Gold Silver Price: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ: ಇಂದಿನ ದರ ಪಟ್ಟಿ ಇಲ್ಲಿದೆ
ಬೆಂಗಳೂರು: ಕಳೆದೊಂದು ವಾರದಿಂದ ನಿರಂತರ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆ ಶುಕ್ರವಾರದಂದು ಏಕಾಏಕಿ ಕುಸಿತ ಕಂಡು ಗ್ರಾಹಕರಿಗೆ ಕೊಂಚ ಸಮಾಧಾನ ನೀಡಿತ್ತು. ಆದರೆ ಈ ನೆಮ್ಮದಿ ಹೆಚ್ಚು ಕಾಲ ಉಳಿಯಲಿಲ್ಲ. ಇಂದು (ಆಗಸ್ಟ್ 15) ಶನಿವಾರ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಹಾಗೂ ಆಭರಣ ಖರೀದಿದಾರಿಗೆ ಮತ್ತೆ ಬೇಸರವಾಗಿದೆ.
ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆಯಾಗುತ್ತಲೇ ಬಂದಿತ್ತು. ಜೂನ್ 5ರ ಬಳಿಕ ದಾಖಲಾದ ಪ್ರಮುಖ ಏರಿಕೆಯೊಂದಿಗೆ ಚಿನ್ನದ ಬೆಲೆ ಜೂನ್ ತಿಂಗಳ ಗರಿಷ್ಠ ಮಟ್ಟದ ಸಮೀಪಕ್ಕೆ ತಲುಪಿತ್ತು. ಜೂನ್ 5ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು ₹14,275 ಇತ್ತು. ಬಳಿಕ ದರದಲ್ಲಿ ಇಳಿಕೆ ಕಂಡುಬಂದು, ಜುಲೈ 1ರಂದು ಪ್ರತಿ ಗ್ರಾಂಗೆ ₹12,905 ರಷ್ಟು ಕನಿಷ್ಠ ಮಟ್ಟಕ್ಕೆ ತಲುಪಿತ್ತು.

ಇದಾದ ಬಳಿಕ ಚಿನ್ನದ ಬೆಲೆ ಹಂತ ಹಂತವಾಗಿ ಚೇತರಿಕೆ ಕಂಡಿತು. ಈ ವಾರ ದರ ಮತ್ತೆ ಜೂನ್ ತಿಂಗಳ ಬೆಲೆಯ ಸಮೀಪಕ್ಕೆ ತಲುಪಿತ್ತು. ಶುಕ್ರವಾರ ದರದಲ್ಲಿ ಏಕಾಏಕಿ ಇಳಿಕೆಯಾಗಿದ್ದರಿಂದ ಚಿನ್ನ ಖರೀದಿಸಲು ಎದುರು ನೋಡುತ್ತಿದ್ದ ಗ್ರಾಹಕರಿಗೆ ಕೊಂಚ ನಿರಾಳತೆ ಸಿಕ್ಕಿತ್ತು. ಆಗಸ್ಟ್ ತಿಂಗಳನ ಆರಂಭದಲ್ಲಿ ಕೊಚ್ಚ ಕಡಿಮೆಯಾಗಿದ್ದ ಚಿನ್ನದ ಬೆಲೆ ಇದೀಗ ಮತ್ತೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇದೀಗ ಇಂದಿನ ವಹಿವಾಟಿನಲ್ಲಿ ಮತ್ತೆ ಬೆಲೆ ಏರಿಕೆಯಾಗಿದೆ.
ಅಮೆರಿಕದ ಆರ್ಥಿಕತೆಯ ಬೆಳವಣಿಗೆಗಳು, ಬಡ್ಡಿದರ ಕುರಿತ ನಿರೀಕ್ಷೆಗಳು ಹಾಗೂ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಪರಿಸ್ಥಿತಿ ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿವೆ. ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಕದನವಿರಾಮದ ಮಾತುಕತೆಗಳು ಸ್ಥಗಿತಗೊಂಡಿರುವುದು ಸೇರಿದಂತೆ ಹಲವು ಜಾಗತಿಕ ಬೆಳವಣಿಗೆಗಳನ್ನು ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜಾಗತಿಕ ಅನಿಶ್ಚಿತತೆ ಹೆಚ್ಚಾದಾಗ ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಪರಿಗಣಿಸುತ್ತಾರೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ ದೇಶೀಯ ಮಾರುಕಟ್ಟೆಯಲ್ಲೂ ದರ ಏರಿಕೆಯಾಗುವ ಸಾಧ್ಯತೆ ಇರುತ್ತದೆ.
24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
ಆಗಸ್ಟ್ 15ರಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹71ರಷ್ಟು ಏರಿಕೆಯಾಗಿದೆ . ಇದರೊಂದಿಗೆ 10 ಗ್ರಾಂ ಚಿನ್ನದ ಬೆಲೆ ₹1,55,130 ಕ್ಕೆ ತಲುಪಿದೆ. ಅದೇ ರೀತಿ ಆಭರಣ ತಯಾರಿಕೆಯಲ್ಲಿ ಸಾಮಾನ್ಯವಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹65ರಷ್ಟು ಏರಿಕೆಯಾಗಿದೆ . 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇದೀಗ ₹1,42,200 ಕ್ಕೆ ತಲುಪಿದೆ.
ವಿವಿಧ ನಗರಗಳಲ್ಲಿ ಚಿನ್ನದ ದರ
ಬೆಂಗಳೂರು:
24 ಕ್ಯಾರೆಟ್:₹15,528 ಪ್ರತಿ ಗ್ರಾಂ (+₹71)
22 ಕ್ಯಾರೆಟ್: ₹14,235 ಪ್ರತಿ ಗ್ರಾಂ(+₹65)
ಮುಂಬೈ:
24 ಕ್ಯಾರೆಟ್:₹15,513 ಪ್ರತಿ ಗ್ರಾಂ (+₹71)
22 ಕ್ಯಾರೆಟ್:₹14,220 ಪ್ರತಿ ಗ್ರಾಂ(+₹65)
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ ಎಷ್ಟು?
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ:15,528 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,220 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,467 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: 14,220 ರೂ
ಚೆನ್ನೈ: 14,220 ರೂ
ಮುಂಬೈ: 14,220 ರೂ
ದೆಹಲಿ: 14,200 ರೂ
ಕೋಲ್ಕತಾ: 14,200 ರೂ
ಕೇರಳ: 14,200 ರೂ
ಅಹ್ಮದಾಬಾದ್: 14,200 ರೂ
ಜೈಪುರ್: 14,200 ರೂ
ಲಕ್ನೋ: 14,200 ರೂ
ಭುವನೇಶ್ವರ್: 14,200 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು?
ಬೆಂಗಳೂರು: 255 ರೂ
ಚೆನ್ನೈ: 260 ರೂ
ಮುಂಬೈ: 255 ರೂ
ದೆಹಲಿ: 255 ರೂ
ಕೋಲ್ಕತಾ: 255 ರೂ
ಕೇರಳ: 260 ರೂ
ಅಹ್ಮದಾಬಾದ್: 255 ರೂ
ಜೈಪುರ್: 255 ರೂ
ಲಕ್ನೋ: 255 ರೂ
ಭುವನೇಶ್ವರ್: 260 ರೂ
ಪುಣೆ: 255


Click it and Unblock the Notifications
