Gold Price On Feb 4: ಒಂದೇ ದಿನದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ!

Gold Price On Feb 4: ಚಿನ್ನದ ಬೆಲೆ ಒಂದೇ ದಿನದಲ್ಲಿ ಮತ್ತೆ ಹೆಚ್ಚಳವಾಗಿದ್ದು. ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಶಾಕ್‌ ಎದುರಾಗಿದೆ. ಹೌದು ಸೋಮವಾರವಷ್ಟೇ ಚಿನ್ನದ ಬೆಲೆ ಇಳಿಕೆಯಾಗಿತ್ತು. ಇದರಿಂದ ಚಿನ್ನ ಪ್ರಿಯರು ಖುಷಿಯಾಗಿದ್ದರು.

ಇನ್ನೇನು ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ ಈಗಲೇ ಖರೀದಿ ಮಾಡಿಬಿಡಬೇಕು ಎನ್ನುವಾಗಲೇ ಚಿನ್ನದ ಬೆಲೆ ನೋಡಿ ಶಾಕ್‌ ಆಗುವಂತಾಗಿದೆ. ವಿಶ್ವದಲ್ಲಿ ಹೆಚ್ಚಾಗುತ್ತಿರುವ ಅಸ್ತಿರತೆ ಹಾಗೂ ಷೇರು ಮಾರುಕಟ್ಟೆಯಲ್ಲಿನ ಏರಿಳಿತ ಮುಂದುವರಿದಿರುವುದು ಬಂಗಾರದ ಬೆಲೆ ಹೆಚ್ಚಳವಾಗುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಫೆಬ್ರವರಿ 4ರ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ಎನ್ನುವ ವಿವರ ಇಲ್ಲಿದೆ.

Gold and Silver Prices Increase Hugely On February 4

ಬಂಗಾರ ಪ್ರಿಯರಿಗೆ ಹೊಸ ವರ್ಷ 2025ರಿಂದ ಶಾಕ್‌ ಮೇಲೆ ಶಾಕ್‌ ಎದುರಾಗುತ್ತಿದೆ. ಯಾಕೆಂದರೆ 2024ರ ಕೊನೆಯ ತಿಂಗಳುಗಳಲ್ಲಿ ಚಿನ್ನದ ಬೆಲೆಯು 70,000 ಸಾವಿರದಿಂದ 80,000 ಸಾವಿರ ರೂಪಾಯಿ ಒಳಗೇ ಇರುತ್ತಿತ್ತು. ಯಾವಾಗಬೇಕಾದರೂ ಚಿನ್ನದ ಬೆಲೆ ಹೆಚ್ಚಳವಾಗಬಹುದು ಎನ್ನುವ ಪರಿಸ್ಥಿತಿ ಇತ್ತು.

ಅದು 80,000 ಸಾವಿರ ಗಡಿ ಮುಟ್ಟಬಹುದು ಎಂದು ಹೇಳಲಾಗಿತ್ತು. ಆದರೆ ಕಳೆದ ವರ್ಷ ಚಿನ್ನದ ಬೆಲೆ ಹೆಚ್ಚಳವಾಗುತ್ತಿದ್ದರೂ, 80 ಸಾವಿರ ರೂಪಾಯಿ ಮುಟ್ಟಿರಲಿಲ್ಲ. ಆದರೆ ಇದೀಗ ಚಿನ್ನದ ಬೆಲೆಯು 80,000 ಸಾವಿರ ರೂಪಾಯಿ ಗಡಿದಾಟಿ 90,000 ಸಾವಿರ ರೂಪಾಯಿ ಸಮೀಪಕ್ಕೆ ಬಂದಿದೆ. ಇನ್ನು ನೆನ್ನೆಯಷ್ಟೇ (ಫೆಬ್ರವರಿ 4) ಚಿನ್ನದ ಬೆಲೆ ಇಳಿಕೆಯಾಗಿತ್ತು. ಈಗ ಮತ್ತೆ ಜಾಸ್ತಿ ಆಗಿದೆ.

