Gold Price on July 31: ತಿಂಗಳ ಕೊನೆಯ ದಿನ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ದರಪಟ್ಟಿ
ಬೆಂಗಳೂರು, ಜುಲೈ 31: ಚಿನ್ನ ಬೆಲೆಯು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಇಂದು ಗುರುವಾರ ಇಳಿಕೆ ಆಗಿದೆ. ನೆನ್ನೆಯಷ್ಟೆ ಭರ್ಜರಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಕುಸಿತವಾಗಿದೆ. ವರಮಹಾಲಕ್ಷ್ಮೀ ಹಬ್ಬದ ವೇಳೆ ನೀವೇನಾದರೂ ಚಿನ್ನ ಖರೀದಿಸುವವರಾಗಿದ್ದರೆ ದರ ಗಮನಿಸಿ ತನ್ನಿ. ಇಂದು ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧೆಡೆ ಎಷ್ಟಿದೆ ಚಿನ್ನ, ಬೆಳ್ಳಿ ದರ?, ಮಾಹಿತಿ ಪಟ್ಟಿ ಇಲ್ಲಿದೆ.
ಮದುವೆ ಸಮಾರಂಭಗಳು ಕಡಿಮೆ ಆಗಿದ್ದರೂ ಸಹಿತ ಚಿನ್ನಕ್ಕೆ ಬೇಡಿಕೆ ಇದ್ದೇ ಇದೆ. ವರಮಹಾಲಕ್ಷ್ಮೀ ಸೇರಿದಂತೆ ಗಣೇಶ ಚುತುರ್ಥಿ ಇನ್ನಿತರ ಹಬ್ಬಗಳ ಸ್ವಾಗತಕ್ಕೆ ಜನರು ಸಿದ್ಧವಾಗಿದ್ದು. ಹಬ್ಬದಂದು ಚಿನ್ನ ಖರೀದಿಸುವವರು ಚಿನ್ನಾಭರಣ ದರ ಕೇಳಿ ತಲೆ ತಿರುಗುವಂತಾಗಿದೆ. ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿ ದಾಟಿದೆ. ಇಂದು ಜುಲೈ 31ರಂದು ಜುಲೈ ಕೊನೆದಿನ ಚಿನ್ನದ ದರ 450 ರೂಪಾಯಿ ಕುಸಿತವಾಗಿದೆ.

ಜುಲೈ 30ರಂದು 24 ಕ್ಯಾರಟ್ ಚಿನ್ನದ 10 ಗ್ರಾಂ ದರವು ನೆನ್ನೆಗಿಂತ 450 ಇಳಿಕೆ ಆಗುವ ಮೂಲಕ ದರವು ಬರೋಬ್ಬರಿ 1,00,030 ರೂಗೆ ಇಳಿಕೆ ಆಗಿದೆ. ಅದೇ ರೀತಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 400 ರೂಪಾಯಿ ಇಳಿಕೆ ಆಗಿದ್ದು, 92,100 ರೂಪಾಯಿಯಿಂದ 91,700 ರೂ.ಗೆ ಇಳಿಕೆ ಆಗಿದೆ. ಇನ್ನು ಬೆಳ್ಳಿ ದರ ಗ್ರಾಂ 2 ರೂಪಾಯಿ ಯಂತೆ 10 ಗ್ರಾಂಗೆ 20ರೂಪಾಯಿ, 100 ಗ್ರಾಂಗೆ 200 ರೂಪಾಯಿ ಇಳಿಕೆ ಆಗಿದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ದರ ಪಟ್ಟಿ
22 ಕ್ಯಾರಟ್ನ 10 ಗ್ರಾಂ ಚಿನ್ನದ ದರ: 91,700 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,030 ರೂಪಾಯಿ
ಬೆಳ್ಳಿ ಬೆಲೆ 01 ಕೆ.ಜಗೆ : ₹1,15,000 ರೂಪಾಯಿ
ಇಂದಿನ 22 ಕ್ಯಾರಟ್ 10 ಗ್ರಾಂ ಚಿನ್ನದ ದರಪಟ್ಟಿ
* ದೆಹಲಿ: ₹90,484
* ಅಹಮದಾಬಾದ್: ₹90,759
* ಬೆಂಗಳೂರು: ₹90,700
* ಚೆನ್ನೈ: ₹90,906
* ಮುಂಬೈ: ₹90,640
* ಪುಣೆ: ₹90,640
* ಹೈದರಾಬಾದ್: ₹90,787
* ಕೋಲ್ಕತ್ತಾ: ₹90,521
ಇಂದಿನ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ವಿವರ
* ಬೆಂಗಳೂರು: ₹98,960
* ಹೈದರಾಬಾದ್: ₹99,040
* ಮುಂಬೈ: ₹98,880
* ದೆಹಲಿ: ₹98,710
* ಚೆನ್ನೈ: ₹99,170
* ಜೈಪುರ: ₹98,870
* ಲಕ್ನೋ: ₹98,910
* ಕೋಲ್ಕತ್ತಾ: ₹98,750
* ಅಹಮದಾಬಾದ್: ₹99,010












Click it and Unblock the Notifications