Gold Silver Price: ಚಿನ್ನದ ದರದಲ್ಲಿ ಭರ್ಜರಿ ₹6000 ಏರಿಕೆ, ₹90 ಸಾವಿರ ದಾಟೋದ್ಯಾವಾಗ?
ಬೆಂಗಳೂರು, ಜನವರಿ 17: ಚಿನ್ನದ ಬೆಲೆಯಲ್ಲಿ ಏರಿಕೆ ಮುಂದುವರಿದಿತ್ತು. ಆದರೆ ಇಂದು ಜನವರಿ 17ರಂದು ಬಂಗಾರದ ದರದಲ್ಲಿ ಭಾರೀ ಏರಿಕೆ ಆಗಿದೆ. ಬೇಡಿಕೆ ಹೆಚ್ಚಾಗುತ್ತಿರುವ ಇಂದಿನ ಸನ್ನಿವೇಶಗಳಲ್ಲಿ ಕೊಂಚ ಇಳಿಕೆ ಆಗುವ ಚಿನ್ನ-ಬೆಳ್ಳಿ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಸಾಗಿದೆ. ಮುಂದಿನ ಆರು ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ ಆಗುವ ಸಾಧ್ಯತೆ ಇದೆ. ಗರಿಷ್ಠ ದರಕ್ಕೆ ಬಂಗಾರ ಮಾರಾಟವಾಗುವ ಸಾಧ್ಯತೆ ಇದೆ. ಚಿನ್ನಾಭರಣ ಪ್ರಿಯರು ಇವತ್ತಿನ ಬೆಲೆ ನೋಡಿ ಹಣೆ ಮೇಲೆ ಕೈ ಇಟ್ಟುಕೊಂಡಿದ್ದಾರೆ.
ಅಪರಂಜಿ, 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದಲ್ಲೂ ಭಾರೀ ಹೆಚ್ಚಳವಾಗಿದೆ. ಕಳೆದ ಸುಮಾರು 14ತಿಂಗಳ ಹಿಂದಿನ ಚಿನ್ನದ ಬೆಲೆ ಹೋಲಿಕೆ ಮಾಡಿದರೆ ದರದಲ್ಲಿ 35%ರಷ್ಟು ಏರಿಕೆ ಆಗಿದೆ. ಬೆಳ್ಳಿಯ ದರವು ಇದೇ ರೀತಿ ಏರುಗತಿಯಲ್ಲಿ ಸಾಗಿದೆ. ವಿಚಿತ್ರವೆಂದರೆ ಇವುಗಳ ಬೇಡಿಕೆ ಸಹ ಗಗನಕ್ಕೇರುತ್ತಿದೆ.

ಚಿನ್ನದ ಬೆಲೆ ಎಷ್ಟೇ ಹೆಚ್ಚಾದರೂ ಸಹಿತ ಖರೀದಿ ಪ್ರಮಾಣ ಯಥಾಸ್ಥಿತಿಯಲ್ಲಿದೆ. ಸದ್ಯ 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ ಇಂದು 60 ರೂಪಾಯಿ, 10 ಗ್ರಾಂ ಚಿನ್ನಕ್ಕೆ 600 ರೂ. ಹೆಚ್ಚಾದರೆ, 100 ಗ್ರಾಂ ಅದೇ ಚಿನ್ನಕ್ಕೆ ಬರೋಬ್ಬರಿ ಒಂದೇ ದಿನದಲ್ಲಿ 6000 ರೂಪಾಯಿ ಏರಿಕೆ ಆಗಿದೆ. ಇದು ಗ್ರಾಹಕರ ಕೈ ಸುಡುತ್ತಿದೆ.
ಇನ್ನೂ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆಯು 65 ರೂಪಾಯಿ ಏರಿದೆ. 10 ಗ್ರಾಂ ಚಿನ್ನಕ್ಕೆ 650 ರೂ. ಹೆಚ್ಚಾದರೆ, 24 ಕ್ಯಾರಟ್ 100 ಗ್ರಾಂ ಬಂಗಾರಕ್ಕೆ ಒಂದೇ ದಿನಕ್ಕೆ ಬರೋಬ್ಬರಿ 6500 ರೂಪಾಯಿ ಹೆಚ್ಚಾಗಿದೆ. ಕಳೆದ ಕೆಲವೇ ದಿನಗಳಲ್ಲಿ ಇವತ್ತು ಹೆಚ್ಚಾದ ಬೆಲೆ ಏರಿಕೆ ಅತೀ ಗರಿಷ್ಟ ಎನ್ನಲಾಗುತ್ತಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಖರೀದಿಯ ಪ್ರಮಾಣವು 2024ರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ. ಕೇವಲ ಅಕ್ಟೋಬರ್ ತಿಂಗಳೊಂದರಲ್ಲೇ ಆರ್‌ಬಿಐ 27 ಟನ್ ಚಿನ್ನ ಖರೀದಿ ಮಾಡಿದೆ. 2024ರ ಅಕ್ಟೋಬರ್ ವರೆಗೆ RBI ಚಿಕ್ಕ ಖರೀದಿಸಿದ್ದು ಒಟ್ಟು 77 ಟನ್ ಎಂದು ವರದಿ ಆಗಿದೆ.

