Gold Silver Price: ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಚಿನ್ನದ ಬೆಲೆ ದಿಢೀರ್ ಇಳಿಕೆ: ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಏಪ್ರಿಲ್ 07: ಚಿನ್ನ ಅಂದ್ರೆ ಸಾಕು ಜನಸಾಮಾನ್ಯರು ಬೆಚ್ಚಿ ಬೀಳುವಂತಾಗಿದೆ. ಸದ್ಯ 10 ಗ್ರಾಮ್ ಚಿನ್ನದ ಬೆಲೆ 1 ಲಕ್ಷಕ್ಕೆ ಬಂದು ನಿಂತಿದೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಗಳು ಶೇಕಡಾ 40 ಕ್ಕಿಂತ ಹೆಚ್ಚು ಇಳಿಯುತ್ತವೆ ಮತ್ತು ಮಧ್ಯಮ ವರ್ಗದವರ ಕೈಗೆಟುಕುವ ಬೆಲೆಯಲ್ಲಿ ಚಿನ್ನ ಮತ್ತೆ ಲಭ್ಯವಾಗಲಿದೆ ಎಂದು ತಜ್ಞರು ಗುಡ್ ನ್ಯೂಸ್ ನೀಡಿದ್ದಾರೆ. ಕಳೆದ ಒಂದು ವರ್ಷದಲ್ಲಿಯೇ ಚಿನ್ನದ ಬೆಲೆ ಶೇ. 35 ರಿಂದ 40 ರಷ್ಟು ಏರಿಕೆಯಾಗಿದ್ದು, ಇಂದು ಚಿನ್ನದ ಬೆಲೆ ದಿಢೀರ್ ಇಳಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.
ಜಾಗತಿಕವಾಗಿ ಈಕ್ವಿಟಿ ಮಾರುಕಟ್ಟೆ ಸಖತ್ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿನ್ನ, ಬೆಳ್ಳಿಗಳಿಗೆ ಭಾರೀ ಬೇಡಿಕೆ ಇದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು (ಸೋಮವಾರ) ಗ್ರಾಮ್ಗೆ 25 ರೂನಷ್ಟು ಕಡಿಮೆಗೊಂಡಿದೆ. 8,310 ರೂ ಇದ್ದ 22 ಕ್ಯಾರಟ್ ಚಿನ್ನದ ಬೆಲೆ 8,285 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 90,380 ರುಪಾಯಿ ಆಗಿದೆ. ಭಾರತದಲ್ಲೂ ಇವತ್ತು ಸಂಜೆಯ ವೇಳೆಗೆ ಭರ್ಜರಿ ಬೆಲೆ ಏರಿಕೆ ಆಗುವ ನಿರೀಕ್ಷೆ ಇದೆ. ಹಾಗಾದರೇ ವಿವಿಧ ನಗರದಲ್ಲಿ ಏಪ್ರಿಲ್ 07 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ 7ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,850 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,380 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,790 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 940 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,850 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,380 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 940 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: 82,850 ರೂ
ಚೆನ್ನೈ: 82,850 ರೂ
ಮುಂಬೈ: 82,850 ರೂ
ದೆಹಲಿ: 83,000 ರೂ
ಕೋಲ್ಕತಾ: 82,850 ರೂ
ಕೇರಳ: 82,850 ರೂ
ಅಹ್ಮದಾಬಾದ್: 82,900 ರೂ
ಜೈಪುರ್: 83,000 ರೂ
ಲಕ್ನೋ: 83,000 ರೂ
ಭುವನೇಶ್ವರ್: 82,850 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 4,300 ರಿಂಗಿಟ್ (82,390 ರುಪಾಯಿ)
ದುಬೈ: 3,390 ಡಿರಾಮ್ (79,030 ರುಪಾಯಿ)
ಅಮೆರಿಕ: 920 ಡಾಲರ್ (78,750 ರುಪಾಯಿ)
ಸಿಂಗಾಪುರ: 1,276 ಸಿಂಗಾಪುರ್ ಡಾಲರ್ (81,080 ರುಪಾಯಿ)
ಕತಾರ್: 3,425 ಕತಾರಿ ರಿಯಾಲ್ (80,430 ರೂ)
ಸೌದಿ ಅರೇಬಿಯಾ: 3,460 ಸೌದಿ ರಿಯಾಲ್ (78,920 ರುಪಾಯಿ)
ಓಮನ್: 360.50 ಒಮಾನಿ ರಿಯಾಲ್ (80,160 ರುಪಾಯಿ)
ಕುವೇತ್: 279.90 ಕುವೇತಿ ದಿನಾರ್ (77,900 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,400 ರೂ
ಚೆನ್ನೈ: 10,300 ರೂ
ಮುಂಬೈ: 9,400 ರೂ
ದೆಹಲಿ: 9,400 ರೂ
ಕೋಲ್ಕತಾ: 9,400 ರೂ
ಕೇರಳ: 10,300 ರೂ
ಅಹ್ಮದಾಬಾದ್: 9,400 ರೂ
ಜೈಪುರ್: 9,400 ರೂ
ಲಕ್ನೋ: 9,400 ರೂ
ಭುವನೇಶ್ವರ್: 10,300 ರೂ












Click it and Unblock the Notifications