Gold Price on April 21: ದುಬಾರಿಯಾಯ್ತು ಚಿನ್ನ, ಬೆಳ್ಳಿ: ಇವತ್ತಿನ ಬಂಗಾರದ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು, ಏಪ್ರಿಲ್ 21: ಚಿನ್ನ ಅನ್ನೋದು ದಿನದಿಂದ ದಿನಕ್ಕೆ ಗಗನ ಕುಸುಮವಾಗುತ್ತಿದೆ. ಕಳೆದ 15 ದಿನಗಳಿಂದ ದೇಶದಲ್ಲಿ ಮದುವೆ ಸೀಸನ್ ಆರಂಭವಾಗಿದ್ದು, ಬೆಲೆ ಏರಿಕೆಯಾದ್ರೂ ಚಿನ್ನ ಖರೀದಿಯೂ ಅನಿವಾರ್ಯವಾಗಿದೆ. ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ದಾಖಲೆಯ ಏರಿಕೆ ಕಂಡಿದೆ. ಚಿನ್ನದ ಖರೀದಿಸುವ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.
ಚಿನ್ನದ ಬೆಲೆ ಏರಿಕೆ ಈ ವಾರವೂ ಮುಂದುವರಿದಿದೆ. ಚಿನ್ನದ ಜೊತೆಗೆ ಈ ಬಾರಿ ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಚಿನ್ನದ ಬೆಲೆ ಮೊದಲ ಬಾರಿಗೆ 9,000 ರೂ ಗಡಿ ದಾಟಿ ಹೋಗಿದೆ. ಅಪರಂಜಿ ಚಿನ್ನದ ಬೆಲೆಯೂ ಮೊದಲ ಬಾರಿಗೆ 9,800 ರೂ ಗಡಿ ದಾಟಿದೆ.ಇಂದು(ಸೋಮವಾರ) ಚಿನ್ನದ ಬೆಲೆ 70 ರೂಪಾಯಿ ನಷ್ಟು ಏರಿಕೆಯಾಗಿದ್ದು, ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 98,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಏಪ್ರಿಲ್ 21 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ 21 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,150 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,350 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,760 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,150 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,350 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 90,150 ರೂ
ಚೆನ್ನೈ: 90,150 ರೂ
ಮುಂಬೈ: 90,150 ರೂ
ದೆಹಲಿ: 90,300 ರೂ
ಕೋಲ್ಕತಾ: 90,150 ರೂ
ಕೇರಳ: 90,150 ರೂ
ಅಹ್ಮದಾಬಾದ್: 90,200 ರೂ
ಜೈಪುರ್: 90,300 ರೂ
ಲಕ್ನೋ: 90,300 ರೂ
ಭುವನೇಶ್ವರ್: 90,150 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 90,700 ರುಪಾಯಿ
ದುಬೈ: 86,080 ರುಪಾಯಿ
ಅಮೆರಿಕ: 1,005 ಡಾಲರ್ (85,600 ರುಪಾಯಿ)
ಸಿಂಗಾಪುರ: 89,770 ರುಪಾಯಿ
ಕತಾರ್: 87,260 ರೂಪಾಯಿ
ಸೌದಿ ಅರೇಬಿಯಾ 85,800 ರುಪಾಯಿ
ಓಮನ್: 87,150 ರುಪಾಯಿ
ಕುವೇತ್: 84,460 ರುಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 10,100 ರೂ
ಚೆನ್ನೈ: 11,100 ರೂ
ಮುಂಬೈ: 10,100 ರೂ
ದೆಹಲಿ: 10,100 ರೂ
ಕೋಲ್ಕತಾ: 10,100 ರೂ
ಕೇರಳ: 11,100 ರೂ
ಅಹ್ಮದಾಬಾದ್: 10,100 ರೂ
ಜೈಪುರ್: 10,100 ರೂ
ಲಕ್ನೋ: 10,100 ರೂ
ಭುವನೇಶ್ವರ್: 11,100 ರೂ












Click it and Unblock the Notifications