಬೆಳ್ಳಿ ಉತ್ಪಾದನೆ, ಪೂರೈಕೆ ಕೊರತೆ ಹಾಗೂ ಕೈಗಾರಿಕೆ ವಲಯದಲ್ಲಿ ಹೆಚ್ಚಿನ ಬಳಕೆಯಿಂದ ಬಿಳಿ ಲೋಹದ ಮೌಲ್ಯ ಹೆಚ್ಚಾಗಿದೆ.

ಚಿನ್ನ-ಬೆಳ್ಳಿ ಆಮದು ಸುಂಕ ಹೆಚ್ಚಿಸಿದ ಕೇಂದ್ರ

ಬಂಗಾರ ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಬೆನ್ನಲ್ಲೇ, ಚಿನ್ನ ಮತ್ತು ಬೆಳ್ಳಿ ಖರೀದಿಗೆ ಕೇಂದ್ರ ಸರ್ಕಾರ ಅಂಕುಶ ಹಾಕಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.6 ರಿಂದ ಶೇ.15ಕ್ಕೆ ಹೆಚ್ಚಳ ಮಾಡಿದೆ. ಇದು ನೇರವಾಗಿ ಚಿನ್ನ-ಬೆಳ್ಳಿ ಆಮದಿನ ಮೇಲೆ ಪರಿಣಾಮ ಬೀರಲಿದೆ. ಇದರ ಬೆನ್ನಲ್ಲೇ ಇವತ್ತು ಚಿನ್ನದ ದರ ಪ್ರತಿ ಗ್ರಾಂಗೆ 1300 ರೂ. ಏರಿಕೆಯಾಗಿದೆ. ಈ ಮೂಲಕ ಕಠಿಣ ಪರಿಸ್ಥಿತಿಯಲ್ಲಿ ಭಾರತದ ಪರ ಕೇಂದ್ರ ಕಾಳಜಿ ವಹಿಸಿದೆ.

ನಗರವಾರು ಚಿನ್ನದ '24k ಮತ್ತು 22k' ಒಂದು ಗ್ರಾಂ ಬೆಲೆ ಪಟ್ಟಿ

ಬೆಂಗಳೂರು: 16,789 ರೂ. ಮತ್ತು 15,390 ರೂಪಾಯಿ

ಹೈದರಾಬಾದ್: 16,789 ರೂ. ಮತ್ತು 15,390 ರೂಪಾಯಿ

ಚೆನ್ನೈ: 16,800 ರೂ ಮತ್ತು 15,400 ರೂಪಾಯಿ

ಮುಂಬೈ: 16,789 ರೂ ಮತ್ತು 15,390 ರೂಪಾಯಿ

ದೆಹಲಿ: 16,804 ರೂ. ಮತ್ತು 15,405 ರೂಪಾಯಿ

ಕೊಲ್ಕತ್ತಾ: 16,789 ರೂ. ಮತ್ತು 15,390 ರೂಪಾಯಿ

ಕೇರಳ: 16,789 ರೂ. ಮತ್ತು 15,390 ರೂಪಾಯಿ

ಪುಣೆ: 16,789 ರೂ. ಮತ್ತು 15,390 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+