Gold and Silver Prices Increase Hugely On February 4

ಫೆಬ್ರವರಿ 4ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ: ಫೆಬ್ರವರಿ 4ರ ಚಿನ್ನ ಮತ್ತು ಬೆಳ್ಳಿ ಬೆಲೆಯು ಚಿನ್ನ ಪ್ರಿಯರಿಗೆ ಶಾಕ್‌ ಕೊಟ್ಟಿದೆ. 24 ಕ್ಯಾರೇಟ್‌ ಚಿನ್ನದ ಬೆಲೆಯು ನೆನ್ನೆಗಿಂತ 11,500 ರೂಪಾಯಿ ಹೆಚ್ಚಳವಾಗಿದೆ. ಫೆಬ್ರವರಿ 3ರಂದು 24 ಕ್ಯಾರೇಟ್‌ ಚಿನ್ನದ ಬೆಲೆ 10 ಗ್ರಾಂಗೆ 84,050 ರೂಪಾಯಿ ಇದ್ದರೆ.

ಫೆಬ್ರವರಿ 4ಕ್ಕೆ 85,200 ರೂಪಾಯಿ ಆಗಿದೆ. ಫೆಬ್ರವರಿ 4ರ ಚಿನ್ನದ ಬೆಲೆ 22 ಕ್ಯಾರೇಟ್‌ ಚಿನ್ನದ ಬೆಲೆಯು 1 ಗ್ರಾಂಗೆ 7,810 ರೂಪಾಯಿ ಇದೆ. 10 ಗ್ರಾಂಗೆ 78,100 ರೂಪಾಯಿ ಆಗಿದೆ. 24 ಕ್ಯಾರೇಟ್‌ ಚಿನ್ನದ ಬೆಲೆಯು 1 ಗ್ರಾಂಗೆ 8,520 ರೂಪಾಯಿ ಆಗಿದೆ. 10 ಗ್ರಾಂಗೆ 85,200 ಸಾವಿರ ರೂಪಾಯಿ ಆಗಿದೆ.

ಅಮೆರಿಕದ ಟ್ಯಾಕ್ಸ್‌ ವಾರ್ ಆತಂಕ: ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಮುಖ್ಯ ಕಾರಣ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ಯಾಕ್ಸ್‌ ವಾರ್ ಸಹ ಒಂದು ಎಂದು ಹೇಳಲಾಗುತ್ತಿದೆ. ಅಮೆರಿಕ ವಿವಿಧ ದೇಶಗಳ ಮೇಲೆ ಮಿತಿ ಮೀರಿ ಟ್ಯಾಕ್ಸ್‌ ಹೇರುವುದಕ್ಕೆ ಶುರು ಮಾಡಿಕೊಂಡಿದೆ.

ಮೊದಲನೆಯದಾಗಿ ಮೆಕ್ಸಿಕೋ, ಚೀನಾ ಹಾಗೂ ಕೆನಡಾದ ಮೇಲೆ ಮಿತಿ ಮೀರಿದ ಟ್ಯಾಕ್ಸ್‌ ಹಾಕಿದೆ. ಇದರಿಂದ ಡಾಲರ್‌ಗೆ ಹೊಡೆತ ಬಿದ್ದಿದ್ದು. ಜನ ಹೂಡಿಕೆಗೆ ಚಿನ್ನದಂತಹ ಸುರಕ್ಷತಾ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹೀಗಾಗಿ ಚಿನ್ನದ ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.

1 ಲಕ್ಷ ಸಮೀಪಕ್ಕೆ ಬರ್ತಿದೆ ಚಿನ್ನದ ಬೆಲೆ: ಇನ್ನು ಚಿನ್ನದ ಬೆಲೆಯು 80,000 ಸಾವಿರ ಗಡಿ ದಾಟಿಯಾಗಿದೆ. ಮುಂದಿನ ದಿನಗಳಲ್ಲಿ 1 ಲಕ್ಷ ರೂಪಾಯಿ ಮುಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಈಗ ಚಿನ್ನದ ಮೇಲೆ ಹೂಡಿಕೆ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+