ಚಿನ್ನದ ಬೆಲೆ 90,000 ದಾಟುತ್ತಾ?
ಹೌದು ಚಿನ್ನಾಭರಗಳ ಬೆಲೆ ಹಾಗೂ ಬೇಡಿಕೆ ಗಗನಕ್ಕೇರುತ್ತಿದೆ. ಗ್ರಾಹಕರಲ್ಲಿ ಹೀಗೊಂದು ಪ್ರಶ್ನೆ ಮೂಡಿದೆ. ಇನ್ನೂ ಎಷ್ಟು ಪ್ರಮಾಣದಲ್ಲಿ ಚಿನ್ನ ದರ ಹೆಚ್ಚಾಗುತ್ತದೆ? ಇಳಿಕೆ ಯಾವಾಗ ಎನ್ನುತ್ತಿದ್ದಾರೆ. ಸದ್ಯಕ್ಕೆ ಚಿನ್ನದ ಬೆಲೆ ಇಳಿಕೆ ಆಗುವುದು ಅನುಮಾನ ಎನ್ನಲಾಗಿದೆ. ಮೂರು ಬಾರಿ ಸ್ವಲ್ಪ ಸ್ವಲ್ಪವೇ ಇಳಿಕೆ ಆದರೂ ಆರು ಸಲ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.
ಸದ್ಯ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 73,900 ರೂಪಾಯಿ ಇದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯು 80,620 ರೂಪಾಯಿ ಇದೆ. ಈಗಾಗಲೇ ದರ 80 ರೂಪಾಯಿ ಗಡಿ ದಾಟಿದೆ. ಬೇಡಿಕೆ ಹೀಗೆ ಸಾಗಿದರೆ, ಮುಂದಿನ ಐದಾರು ತಿಂಗಳಲ್ಲಿ ಚಿನ್ನದ ಬೆಲೆಯು 90 ಸಾವಿರ ರೂ. ಗಡಿ ದಾಟುವುದರಲ್ಲಿ ಅನುಮಾನ ಇಲ್ಲ ಎನ್ನಲಾಗಿದೆ.
ಭಾರತದ ನಗರವಾರು ಇಂದಿನ ಚಿನ್ನದ ದರ: (22 ಕ್ಯಾರಟ್: 10 ಗ್ರಾಂ)
ಬೆಂಗಳೂರು: 74,500 ರೂಪಾಯಿ
ಮುಂಬೈ: 74,500 ರೂಪಾಯಿ
ದೆಹಲಿ: 74,650 ರೂಪಾಯಿ
ಅಹ್ಮದಾಬಾದ್: 74,550 ರೂಪಾಯಿ
ಜೈಪುರ್: 74,650 ರೂಪಾಯಿ
ಭುವನೇಶ್ವರ್: 74,500 ರೂಪಾಯಿ
ಕೋಲ್ಕತಾ: 74,500 ರೂಪಾಯಿ
ಚೆನ್ನೈ: 74,500 ರೂಪಾಯಿ












Click it and Unblock the Notifications