Gold Price: ಚಿನ್ನದ ಬೆಲೆ 67,000 & ಬೆಳ್ಳಿ ಬೆಲೆ ಎಷ್ಟು?
ಚಿನ್ನ & ಬೆಳ್ಳಿ ಬೆಲೆ ಆಕಾಶ ಮುಟ್ಟುತ್ತಿದೆ ಎಂಬ ಮಾತುಗಳ ನಡುವೆ ಕಳೆದ ಒಂದು ತಿಂಗಳು ಚಿನ್ನ & ಬೆಳ್ಳಿ ಬೆಲೆ ನಿರಂತರವಾಗಿ ಕುಸಿತ ಕಂಡಿದೆ. ಹೀಗಿದ್ದಾಗ ಚಿನ್ನದ ಬೆಲೆ ಮತ್ತಷ್ಟು, ಇನ್ನಷ್ಟು ಕಡಿಮೆ ಆಗಬಹುದು ಅಂತಾ ಜನರು ಕಾಯುತ್ತಿದ್ದಾರೆ. ಯಾಕಂದ್ರೆ ಇನ್ನೇನು ಈಗ ಆಷಾಢ ಮುಗಿದು, ಶ್ರಾವಣ ಶುರುವಾದ ಸಮಯಕ್ಕೆ ಸಾಲು ಸಾಲು ಶುಭ ಸಮಾರಂಭಗಳು ಆರಂಭ ಆಗಲಿವೆ. ಹೀಗಾಗಿ ಚಿನ್ನ & ಬೆಳ್ಳಿ ಖರೀದಿ ಮಾಡಲು ಜನ ಕಾಯುತ್ತಿದ್ದರು. ಆದ್ರೆ ಜನರಿಗೆ ಈಗ ಗುಡ್ ನ್ಯೂಸ್ ಸಿಕ್ಕಿಲ್ಲ!
ಹೌದು, ಚಿನ್ನ & ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ ಆಗಬಹುದು. ಈ ಮೂಲಕ 60 ಸಾವಿರಕ್ಕು ಕಡಿಮೆ ಬೆಲೆಗೆ ಚಿನ್ನ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಜನ ಕಾಯುತ್ತಿದ್ದಾರೆ. ಈ ನಡುವೆ ಚಿನ್ನದ ಬೆಲೆ ಮಾತ್ರ ಅಷ್ಟು ಕುಸಿತ ಕಾಣುತ್ತಿಲ್ಲ. ಯಾಕಂದ್ರೆ ಚಿನ್ನ ಕುಸಿತ ಕಂಡ ತಕ್ಷಣ ಹೂಡಿಕೆ ಮಾಡುವವರು ಕೂಡ ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಚಿನ್ನದ ಬೆಲೆ ಒಂದು ದಿನ ಕುಸಿತ ಕಂಡರೆ, ಮತ್ತೊಂದು ದಿನ ಏರಿಕೆ ಕಾಣುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗೆ ಚಿನ್ನ ಖರೀದಿಗೆ ಕಾಯುತ್ತಿರುವ ಜನರಿಗೆ, ಇದೀಗ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನ ತಿಳಿಯಲು ಮುಂದೆ ಓದಿ.

ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ?
22 ಕ್ಯಾರೆಟ್ ಅಂದ್ರೆ ಆಭರಣ ಚಿನ್ನದ ಬೆಲೆ ಇದೀಗ 1 ಗ್ರಾಂಗೆ 6,700 ರೂಪಾಯಿ ಬೆಲೆ ಇದೆ. ಹಾಗೇ 10 ಗ್ರಾಂ ಚಿನ್ನಕ್ಕೆ 67,000 ರೂಪಾಯಿ ಬೆಲೆ ಇದೆ. 22 ಕ್ಯಾರೆಟ್‌ನ 100 ಗ್ರಾಂ ಚಿನ್ನ ಖರೀದಿ ಮಾಡಲು ಈಗ ಬರೋಬ್ಬರಿ 6,70,000 ರೂಪಾಯಿ ಕೊಡಬೇಕಿದೆ. ಹಾಗೇ ಇದರ ಜೊತೆಗೆ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 7,309 ರೂಪಾಯಿ ಇದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 73,090 ರೂಪಾಯಿ ಇದೆ. ಮತ್ತೊಂದು ಕಡೆ 18 ಕ್ಯಾರೆಟ್‌ನ 1 ಗ್ರಾಂ ಚಿನ್ನಕ್ಕೆ 5,482 ರೂಪಾಯಿ ಇದ್ದು, 18 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 54,820 ರೂಪಾಯಿ ಬೆಲೆ ಇದೆ. ಹಾಗಾದ್ರೆ ಈಗ ಬೆಳ್ಳಿ ಬೆಲೆ ಎಷ್ಟಿದೆ? ಮುಂದೆ ಓದಿ.
ಬೆಳ್ಳಿ ರೇಟ್ ಈಗ ಎಷ್ಟಿದೆ?
ಬೆಳ್ಳಿ ಬೆಲೆ ಇದೀಗ ಪ್ರತಿ ಕೆಜಿಗೆ 200 ರೂಪಾಯಿ ಏರಿಕೆ ಕಂಡಿದ್ದು, ಈ ಮೂಲಕ ಭರ್ಜರಿ 93,200 ರೂಪಾಯಿಗೆ ಪ್ರತಿ ಕೆಜಿ ರೀತಿ ಮಾರಾಟ ಆಗುತ್ತಿದೆ. ಹಾಗೇ ಬೆಳ್ಳಿ ಬೆಲೆ ಪ್ರತಿ 100 ಗ್ರಾಂಗೆ 9,320 ರೂಪಾಯಿಗೆ ಸಿಗುತ್ತಿದೆ. ಬೆಳ್ಳಿ ಬೆಲೆ ಕೂಡ ಈಗಾಗಲೇ 1,00,000 ರೂಪಾಯಿ ಗಡಿಯನ್ನ ದಾಟಿ ಮತ್ತೆ ಕುಸಿತ ಕಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಳ್ಳಿಯ ಬೆಲೆಯು ಕೂಡ ಏರಿಕೆ ಕಾಣುವ ನಿರೀಕ್ಷೆ ಇದೆ. ಹೂಡಿಕೆದಾರರಿಗೆ ಬೆಳ್ಳಿ ಕೂಡ ಹಾಟ್ ಕೇಕ್ ಆಗಿದೆ, ಯಾಕಂದ್ರೆ ಬೆಳ್ಳಿ ಮೇಲಿನ ಹೂಡಿಕೆ ಕೂಡ ಭಾರಿ ಲಾಭ ನೀಡುತ್ತಿದೆ.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು.












Click it and Unblock the Notifications