Gold Silver Price: ಬಂಗಾರದ ಬೆಲೆಯಲ್ಲಿ ಭಾರೀ ಹೆಚ್ಚಳ: ಹೋಳಿ ಹಬ್ಬಕ್ಕೆ ಚಿನ್ನ-ಬೆಳ್ಳಿ ದರ ಎಷ್ಟಿದೆ?
Gold Price on March 13th: ಜಾಗತಿಕವಾಗಿ ಉಂಟಾಗುವ ಒಂದಷ್ಟು ಬೆಳವಣಿಗೆಗಳು ಕೆಲವು ದೇಶಗಳ ಆರ್ಥಿಕತೆ, ಷೇರು ಮಾರುಕಟ್ಟೆ ಜೊತೆಗೆ ಚಿನ್ನಾಭರಣ ಬೆಲೆಗಳ ಮೇಲೂ ಪರಿಣಾಮ ಬೀರುತ್ತದೆ. ಒಂದೆರಡು ದಿನಗಳ ಕಾಲ ಇಳಿಕೆ ಆಗಿದ್ದ ಚಿನ್ನದ ದರದಲ್ಲಿ ಮತ್ತೆ ನಿರಂತರ ಏರಿಕೆ ಕಾಣುತ್ತಿದೆ. ನೆನ್ನೆ (ಮಾ.12) 45 ರೂ.ನಷ್ಟು ಏರಿಕೆ ಆಗಿದ್ದ ಚಿನ್ನದ ದರ ಇಂದು ಗುರುವಾರ 55 ರೂಪಾಯಿಗೆ ಹೆಚ್ಚಾಗಿದೆ. ಬೆಳ್ಳಿ ಬೆಲೆಯಲ್ಲೂ ಕೊಂಚ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯು 600 ರೂಪಾಗೆ ಹೆಚ್ಚಾಗಿದೆ. ನನ್ನೆ 87,980 ರೂಪಾಯಿ ಇದ್ದ ಬೆಲೆ ಇಂದು ರೂ. 88,580 ಗೆ ಏರಿಕೆ ಆಗಿದೆ. ಇದೇ 100 ಗ್ರಾಂ 6000 ರೂಪಾಯಿ ಹೆಚ್ಚಾಗಿದ್ದು, 8,85,800 ರೂಗೆ ಹೆಚ್ಚಾಗಿದೆ. ಆದರೆ ಚಿನ್ನಕ್ಕೆ ಬೇಡಿಕೆ ಮಾತ್ರ ಕಡಿಮೆ ಆಗುತ್ತಿಲ್ಲ. ಬೆಲೆ ಜೊತೆಗೆ ಬೇಡಿಕೆಯು ಹಾಗೆಯೇ ಇದೆ.

22 ಕ್ಯಾರಟ್ ಚಿನ್ನದ ದರದಲ್ಲೂ ಬದಲಾವಣೆ ಆಗಿದೆ. 10 ಗ್ರಾಂ ಬಂಗಾರಕ್ಕೆ ಬುಧವಾರ 81,200 ರೂಪಾಯಿ ಇತ್ತು, ಇಂದು 80,650 ರೂಪಾಯಿಗೆ ಹೆಚ್ಚಾಗಿದ್ದು, ಇಲ್ಲಿ 550 ರೂಪಾಯಿ ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು ಗ್ರಾಹಕರು 8,12,000 ರೂಪಾಯಿ ನೀಡಬೇಕಾಗುತ್ತದೆ. ಕೇಲವ ಒಂದು ದಿನದಲ್ಲಿ 5500 ರೂಪಾಯಿ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ ಪ್ರತಿ ಹತ್ತು ಗ್ರಾಂ ಬೆಳ್ಳಿ ಬೆಲೆ ಹಿಂದಿನ 24 ಗಂಟೆಗೆ ಹೋಲಿಸಿದರೆ 10 ರೂಪಾಯಿ ಏರಿಕೆ ಆಗಿದೆ. 100 ಗ್ರಾಂ ಬೆಳ್ಳಿಗೆ 10,000 ರೂಪಾಯಿ ಇದ್ದು, 100 ರೂ. ಹೆಚ್ಚಾಗಿದೆ. ಒಂದು ಕೆ.ಜಿ. ಬೆಳ್ಳಿ ಖರೀದಿ ಬೆಲೆ 1,01,000 ರೂಪಾಯಿ ಇದ್ದು, ಇದು ಕಳೆದ 24 ಗಂಟೆಯಲ್ಲಿ ಬರೋಬ್ಬರಿ 1,000 ರೂಪಾಯಿ ಹೆಚ್ಚಿಸಿಕೊಂಡಿದೆ.
