Gold Price on March 14: ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಚಿನ್ನದ ಬೆಲೆ!
Gold Price on March 14: ಚಿನ್ನದ ಬೆಲೆಯು ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಕಳೆದ ಆರು ತಿಂಗಳಿನಿಂದ ಚಿನ್ನದ ಬೆಲೆಯು ಹೆಚ್ಚಾಗುತ್ತಲ್ಲೇ ಇದೆ. ಇದೀಗ ಮಾರ್ಚ್‌ನಲ್ಲಿ ಚಿನ್ನದ ಬೆಲೆಯು ಹೊಸ ದಾಖಲೆಯನ್ನು ಬರೆದಿದ್ದು. ಚಿನ್ನ ಪ್ರಿಯರು ಬೆಲೆ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ. ಹೂಡಿಕೆಗಳಲ್ಲೇ ಈಗ ಬೆಸ್ಟ್ ಹೂಡಿಕೆ ಎಂದು ಉಳಿದಿರುವುದು ಚಿನ್ನದ ಬೆಲೆ ಮಾತ್ರ. ಕೇವಲ ಮೂರು ವರ್ಷಗಳ ಹಿಂದೆ 50,000ದಿಂದ 55,000 ಸಾವಿರ ರೂಪಾಯಿ ಆಗಿದ್ದ ಚಿನ್ನದ ಬೆಲೆಯು, ಇದೀಗ 30,000 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಮಾರ್ಚ್ 14ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.
ಡೊನಾಲ್ಡ್ ಟ್ರಂಪ್ ಉಪಟಳವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮನಸ್ಸಿಗೆ ಬಂದಂತೆ ವಿವಿಧ ವಸ್ತುಗಳ ಮೇಲೆ ಹಾಗೂ ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ ಅವರು ತೆರಿಗೆ ವಿಧಿಸುತ್ತಿದ್ದು. ಇದರಿಂದ ವಿಶ್ವದಾದ್ಯಂತ ಆರ್ಥಿಕತೆ ಏರುಪೇರಾಗುತ್ತಿದೆ. ಇದೀಗ ಭಾರತದ ವಸ್ತುಗಳ ಮೇಲೆ ಡೊನಾಲ್ಡ್ ಟ್ರಂಪ್ ಅವರು ಸುಂಕ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ನೀವು ಟ್ಯಾಕ್ಸ್ ಜಾಸ್ತಿ ಮಾಡಿದರೆ ನಾವೂ ಸಹ ಟ್ಯಾಕ್ಸ್ ಜಾಸ್ತಿ ಮಾಡುತ್ತೇವೆ ಎಂದು ಯುರೋಪ್ ಒಕ್ಕೂಟಗಳು ಸವಾಲು ಹಾಕಿವೆ. ಇದು ಸಹಜವಾಗಿಯೇ ವಿಶ್ವದಲ್ಲಿ ಟ್ಯಾಕ್ಸ್ ವಾರ್‌ಗೆ ಕಾರಣವಾಗಿದ್ದು. ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿದೆ.

ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಚಿನ್ನದ ಬೆಲೆಯಲ್ಲಿ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಯಾಗಿದೆ. ಚಿನ್ನದ ಬೆಲೆಯು ಬರೋಬ್ಬರಿ 90,000 ಸಾವಿರ ಗಡಿ ಮುಟ್ಟಿದೆ. ಈ ಮೂಲಕ ಈ ಹಿಂದೆ ಎಲ್ಲಾ ದಾಖಲೆಗಳು ಇದೀಗ ಉಡೀಸ್ ಆಗಿವೆ. ಇಲ್ಲಿಯ ವರೆಗೆ ಚಿನ್ನದ ಬೆಲೆಯು 80,000 ಮತ್ತು 85,000 ಸಾವಿರ ದಾಟಿದ್ದೇ ಹೊಸ ದಾಖಲೆಯಾಗಿತ್ತು. ಈಗ ಎಲ್ಲಾ ಹಳೆಯ ದಾಖಲೆಗಳನ್ನು ದಾಟಿ ಹೊಸ ದಾಖಲೆ ಬರೆದಿದೆ. ಮಾರ್ಚ್ 14ಕ್ಕೆ ಚಿನ್ನದ ಬೆಲೆಯು 89,780 ರೂಪಾಯಿ ಆಗಿದೆ.

ಮಾರ್ಚ್ 14ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ: ಮಾರ್ಚ್ 14ರ 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 8,230 ರೂಪಾಯಿ ಆಗಿದೆ. 10ಗ್ರಾಂ ಚಿನ್ನದ ಬೆಲೆಯು 82,300 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯ ಪ್ರತಿ ಗ್ರಾಂಗೆ 8,978 ರೂಪಾಯಿ ಆಗಿದೆ. 10ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 89,780 ರೂಪಾಯಿ ಆಗಿದೆ. ಒಟ್ಟಾರೆ ಚಿನ್ನದ ಬೆಲೆಯು ನೆನ್ನೆಗಿಂತ ಭರ್ಜರಿ ಬೆಲೆ ಏರಿಕೆಯಾಗಿದೆ. ಅಲ್ಲದೆ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಯಾಗಿದೆ.

ಬೆಳ್ಳಿಯ ಬೆಲೆ ಹೇಗಿದೆ: ಇನ್ನು ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 103 ರೂಪಾಯಿ ಆಗಿದೆ. ಪ್ರತಿ ಗ್ರಾಂಗೆ ಮಾರ್ಚ್ 13ಕ್ಕಿಂತ 2 ರೂಪಾಯಿ ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ಬೆಲೆಯು 1030 ರೂಪಾಯಿ ಆಗಿದೆ.
1 ಲಕ್ಷ ರೂಪಾಯಿ ಸನಿಹದಲ್ಲಿ ಚಿನ್ನ!
ಇನ್ನು ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ಸನಿಹಕ್ಕೆ ಬಂದು ನಿಂತಿದೆ. ವಿಶ್ವದಾದ್ಯಂತ ಬದಲಾಗುತ್ತಿರುವ ಆರ್ಥಿಕ ನೀತಿಯು ಚಿನ್ನದ ಮೇಲೆ ಪರಿಣಾಮ ಬೀರಿದೆ. ಇದೀಗ ಅಮೆರಿಕದ ವಿರುದ್ಧ ವಿವಿಧ ರಾಷ್ಟ್ರಗಳು ಒಂದಾಗುತ್ತಿದ್ದು. ಮುಂದಿನ ದಿನಗಳಲ್ಲಿ ಯುದ್ಧದ ಬದಲಾಗಿ ಯುದ್ಧಕ್ಕಿಂತ ಜನರಿಗೆ ನೇರವಾಗಿ ಪರಿಣಾಮ ಬೀರುವ ಟ್ಯಾಕ್ಸ್ ವಾರ್ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ಏನಾದರೂ ಆದರೆ ಚಿನ್ನ ಇನ್ನೊಂದು ತಿಂಗಳಿನಲ್ಲಿ 1 ಲಕ್ಷ ರೂಪಾಯಿ ತಲುಪಿದರೂ ಅಚ್ಚರಿ ಇಲ್ಲ.












Click it and Unblock the Notifications