ನಗರವಾರು ಚಿನ್ನದ ಬೆಲೆ ವಿವರ (22 ಕ್ಯಾರಟ್ 10 ಚಿನ್ನದ ದರ)
ಬೆಂಗಳೂರು: 81,200 ರೂಪಾಯಿ
ದೆಹಲಿ: 81,350 ರೂಪಾಯಿ
ಅಹ್ಮದಾಬಾದ್: 81,250 ರೂಪಾಯಿ
ಮುಂಬೈ: 81,200 ರೂಪಾಯಿ
ಚೆನ್ನೈ: 81,200 ರೂಪಾಯಿ
ಲಕ್ನೋ: 81,350 ರೂಪಾಯಿ
ಕೋಲ್ಕತಾ: 81,200 ರೂಪಾಯಿ
ಜೈಪುರ್: 81,350 ರೂಪಾಯಿ
ಕೇರಳ: 81,200 ರೂಪಾಯಿ
ಬೇರೆ ಬೇರೆ ದೇಶಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ವಿದೇಶಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನೋಡುವುದಾದರೆ, ದುಬೈನಲ್ಲಿ 77,510 ರೂಪಾಯಿ, ಸಿಂಗಾಪುರನಲ್ಲಿ 79,950 ರೂಪಾಯಿ, ಕಸೌದಿ ಅರೇಬಿಯಾನಲ್ಲಿ 77,760 ರೂಪಾಯಿ, ಕುವೇತ್ ನಲ್ಲಿ 76,090 ರೂಪಾಯಿ, ತಾರ್ನಲ್ಲಿ 78,810 ರೂಪಾಯಿ, ಮಲೇಷ್ಯಾದಲ್ಲಿ 80,600 ರೂಪಾಯಿ ಮತ್ತು ಓಮನ್ ನಲ್ಲಿ 78,350 ರೂಪಾಯಿ ಇದೆ.
ಚಿನ್ನದ ಬೆಲೆ ಒಂದು ಲಕ್ಷ ರೂ. ಏರಿಕೆ ಸಾಧ್ಯತೆ
ಚಿನ್ನದ ಬೆಲೆ ಮತ್ತು ಬೇಡಿಕೆ ಹೀಗೆ ಮುಂದವರಿದರೆ ಮಧ್ಯಮ ವರ್ಗದವರಿಗೆ ಚಿನ್ನ ಗಗನಕುಸುಮವಾಗಲಿದೆ. ಮೂಲಗಳ ಪ್ರಕಾರ, ಚಿನ್ನವು ಮುಂದಿನ ದಿನಗಳಲ್ಲಿ ಒಂದು ಲಕ್ಷ ರೂಪಾಯಿಗೆ ಏರಿಕೆ ಸಂಭವವಿದೆ ಇದೆ ಅಂತಲೂ ತಜ್ಞರು ಅಂದಾಜಿಸಿದ್ದಾರೆ. ಮದುವೆ, ಇನ್ನಿತರ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವವರು ಈಗಲೇ ಖರೀದಿಸಿದರೆ ಒಳಿತು ಎಂದು ಸಲಹೆ ನೀಡಿದ್ದಾರೆ.
ವಿಶೇಷ ಸೂಚನೆ ಎಂದರೆ, ನೀವು ಯಾವುದೇ ಭಾಗದಲ್ಲಿ ಚಿನ್ನ ಖರೀದಿಸಿದರೂ ಅಲ್ಲಿನ ವೇಸ್ಟೇಜ್ ಶುಲ್ಕ ಹಾಗೂ ಇತರೆ ಶುಲ್ಕ ಸೇರಿ ಒಟ್ಟು ಮೊತ್ತದಲ್ಲಿ ಕೊಂಚ ಬದಲಾವಣೆ ಆಗುತ್ತದೆ. ಇದನ್ನು ಗ್ರಾಹಕರು ಗಮನಿಸಬೇಕು.












Click it and Unblock the Notifications